– ದಕ್ಷಿಣೆ ಕಾಸಿಗೆ ಆಸೆ ಬಿದ್ದು ಕೆಲ ಮಠಾಧೀಶರಿಂದ ಸಿಎಂ ಪರ ಹೇಳಿಕೆ
– ರಾಜಕೀಯ ಹುಚ್ಚು ಇದ್ರೆ ಖಾವಿ ತೆಗೆದು ಖಾದಿ ಧರಿಸಿ
– ಬಿಎಸ್ವೈ ಭ್ರಷ್ಟಾಚಾರದ ಹಣದಲ್ಲಿ ವಿಪಕ್ಷಗಳಿಗೂ ಪಾಲು
ಮೈಸೂರು: ಕೆಟ್ಟವರೊಂದಿಗೆ ಒಳ್ಳೆಯವರ ಸೇರ್ಪಡೆಯಾಗಿದ್ದರಿಂದ ಸಿಎಂ ಬದಲಾವಣೆ ವಿಳಂಬವಾಗುತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ ವಿರುದ್ಧ ಗುಡುಗಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಯತ್ನಾಳ್, ಯಡಿಯೂರಪ್ಪ ವಿರುದ್ಧ ಹಾಗೂ ವಿಪಕ್ಷಗಳ ವಿರುದ್ಧ ಹರಿಹಾಯ್ದರು. ಸಿಎಂ ಯಡಿಯೂರಪ್ಪ ಕುಟುಂಬದವರು ಮಾಡುತ್ತಿರೋ ಭ್ರಷ್ಟಾಚಾರದಲ್ಲಿ ವಿರೋಧ ಪಕ್ಷಗಳು ಪಾಲುದಾರರಾಗಿವೆ. ಅವರಿಗೂ ಭ್ರಷ್ಟಾಚಾರದ ಹಣದಲ್ಲಿ ಪಾಲಿದೆ. ಯಡಿಯೂರಪ್ಪರನ್ನು ಶೀಘ್ರದಲ್ಲೇ ಕೆಳಗೆ ಇಳಿಸದಿದ್ದರೆ ಬಿಜೆಪಿ ದಕ್ಷಿಣ ಭಾರತದಲ್ಲಿ ನಿರ್ನಾಮ ಆಗುತ್ತದೆ ಎಂದು ಭವಿಷ್ಯ ನುಡಿದರು.
Advertisement
Advertisement
ಯಡಿಯೂರಪ್ಪ ಅವರಗಿಂತ ದೊಡ್ಡ ನಾಯಕರು ಲಿಂಗಾಯತ ಸಮುದಾಯದಲ್ಲಿದ್ದಾರೆ. ಪರ್ಯಾಯ ನಾಯಕ ಇಲ್ಲ ಅನ್ನೋದು ಸುಳ್ಳು. ಯಡಿಯೂರಪ್ಪ ಅವರಿಂದ ಲಿಂಗಾಯತ ಸಮುದಾಯ ಸಮಾಜದ ಮುಂದೆ ತಲೆ ತಗ್ಗಿಸುವ ಪರಿಸ್ಥಿತಿ ಬಂದಿದೆ. ಯಡಿಯೂರಪ್ಪ ಬದಲಾವಣೆ ಇಲ್ಲ ಅಂತಾ ರಾಷ್ಟ್ರೀಯ ಅಧ್ಯಕ್ಷರು ಹೇಳಲಿ. ಅವತ್ತು ನಾಯಕತ್ವ ಬದಲಾವಣೆ ಮುಗಿದ ಅಧ್ಯಯ ಅಂತಾ ಒಪ್ಪಿಕೊಳ್ತಿನಿ ಎಂದರು.
Advertisement
Advertisement
ಖಾವಿ ತೆಗೆದು ಖಾದಿ ಧರಿಸಿ: ದಕ್ಷಿಣೆ ಕಾಸಿಗೆ ಆಸೆ ಬಿದ್ದು ಕೆಲ ಮಠಾಧೀಶರು ಸಿಎಂ ಪರ ಮಾತನಾಡುತ್ತಿದ್ದಾರೆ. ಲವ್ ಜಿಹಾದ್ ತಡೆಯಲು ಮಠಾಧೀಶರು ಮುಂದಾಗಬೇಕು. ಕೆಟ್ಟವರಿಗೆ ಬುದ್ದಿ ಹೇಳುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ಸಿಎಂ ಬದಲಾವಣೆ ಮಾಡಿದ್ರೆ ಬೀದಿಗೆ ಬರುತ್ತೇವೆ ಅನ್ನೋದು ಸರಿಯಲ್ಲ. ಸಿಎಂ ಕುಟುಂಬದಿಂದ ಲಿಂಗಾಯತ ಸಮಾಜಕ್ಕೆ ಕೆಟ್ಟ ಹೆಸರು ಬಂದಿದೆ. ಇದರ ಬಗ್ಗೆ ಮಾತನಾಡುವ ಬದಲು ಭ್ರಷ್ಟರ ಪರವಾಗಿ ಮಠಾಧೀಶರು ಮಾತನಾಡಬಾರದು. ನಿಮಗೆ ಅಷ್ಟೊಂದು ರಾಜಕೀಯ ಹುಚ್ಚು ಇದ್ರೆ ಖಾವಿ ತೆಗೆದು ಖಾದಿ ಧರಿಸಿ ಬನ್ನಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಗುಡುಗು ಯತ್ನಾಳ್, ಮಿಂಚು ಯೋಗೇಶ್ವರ್ ಮಳೆ ಬಂದ್ಮೇಲೆ ತಣ್ಣಗಾಗ್ತಾರೆ: ಕೋಟ ವ್ಯಾಖ್ಯಾನ
ಸಿಎಂ ನಿವಾಸದ ಗೆಸ್ಟ್ ಹೌಸ್ನಲ್ಲಿ ಡೀಲ್: ಇದೆ ವೇಳೆ ಸಿಎಂ ಪುತ್ರ, ಬಿಜೆಪಿ ಉಪರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್, ಸಿಎಂ ನಿವಾಸ ಕಾವೇರಿ ಹಿಂಭಾಗದಲ್ಲಿ ಗೆಸ್ಟ್ ಗೌಸ್ ಇದೆ. ಇವರ ಎಲ್ಲ ಡೀಲ್ಗಳೂ ಅಲ್ಲೇ ನಡೆಯೋದು. ಸಿಸಿಬಿ ಪೊಲೀಸರು ಅಲ್ಲಿಗೆ ಯಾಕೆ ರೈಡ್ ಮಾಡಲ್ಲ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಸಿಎಂ ವಿರುದ್ಧ ಸಿಪಿವೈ, ಬೆಲ್ಲದ್, ಯತ್ನಾಳ್ ಚಾರ್ಜ್ಶೀಟ್ ಏನು?
ದಿನಕ್ಕೆ ನೂರು ಕೋಟಿ ರೂ. ಲೂಟಿ ಹೊಡೆಯುತ್ತಿದ್ದಾರೆ. ರಾಜ್ಯದಲ್ಲಿ ವಿರೋಧ ಪಕ್ಷಗಳು ಸತ್ತು ಹೋಗಿದ್ದು, ಯಡಿಯೂರಪ್ಪ ಜೊತೆ ಶಾಮೀಲು ಆಗಿವೆ. ಅವರಿಗೂ ಭ್ರಷ್ಟಾಚಾರದಲ್ಲಿ ಪಾಲು ಇರೋದರಿಂದ ಯಾರು ಯಡಿಯೂರಪ್ಪ ವಿರುದ್ಧ ಮಾತಾನಾಡುತ್ತಿಲ್ಲ. ಅವರಿಗೂ ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರಿಯಬೇಕು ಎಂದು ಹೇಳಿದರು. ಇದನ್ನೂ ಓದಿ: ಯತ್ನಾಳ್ ಪರ ಸದಾ ಕಾಲ ಇರುತ್ತೇನೆ: ಸಿ.ಪಿ ಯೋಗೇಶ್ವರ್