ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಾಣವಾಗುತ್ತಿರುವ ಕೆಂಪೇಗೌಡ ಪಾರ್ಕ್ ಗೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಶ್ರೀಗಳು ಭೇಟಿ ನೀಡಿ ಕಾಮಗಾರಿ ಸ್ಥಳ ವೀಕ್ಷಣೆ ಮಾಡಿದರು.
Advertisement
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕೇಂಪೇಗೌಡ ಪಾರ್ಕ್ ನಲ್ಲಿ ಸರ್ಕಾರದ ವತಿಯಿಂದ ಬೃಹತ್ ಪುತ್ಥಳಿ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ಥಾಣದಲ್ಲಿ ರಾಜ್ಯ ಸರ್ಕಾರದ ವತಿಯಿಂದ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಬೃಹತ್ ಪುತ್ಧಳಿ ಮತ್ತು ಪಾರ್ಕ್ ನಿರ್ಮಾಣಕ್ಕೆ ಕಳೆದ ವರ್ಷ ಸಿಎಂ ಬಿ.ಎಸ್ ಯಡಿಯೂರಪ್ಪ ಚಾಲನೆ ನೀಡಿದ್ದರು. ಹೀಗಾಗಿ ಕೆಂಪೇಗೌಡರ ಬೃಹತ್ ಪುತ್ಥಳಿ ಮತ್ತು ಪಾರ್ಕ್ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದ್ದು ಇಂದು ಆ ಸ್ಥಳಕ್ಕೆ ಸ್ವಾಮೀಜಿಗಳು ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
Advertisement
Advertisement
ದೆಹಲಿಯಲ್ಲಿ ಕೆಂಪೇಗೌಡರ ಬೃಹತ್ ಪ್ರತಿಮೆಯನ್ನ ನಿರ್ಮಾಣ ಮಾಡ್ತಿದ್ದು, ಇಂದು ಪ್ರತಿಮೆಯ ಮೊದಲ ಭಾಗವಾಗಿ ನಿರ್ಮಾಣವಾಗಿರವ ಪ್ರತಿಮೆಯ ಕಾಲುಗಳು ದೆಹಲಿಯಿಂದ ಪ್ರತಿಮೆ ಸ್ಥಳಕ್ಕೆ ಬಂದು ತಲುಪಿದೆ. ಹೀಗಾಗಿ ಪ್ರತಿಮೆಯ ಪಾದಗಳನ್ನ ಸ್ವಾಮೀಜಿ ಸೇರಿದಂತೆ ಅಧಿಕಾರಿಗಳು ಬಂದು ವೀಕ್ಷಣೆ ಮಾಡಿದ್ರು. ಅಲ್ಲದೆ ಮುಂದಿನ 2022 ರ ವೇಳೆಗೆ ಪಾರ್ಕ್ ಮತ್ತು ಪುತ್ಥಳಿ ನಿರ್ಮಾಣಕ್ಕೆ ಗಡುವು ನೀಡಿದ್ದು ನಿರ್ಮಾಣದ ಕಾರ್ಯ ಸಹ ಭರದಿಂದ ಸಾಗಿದೆ.
Advertisement
ಬೆಂಗಳೂರಿನಿಂದ ದೇಶ ಮತ್ತು ವಿದೇಶಗಳಿಗೆ ತೆರಳಲು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಏರ್ಪೋಟ್ ಪ್ರವೇಶಿಸುತ್ತಿದ್ದಂತೆ, ಬೆಂಗಳೂರು ಮಹಾನಗರದ ನಿರ್ಮಾತೃ, ಬೃಹತ್ ನಾಡಪ್ರಭು ಕೇಂಪೇಗೌಡರ ಪುತ್ಥಳಿ ಮತ್ತು ಪಾರ್ಕ್ ಕಾಣಿಸುವ ರೀತಿಯಲ್ಲಿ ಪ್ಲಾನ್ ರೂಪಿಸಲಾಗಿದೆ. ನಾಡಪ್ರಭುವಿನ ಪುತ್ಥಳಿ ದೇಶ ವಿದೇಶಿ ಪ್ರಯಾಣಿಕರ ಕಣ್ಮನ ಸೆಳೆಯಲಿದೆ.