– ನೆಟ್ಟಿಗರಿಗೆ ಆಹಾರವಾದ ರೂಡಿ
ವಾಷಿಂಗ್ಟನ್: ಪತ್ರಿಕಾಗೋಷ್ಠಿ ವೇಳೆ ಇಳಿದ ಬೆವರಿನಿಂದ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಕೀಲ ಫುಲ್ ಟ್ರೋಲ್ ಆದ ಘಟನೆ ನಡೆದಿದೆ.
It appears that Rudy Giuliani is sweating through his hair dye. pic.twitter.com/OY3dGL1BtX
— The Recount (@therecount) November 19, 2020
Advertisement
ಹೌದು. ಟ್ರಂಪ್ ಅವರ ಖಾಸಗಿ ವಕೀಲ ರೂಡಿ ಗಿಯುಲಿಯಾನಿ(76) ಅವರು ಸುದ್ದಿಗೋಷ್ಠಿ ಕರೆದಿದ್ದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದಂತೆಯೇ ಅವರು ತೀವ್ರ ಮುಜುಗರಕ್ಕೆ ಒಳಗಾಗುವ ಸಂದರ್ಭ ಎದುರಿಸಬೇಕಾಯಿತು. ಪ್ರೆಸ್ ಕಾನ್ಫರೆನ್ಸ್ ನಿಂದ ಎದ್ದು ಹೋಗಲೂ ಸಾಧ್ಯವಾಗದೆ ಇಕ್ಕಟ್ಟಿಗೆ ಸಿಲುಕುವಂತಾಯಿತು.
Advertisement
I see Rudy Giuliani is having a meltdown. Literally.#SurrenderDorothy pic.twitter.com/ZtYMtIyBIX
— Richard Littler (@richard_littler) November 19, 2020
Advertisement
ರೂಡಿ ಅವರು 2020ರ ಅಧ್ಯಕ್ಷೀಯ ಚುನಾವಣೆಗೆ ನಡೆದ ಮತದಾನ ಹಾಗೂ ಎಣಿಕೆಯಲ್ಲಿ ವಂಚನೆ ನಡೆದಿದೆ ಎಂದು ಗಂಭೀರ ಆರೋಪ ಮಾಡುತ್ತಿದ್ದರು. ಈ ಮಧ್ಯೆ ಗೋಷ್ಠಿಯಲ್ಲಿ ಹಾಜರಿದ್ದವರ ದೃಷ್ಠಿ ರೂಡಿ ಬೆವರಿನ ಮೇಲೆ ನೆಟ್ಟಿತ್ತು. ರೂಡಿ ಕೆನ್ನಯ ಮೇಲೆ ಹೇರ್ ಡೈ ಮಿಶ್ರಿತ ಬೆವರು ಸುರಿಯಲಾರಂಭಿಸಿತ್ತು. ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆಯೇ ರೂಡಿ ಪದೇ ಪದೇ ಮುಖವನ್ನು ಒರೆಸಿಕೊಂಡಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಅಲ್ಲದೆ ಹಲವಾರು ಮೀಮ್ಸ್ ಗಳು ಹುಟ್ಟಿಕೊಂಡಿವೆ.
Advertisement
With hair-dyed sweat dripping down both sides of his face, Rudy Guiliani says: "This is real, it is not made up, there's nobody here that engages in fantasies." pic.twitter.com/GwoINJ8ymk
— The Recount (@therecount) November 19, 2020
ಸುದ್ದಿಗೋಷ್ಠಿಗೆ ಆಗಮಿಸುವ ಮೊದಲು ಹೇರ್ ಡೈ ಮಾಡಿಸಿಕೊಂಡಿರಬೇಕು. ಹೀಗಾಗಿ ಪತ್ರಿಕಾಗೋಷ್ಠಿ ವೇಳೆ ಬೆವರಿದಾಗ ಆ ಬೆವರು ಕಪ್ಪು ಹೇರ್ ಡೈನೊಂದಿಗೆ ಮಿಶ್ರಿತವಾಗಿ ಕನ್ನೆ ಮೂಲದ ಇಳಿದಿದೆ. ಈ ಮೂಲಕ ಅವರ ಬೆಳ್ಳಗಿನ ಮುಖವನ್ನು ಕಪ್ಪು ಮಾಡಿದೆ ಎಂದು ರೂಡಿ ಟ್ರೋಲ್ ಆಗುತ್ತಿದ್ದಾರೆ.
Literally me watching Rudy Giuliani’s press briefing pic.twitter.com/EI55MCqE4H
— Saint Hoax (@SaintHoax) November 19, 2020