ಬೆಂಗಳೂರು: ಚಿನ್ನಾಭರಣ ಮಾರಾಟದಲ್ಲಿ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡಿ ಇಡೀ ಕರ್ನಾಟಕ ರಾಜ್ಯಾದ್ಯಂತ ಮನೆ ಮಾತಾಗಿರುವಂತಹ ಡಾ. ಟಿಎ ಶರವಣ ಮಾಲೀಕತ್ವದ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸಿನ 5ನೇ ನೂತನ ಮಳಿಗೆ ಮಾರ್ಚ್ 21ರ ಭಾನುವಾರ ಕೆಆರ್ಪುರಂನಲ್ಲಿ ಬೆಳಗ್ಗೆ 11 ಗಂಟೆಗೆ ಶುಭಾರಂಭಗೊಳ್ಳಲಿದೆ.
ಈಗಾಗಲೇ ಬಸವನಗುಡಿಯಲ್ಲಿ 2 ಮಳಿಗೆ, ಎಚ್ಎಸ್ಆರ್ ಲೇಔಟ್, ಯಲಹಂಕದಲ್ಲಿ ಮಳಿಗೆ ತೆರೆದಿರುವ ಸಾಯಿಗೋಲ್ಡ್ ಪ್ಯಾಲೇಸ್ ಈಗ ಹಳೆ ಮದ್ರಾಸ್ ರಸ್ತೆ, ಕೆಆರ್ಪುರಂ ಸಬ್ ರಿಜಿಸ್ಟ್ರಾರ್ ಕಚೇರಿ ಬಳಿ ಮಾ. 21 ರಂದು ಉದ್ಘಾಟನೆಯಾಗಲಿದೆ.
Advertisement
Advertisement
ಗುಣಮಟ್ಟ, ವಿನ್ಯಾಸ, ಗ್ರಾಹಕರ ಆಪೇಕ್ಷೆಗೆ ತಕ್ಕಂತೆ ಚಿನ್ನಾಭರಣಗಳು ಇಲ್ಲಿ ಇರುವುದು ವಿಶೇಷ. 25ನೇ ವರ್ಷದ ಆಚರಣೆಯ ಶುಭ ಸಮಾರಂಭದಲ್ಲಿ ದುಬೈ ಬೆಲೆಯಲ್ಲೇ ಚಿನ್ನದ ಆಭರಣವನ್ನು ಖರೀದಿ ಮಾಡುವಂತಹ ಸುವರ್ಣ ಅವಕಾಶ ಗ್ರಾಹಕರಿಗೆ ಸಿಕ್ಕಿದೆ.
Advertisement
ಎಲ್ಲ ರೀತಿಯ ಆಂಟಿಕ್ ಜುವೆಲ್ಲರಿ, ಟೆಂಪಲ್ ಜುವೆಲ್ಲರಿ, ಹ್ಯಾಂಡ್ ಕ್ರಾಫ್ಟ್ ಜ್ಯುವೆಲ್ಲರಿ ಇಲ್ಲಿದೆ. ವಜ್ರ, ಬೆಳ್ಳಿ, ಬೆಳ್ಳಿಯ ಕಡಿಮೆ ಭಾರ ಹೊಂದಿರುವ ಆಭರಣದ ಜೊತೆ ಹೊಸ ವಿನ್ಯಾಸದ ಎಲ್ಲರೂ ಇಷ್ಟ ಪಡುವ ಆಭರಣಗಳು ಗ್ರಾಹಕರಿಗಾಗಿ ತಯಾರಾಗಿದೆ.
Advertisement
ಗ್ರಾಹಕರಿಗೆ ಕೊಡುಗೆ:
ವೈವಿಧ್ಯಮಯವಾದ ಆಭರಣಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿರುವ ಸಾಯಿ ಗೋಲ್ಡ್ ಪ್ಯಾಲೇಸ್ ತನ್ನ ಎಲ್ಲ ಮಳಿಗೆಗಳಲ್ಲಿ ವೇಸ್ಟೇಜ್ ಮತ್ತು ಸ್ಟೋನ್ ಶುಲ್ಕ ವಿಧಿಸುತ್ತಿಲ್ಲ. ಹೊಸದಾಗಿ ಆರಂಭಗೊಳ್ಳಲಿರುವ ಮಳಿಗೆಯಲ್ಲಿ ಗ್ರಾಹಕರು ದುಬೈ ದರದಲ್ಲಿ ಚಿನ್ನಾಭರಣ ಖರೀದಿ ಮಾಡಬಹುದು. ಪ್ರತಿ 1 ಕೆಜಿ ಬೆಳ್ಳಿ ವಸ್ತು ಖರೀದಿಸಿದರೆ 2 ಸಾವಿರ ರೂ. ರಿಯಾಯಿತಿ ಪಡೆಯಬಹುದು
50 ಸಾವಿರಕ್ಕಿಂತ ಹೆಚ್ಚಿನ ವಜ್ರಾಭರಣ ಖರೀದಿಸಿದರೆ ಚಿನ್ನದ ನಾಣ್ಯ ಉಚಿತವಾಗಿ ಸಿಗಲಿದೆ. ಅಷ್ಟೇ ಅಲ್ಲದೇ ಬೆಳ್ಳಿ ಆಭರಣಗಳ ಖರೀದಿಯ ಮೇಲೆ ಶೇ.5 ರಷ್ಟು ರಿಯಾಯಿತಿ ಸಿಗಲಿದೆ.
ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕರು ಮತ್ತು ಕರ್ನಾಟಕ ಜ್ಯುವೆಲ್ಲರಿ ಅಸೋಸಿಯೇಷನ್ ಅಧ್ಯಕ್ಷ ಡಾ.ಟಿ.ಎ ಶರವಣ ಮಾತನಾಡಿ, ಚಿನ್ನದ ಮೇಲೆ ಹೂಡಿಕೆ ಮಾಡಲು ಇದು ಉತ್ತಮ ಸಂದರ್ಭ. ಚಿನ್ನದ ಬೆಲೆ ಯಾವ ಸಮಯದಲ್ಲಿ ಏರಿಕೆ ಆಗಲಿದೆ ಎಂದು ಊಹಿಸುವುದೇ ಕಷ್ಟ. ಹೀಗಾಗಿ ನಾವು ಕೆ.ಆರ್.ಪುರಂ ಮಳಿಗೆಯಲ್ಲಿ ಹೆಚ್ಚಿನ ರಿಯಾಯಿತಿಗಳನ್ನು ಪ್ರಕಟಿಸಿದ್ದು ಗ್ರಾಹಕರು ಇದರ ಲಾಭ ಪಡೆಯಬೇಕು ಎಂದು ಹೇಳಿದರು.
ಡಾ. ಟಿಎ ಶರವಣರ ಬಗ್ಗೆ:
ಬಡತನದಲ್ಲಿ ಹುಟ್ಟಿ ಬೆಳೆದ ಶರವಣ ಅವರು ಇಂದು ಚಿನ್ನದ ಮಳಿಗೆಗಳನ್ನು ತೆರೆದಿರಬಹುದು. ಆದರೆ ಈ ಸಾಧನೆಯ ಹಿಂದೆ ಕಠಿಣ ಪರಿಶ್ರಮವಿದೆ. ಸಾಧನೆಗೆ ಯಾವುದೇ ಶಾರ್ಟ್ಕಟ್ ಇಲ್ಲ ಎಂಬಂತೆ ಆರಂಭದಲ್ಲಿ ಸೇಲ್ಸ್ಮನ್ ಆಗಿ ಚಿನ್ನ ಉದ್ಯಮದ ಕ್ಷೇತ್ರಕ್ಕೆ ಪ್ರವೇಶ ಮಾಡಿದ ಶರವಣ ತನಗೆ ಎದುರಾಗಿದ್ದ ಸವಾಲುಗಳನ್ನು ಮೆಟ್ಟಿ ನಿಂತು ಇಂದು ʼಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ʼ ಕಟ್ಟಿದ್ದಾರೆ.
ಐದು ಸಹೋದರಿಯರು ಮತ್ತು ಓರ್ವ ಸಹೋದರನಿದ್ದ ದೊಡ್ಡ ಕುಟುಂಬದಲ್ಲಿ ಜನಿಸಿದ್ದ ಶರವಣ ಅವರಿಗೆ ಆರಂಭದಲ್ಲೇ ಕುಟುಂಬದ ಹೊರೆ ಇತ್ತು. ಕುಟುಂಬದ ಹೊರೆ, ಉದ್ಯಮ ಎಲ್ಲವನ್ನು ನಿಭಾಯಿಸಿ ಈಗ ಯಶಸ್ವಿ ಚಿನ್ನದ ಉದ್ಯಮಿಯಾಗಿ ಹೊರ ಹೊಮ್ಮಿದ್ದಾರೆ.
ಒಂದು ಕಡೆ ಉದ್ಯಮದಲ್ಲಿ ಬೆಳವಣಿಗೆ ಆಗುತ್ತಿದ್ದಂತೆ ಇನ್ನೊಂದು ಕಡೆ ಶರವಣ ಸಹಾಯ ಹಸ್ತ ನೀಡತೊಡಗಿದರು. ಶಿರಡಿ ಸಾಯಿ ಬಾಬಾ ಅವರ ಭಕ್ತರಾಗಿರುವ ಶರವಣ ವಿವಿಧ ದೇವಾಲಯ ಮತ್ತು ಮಠಗಳಿಗೆ ಸಹಾಯ ನೀಡಿದ್ದಾರೆ. ಸಾಯಿ ಬಾಬಾ ಹೆಸರಿನಲ್ಲಿ ಧಾರಾವಾಹಿ ನಿರ್ಮಿಸಿ ಪಾತ್ರವನ್ನೂ ಮಾಡಿದ್ದರು. ಇವರ ಸಮಾಜಮುಖಿ ಕೆಲಸಗಳಿಂದ ಇವರು ಜೆಡಿಎಸ್ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಆಗಿದ್ದಾರೆ.