ಬೆಂಗಳೂರು: ರಾಜ್ಯದ ಸಕಾರಿ ಆಸ್ಪತ್ರೆಗಳಲ್ಲಿ ಕೆಟ್ಟು ನಿಂತಿರುವ ವೆಂಟಿಲೇಟರ್ ಗಳನ್ನು ಉಚಿತವಾಗಿ ರಿಪೇರಿ ಮಾಡಿಕೊಡಲು ಬಾಷ್ ಕಂಪನಿ ಮುಂದೆ ಬಂದಿದೆ ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರದಂದು ಬಾಷ್ ಉಪಾಧ್ಯಕ್ಷ ರಮೇಶ್ ಸಾಲಿಗ್ರಾಮ ಅವರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿದ ನಂತರ ಈ ವಿಷಯ ತಿಳಿಸಿದ ಅವರು, ಆ ಕಂಪನಿಯೇ ಸ್ವ ಇಚ್ಛೆಯಿಂದ ಮುಂದೆ ಬಂದು ವೆಂಟಿಲೇಟರ್ ರಿಪೇರಿ ಮಾಡಿಕೊಡುವುದಾಗಿ ಹೇಳಿದೆ. ಈ ಕಾರಣಕ್ಕೆ ಬಾಷ್ ಕಂಪನಿಯನ್ನು ಶ್ಲಾಘಿಸುವುದಾಗಿ ಹೇಳಿದರು.
Advertisement
Advertisement
ಸರ್ಕಾರಿ ಆಸ್ಪತ್ರೆಗಳಲ್ಲಿ ಇರುವ ಅನೇಕ ವೆಂಟಿಲೇಟರ್ ಗಳು ಕೆಟ್ಟಿವೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಕೂಡ ಬಂದಿವೆ. ಹೀಗಾಗಿ ಸಿಎಸ್ಆರ್ ನೆರವಿನಿಂದ ವೆಂಟಿಲೇಟರ್ ರಿಪೇರಿ ಮಾಡಿಕೊಡಲಾಗುವುದು ಎಂದು ರಮೇಶ್ ಭರವಸೆ ನೀಡಿದರು.
Advertisement
ಬಾಷ್ ನಿರ್ಧಾರ ಸ್ವಾಗತಾರ್ಹ. ವೆಂಟಿಲೇಟರ್ ಗಳು ಎಷ್ಟು, ಎಲ್ಲಿ ಕೆಟ್ಟಿವೆ ಎಂಬುದನ್ನು ಪತ್ತೆ ಮಾಡಿ ನಂತರ ಕಂಪನಿಗೆ ವಹಿಸಲಾಗವುದು ಎಂದು ಉಪ ಮುಖ್ಯಮಂತ್ರಿ ಹೇಳಿದರು.