ಬೆಂಗಳೂರು: ರೈತರ ಹೋರಾಟವನ್ನ ಹತ್ತಿಕ್ಕಲು ಯತ್ನಿಸುತ್ತಿರೋ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಅನ್ನದಾತರು ಒಂದಾಗಿದ್ದಾರೆ. ನಾಳೆ ದೇಶದ್ಯಾಂತ ರಾಷ್ಟ್ರೀಯ ಹೆದ್ದಾರಿ ಬಂದ್ಗೆ ರೈತ ನಾಯಕರು ಕರೆ ನೀಡಿದ್ದಾರೆ.
Advertisement
ಗಣರಾಜ್ಯೋತ್ಸವ ದಿನದಂದು ಆದ ಘಟನೆಗೆ ಖಂಡಿಸಿ ನಾಳೆ ದೇಶದ್ಯಾಂತ ರಾಷ್ಟ್ರೀಯ ಹೆದ್ದಾರಿ ಬಂದ್ಗೆ ರೈತ ನಾಯಕರು ಕರೆ ನೀಡಿದ್ದಾರೆ. ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಹತ್ತಿಕ್ಕುವಲ್ಲಿ ಕೇಂದ್ರ ಸರ್ಕಾರ ಪ್ರಯತ್ನ ನಡೆಯುತ್ತಿದೆ. ಹೀಗೆ ಮುಂದುವರಿದ್ರೆ ದೇಶಾದ್ಯಂತ ರೈತರು ಉಗ್ರ ಹೋರಾಟ ನಡೆಸೋದಾಗಿ ರೈತ ನಾಯಕರು ಎಚ್ಚರಿಸಿದ್ದಾರೆ. ಈ ನಡುವೆ ರಾಜ್ಯದಲ್ಲೂ ರಾಷ್ಟ್ರೀಯ ಹೆದ್ದಾರಿ ಬಂದ್ ನಡೆಯಲಿದೆ.
Advertisement
Advertisement
ದೆಹಲಿ ರೈತರ ಹೋರಾಟದ ಬೆಂಬಲ ನೀಡುವ ಸಲುವಾಗಿ ರಾಜ್ಯದ ಮೂಲೆಮೂಲೆಗಳಲ್ಲೂ ಹೆದ್ದಾರಿ ಬಂದ್ ನಡೆಸಲು ರಾಜ್ಯ ರೈತರು ನಾಯಕರು ತೀರ್ಮಾನಿಸಿದ್ದಾರೆ. ಕೇವಲ ಬೆಂಗಳೂರು ಮಾತ್ರವಲ್ಲ ಇಡೀ ರಾಜ್ಯದ ಹೈವೇಗಳು ಬಂದ್ ಆಗಲಿದ್ದು, ರೈತರು, ಕಾರ್ಮಿಕರು, ದಲಿತರು, ಮಹಿಳಾ ಸಂಘಟನೆಗಳು ಸೇರದಂತೆ ನೂರಾರು ಸಂಘಟನೆಗಳು ಹೆದ್ದಾರಿ ಬಂದ್ಗೆ ಸಾಥ್ ನೀಡಲಿದೆ. ನಾಳೆ ಮಧ್ಯಾಹ್ನ 12 ರಿಂದ 3ರ ವರೆಗೆ ಹೆದ್ದಾರಿ ಬಂದ್ ಮಾಡಲು ರೈತರು ನಿರ್ಧರಿಸಿದ್ದಾರೆ.
Advertisement
ನಾಳೆ ಕುರುಬೂರು, ದೆಹಲಿಯಲ್ಲಿರೋ ಕೋಡಿಹಳ್ಳಿ ಚಂದ್ರಶೇಖರ್ ಅವರ ಹಸಿರು ಸೇನೆಯಿಂದಲೂ ಎನ್ ಹೆಚ್ ಬಂದ್ ನಡೆಸಲು ನಿರ್ಧರಿಸಲಾಗಿದೆ. ರೈತರ ಕಹಳೆಗೆ ಬೆಂಗಳೂರು ಕಂಪ್ಲೀಟ್ ಸ್ತಬ್ಧವಾಗಲಿದೆ. ಮೈಸೂರು ರೋಡ್, ರಾಮನಗರ ಬೆಂಗಳೂರಿನ ಗಡಿ ಭಾಗ, ತುಮಕೂರು ರೋಡ್ ಬಂದ್,ಮಾದವಾರ ಬಳಿ ರಾಷ್ಟ್ರೀಯ ಹೆದ್ದಾರಿ ದ್ವೀಮುಖ ರಸ್ತೆ, ಅತ್ತಿಬೆಲೆ ಗಡಿ, ಕೆ ಆರ್ ಪುರಂ ಜಂಕ್ಷನ್, ಯಲಹಂಕ, ದೇವನಹಳ್ಳಿ, ದೊಡ್ಡಬಳ್ಳಾಪುರ ಹೈವೇ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ಹೈವೇಗಳನ್ನ ಬಂದ್ ಮಾಡಲು ನಿರ್ಧರಿಸಲಾಗಿದೆ.
ಒಟ್ಟಿನಲ್ಲಿ ರೈತರ ಹೆದ್ದಾರಿ ಬಂದ್ನಿಂದ ಬೆಂಗಳೂರಿನ ಹೊರಭಾಗ ಮಾತ್ರವಲ್ಲದೇ ಸುತ್ತಮುತ್ತಲಿನ ರಸ್ತೆಗಳು ಟ್ರಾಫಿಕ್ ಜ್ಯಾಮ್ ಆಗೋದು ಪಕ್ಕಾ ಅಲ್ಲದೇ ಇಡೀ ರಾಜ್ಯದ ಜಿಲ್ಲಾ ಕೇಂದ್ರಗಳು, ತಾಲೂಕು ಕೇಂದ್ರಗಳಲ್ಲೂ ರಸ್ತೆ ಬಂದ್ ಆಗೋದು ಪಕ್ಕಾ ಎಂದು ರೈತರು ಹೇಳಿದ್ದಾರೆ.