ಸಾಮಾನ್ಯವಾಗಿ ವಾತಾವರಣದಲ್ಲ ಆಗುವ ಏರುಪೇರಿನಿಂದಾಗಿ, ಕೆಮ್ಮು ಮತ್ತು ಶೀತ ಬರುವುದು ಸಹಜವಾಗಿದೆ. ಕೆಮ್ಮು ಎಂದು ಮಾತ್ರೆಗಳ ಮೊರೆ ಹೋಗುವ ಮೊದಲು ನೈಸರ್ಗಿಕ ಚಿಕಿತ್ಸೆಯೇ ಉತ್ತಮವಾಗಿದೆ. ಹೀಗಾಗಿ ಈ ಮನೆಮದ್ದುಗಳನ್ನು ಒಮ್ಮೆ ಉಪಯೋಗಿಸಿ.
Advertisement
* ಟೀ ಸ್ಪೂನ್ ಜೇನುತುಪ್ಪ, ಟೀ ಸ್ಪೂನ್ ಆಲಿವ್ ಆಯಿಲ್ ಮತ್ತು 3 ನಿಂಬೆ ಹಣ್ಣಿನ ರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕಡಿಮೆ ಉರಿಯಲ್ಲಿ ಬಿಸಿ ಮಾಡಿ. ಕೆಳಗಿಳಿಸಿ. ಅದನ್ನು ತಣ್ಣಗಾಗಲು ಬಿಡಿ. ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿ. ಕೆಮ್ಮು ಬಂದಾಗ ಈ ಸಿರಪ್ ಸೇವನೆ ಸಹಾಯ ಮಾಡುತ್ತದೆ. ನಿಂಬೆ ಮತ್ತು ಜೇನುತುಪ್ಪವು ಗಂಟಲಿನ ಸೋಂಕನ್ನು ಶಮನಗೊಳಿಸುತ್ತದೆ ಮತ್ತು ಜೇನುತುಪ್ಪವು ಕೆಮ್ಮಿನಿಂದ ಪರಿಹಾರವನ್ನು ನೀಡುತ್ತದೆ. ಜೇನುತುಪ್ಪದಿಂದ ಉತ್ತಮ ನಿದ್ರೆ ಸಹ ಬರುತ್ತದೆ. ಆಲಿವ್ ಎಣ್ಣೆ ಗಂಟಲಿನಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ.
Advertisement
Advertisement
* ಸ್ವಲ್ಪ ಜೇನುತುಪ್ಪದೊಂದಿಗೆ ನಿಂಬೆ ರಸವನ್ನು ಮಿಶ್ರಣ ಮಾಡಿ. ಒಂದು ಚಿಟಿಕೆ ಕೇನ್ ಪೆಪ್ಪರ್ ಸೇರಿಸಿ. ಕೆಮ್ಮು ನಿವಾರಣೆಗೆ ಇದನ್ನು ನುಂಗಿ. ಜೇನುತುಪ್ಪವು ಗಂಟಲು ನೋವಿಗೆ ಚಿಕಿತ್ಸೆ ನೀಡುತ್ತದೆ . ಕೆಲವು ಸಂಶೋಧನೆಗಳ ಪ್ರಕಾರ, ಜೇನುತುಪ್ಪವು ಕೆಮ್ಮನ್ನು ನಿವಾರಿಸುತ್ತದೆ ಮತ್ತು ನಿಂಬೆ ಉರಿಯೂತವನ್ನು ಕಡಿಮೆ ಮಾಡುತ್ತದೆ. ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
Advertisement
* ನಿಮ್ಮ ಗಂಟಲು ತೆರವುಗೊಳಿಸಲು ಪ್ರತಿದಿನ ಎರಡು ಬಾರಿ ಅರ್ಧ ಟೀ ಚಮಚ ಅರಿಶಿನದೊಂದಿಗೆ ಒಂದು ಲೋಟ ಹಾಲು ಕುಡಿಯಬೇಕು ಆಗ ಕೆಮ್ಮೆ ಕಡಿಮೆಯಾಗುತ್ತದೆ.
* ಅರ್ಧ ಗ್ಲಾಸ್ ನೀರಿಗೆ ಟೀ ಸ್ಪೂನ್ ಜೇನುತುಪ್ಪ, 1 ಟೀ ಸ್ಪೂನ್ ದಾಲ್ಚಿನ್ನಿ ಪುಡಿ ಸೇರಿಸಿ, ಚೆನ್ನಾಗಿ ಮಿಶ್ರಮಾಡಿ ಪ್ರತಿ ದಿನ ಬೆಳಿಗ್ಗೆ ಎರಡು ಬಾರಿ ಈ ಮಿಶ್ರಣವನ್ನು ಸೇವಿಸಬೇಕು.
* ಅರ್ಧ ಟೀ ಚಮಚ ಶುಂಠಿ ಪುಡಿ. ಒಂದು ಚಿಟಕಿ ದಾಲ್ಚಿನ್ನಿ. 1-2 ಲವಂಗವನ್ನು ನೀರಿಗೆ ಹಾಕಿ ಮಸಾಲೆ ಟೀ ಮಾಡಿ ಕುಡಿಯುವುದರಿಂದ ಕಫ್ ನಿಧಾನವಾಗಿ ಕಡಿಮೆಯಾಗುತ್ತದೆ.
* ಈರುಳ್ಳಿಯ ರಸವನ್ನು ಬಿಸಿ ಮಾಡಿಕೊಂಡು ಇದಕ್ಕೆ, ಬೆಳ್ಳುಳ್ಳಿಯ ಒ0ದೆರಡು ದಳವನ್ನು ಜಜ್ಜಿ ಸೇರಿಸಿಕೊಂಡು ಈ ಮಿಶ್ರಣವನ್ನು ಒಂದು ದೊಡ್ಡ ಗ್ಲಾಸ್ನಷ್ಟು ಉಗುರು ಬೆಚ್ಚಗಿನ ಬಿಸಿನೀರಿಗೆ ಸೇರಿಸಿ ಹಾಗೂ ಒಂದು ಟೇಬಲ್ ಚಮಚದಷ್ಟು ಜೇನುತುಪ್ಪವನ್ನು ಸೇರಿಸಿ ಕುಡಿಯುತ್ತಾ ಬಂದರೆ ಕೆಮ್ಮಿನ ಸಮಸ್ಯೆ ಕೂಡಲೇ ಕಡಿಮೆಯಾಗುತ್ತಾ ಬರುತ್ತದೆ.