-ಕೆಲಸವಾದ್ರೆ ಎದ್ದು ನಿಂತು ಚಪ್ಪಾಳೆ ತಟ್ತೀನಿ
ನವದೆಹಲಿ: ಉದ್ಯಮಿ ಆನಂದ್ ಮಹೀಂದ್ರ ಕೇಂದ್ರ ರಾಜ್ಯ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಿದ್ದು, ಕೆಲಸ ಪೂರ್ಣಗೊಂಡರೆ ಎದ್ದು ನಿಂತು ಚಪ್ಪಾಳೆ ತಟ್ಟೋದಾಗಿ ಹೇಳಿದ್ದಾರೆ.
ನಾರ್ವೆಯ ಎರಿಕ್ ಸೊಲ್ಹಿಮ್ ಟ್ವೀಟ್ ರೀ ಟ್ವೀಟ್ ಮಾಡಿಕೊಂಡಿರುವ ಆನಂದ್ ಮಹೀಂದ್ರಾ, ಇದರಲ್ಲಿ ನೆದರ್ಲ್ಯಾಂಡ್ ನ ವೈಲ್ಡ್ಲೈಫ್ ಬ್ರಿಡ್ಜ್ ಇದೆ. ಈ ಸೇತುವೆಗೆ ಇಕೊಡಕ್ಟ್ ಎಂದು ಹೆಸರಿಡಲಾಗಿದೆ. ದಟ್ಟಾರಣ್ಯದಲ್ಲಿ ಹೆದ್ದಾರಿ ನಿರ್ಮಿಸಲಾಗಿದ್ದು, ಪ್ರಾಣಿಗಳಿಗೆ ತೊಂದರೆಯಾಗದಂತೆ ಸೇತುವೆ ಸಹ ನಿರ್ಮಿಸಲಾಗಿದೆ. ಈ ಸೇತುವೆ ಮೂಲಕ ಪ್ರಾಣಿಗಳು ಸಂಚರಿಸುವುದರಿಂದ ಅವುಗಳ ಪ್ರಾಣಕ್ಕೆ ಅಪಾಯ ಇರಲ್ಲ. ಅಭಿವೃದ್ಧಿಯ ಜೊತೆಗೆ ಜೀವ ಸಂಕುಲ ಉಳಿಸಬಹುದು.
Advertisement
The perfect way to coexist. @nitin_gadkari ji if you can make this a standard feature when building highways through particular zones, we will give you a standing ovation! https://t.co/vEN0FeIcLN
— anand mahindra (@anandmahindra) August 29, 2020
Advertisement
ನಿತಿನ್ ಗಡ್ಕರಿ ಅವರೇ, ನೀವು ಇಂತಹ ಹೆದ್ದಾರಿಗಳನ್ನು ನಿರ್ಮಿಸಿದ್ರೆ ಎದ್ದು ನಿಂತು ಚಪ್ಪಾಳೆ ತಟ್ಟುತ್ತೇನೆ ಎಂದು ಆನಂದ್ ಮಹೀಂದ್ರ ಬರೆದುಕೊಂಡಿದ್ದಾರೆ. ಆನಂದ್ ಮಹೀಂದ್ರಾ ಟ್ವೀಟ್ ಗೆ ನಿತಿನ್ ಗಡ್ಕರಿ ಪ್ರತಿಕ್ರಿಯಿಸಿ, ಸಲಹೆಯನ್ನು ಸ್ವಾಗತಿಸಿದ್ದಾರೆ.
Advertisement
Thank you for your suggestion @anandmahindra ji. Yes, we need to look at similar innovations. Ecological balance has to be maintained. pic.twitter.com/S4X8OQvI1m
— Nitin Gadkari (@nitin_gadkari) August 29, 2020
Advertisement
ನಾವು ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಸಿಯೋನಿ (ಮಧ್ಯ ಪ್ರದೇಶ) ಮತ್ತು ನಾಗಪುರ (ಮಹಾರಾಷ್ಟ್ರ) ನಡುವೆ ಎನಿಮಲ್ ಕಾರಿಡಾರ್ ನಿರ್ಮಿಸಿದ್ದೇವೆ. ಈ ಹೆದ್ದಾರಿಯ ನಿರ್ಮಾಣದ ಪ್ರತಿಫಲವೂ ಸಹ ಲಭ್ಯವಾಗಿದೆ. ಮುಂದೆ ಸಹ ಮನುಷ್ಯ ಮತ್ತು ಪ್ರಾಣಿಗಳ ಜೊತೆ ಶಾಂತಿಯುತ ಸಹಬಾಳ್ವೆ ನಡೆಸಲು ಮುಂದಾಗೋಣ ಎಂದು ನಿತಿನ್ ಗಡ್ಕರಿ ಬರೆದುಕೊಂಡು ಹೆದ್ದಾರಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.