ಹಾಸನ: ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಸಿಎಂ ಯಡಿಯೂರಪ್ಪ ಭೇಟಿ ಮಾಡಿದರೆ ಏನು ತಪ್ಪು, ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಇಬ್ಬರೂ ಲೀಡರ್ಸ್. ರಾಜ್ಯದ ಹಿತಾಸಕ್ತಿಗಾಗಿ ಭೇಟಿ ಮಾಡಿದರೆ ಬೇರೆ ತಿಳಿಯಬಾರದು ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
ಹಾಸನ ಜಿಲ್ಲೆಯ ಹಳೇಬೀಡು ಕೆರೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಸಿಎಂ ಮತ್ತು ಮಾಜಿ ಸಿಎಂ ಭೇಟಿ ವಿಷಯ ಕೇಳಿದ್ದಕ್ಕೆ ಕೈಮುಗಿದರು. ಬಳಿಕ ಮಾತನಾಡಿ ಶಿರಾ ಮತ್ತು ಆರ್.ಆರ್ ನಗರ ಉಪ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಶಾಮೀಲಾಗಿದ್ದರು ಎಂಬ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯಿಸಿ ಉಪ ಚುನಾವಣೆಯಲ್ಲಿ ಯಾವುದೇ ಶಾಮೀಲಾಗಿಲ್ಲ ಎಂದು ಸ್ಪಷ್ಟನೆ ನೀಡಿದರಲ್ಲದೇ ಇಬ್ಬರೂ ಚುನಾವಣೆ ಮಾಡಿದ್ದಾರೆ ಎಂದರು.
Advertisement
Advertisement
ಶಾಸಕ ಮುನಿರತ್ನಗೆ ಸಚಿವ ಸ್ಥಾನ ನೀಡುವ ವಿಚಾರ ಸಂಬಂಧ, ಇದಕ್ಕೆ ಉತ್ತರ ನೀಡಲು ಯಡಿಯೂರಪ್ಪ ಒಬ್ಬರೇ ಸಮರ್ಥರು ನಾನೇನನ್ನೂ ಹೇಳೊಲ್ಲಾ ಎಂದು ಹೇಳಿದರು. ಸಚಿವ ಸಂಪುಟದಿಂದ ನಾಲ್ವರು ಸಚಿವರನ್ನು ಕೈಬಿಡುತ್ತಾರೆಂಬ ವಿಚಾರ ಇದುವರೆಗೂ ಸಿಎಂ ಯಾರ ಜತೆಯೂ ಚರ್ಚಿಸಿಲ್ಲ. ಮುನಿರತ್ನ ಅವರ ಚುನಾವಣೆಯಲ್ಲಿ ಮಂತ್ರಿ ಮಾಡುವುದಾಗಿ ಸಿಎಂ ಹೇಳಿದ್ದಾರೆ ಅದರ ಬಗ್ಗೆಯಷ್ಟೇ ನಾನು ಹೇಳಬಹುದು. ಆದರೆ ಬೇರೆ ವಿಷಯ ಇದುವರೆಗೂ ಮಾತನಾಡಿಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳದರು.
Advertisement
Advertisement
ಇದೇ ವೇಳೆ ಸಾರ್ ಕೆಲಸ ತುಂಬಾ ನಿಧಾನವಾಗಿ ನಡೀತಿದೆ. ಇವತ್ತೆಲ್ಲೋ ಕೆಲಸ ಮಾಡಲು ಜನ ಕಳುಹಿಸಿದ್ದಾರೆ. ನಮ್ಮ ಹೋರಾಟಕ್ಕೆ ನ್ಯಾಯ ಸಿಕ್ಕಿಲ್ಲ. ನಮಗೆ ಕೆರೆ ನೀರು ಉಳಿಸಿಕೊಳ್ಳಲು ಶಾಶ್ವತ ಪರಿಹಾರ ಒದಗಿಸಿ ಎಂದು ಮಾಧುಸ್ವಾಮಿ ಎದುರು ರೈತರು ಅಸಮಾಧಾನ ಹೊರಹಾಕಿದರು. ನಂತರದ ಮಾತನಾಡಿದ ಸಚಿವರು ಕೆರೆ ಏರಿ ಪರಿಶೀಲನೆಗೆ ಬಂದಿದ್ದೇನೆ. ತಂತ್ರಜ್ಞರ ಜೊತೆ ಮಾತುಕತೆ ನಡೆಸಿ ಶಾಶ್ವತ ಪರಿಹಾರಕ್ಕೆ ಯೋಜನೆ ರೂಪಿಸಲಾಗುವುದು ಎಂದು ಭರವಸೆ ನೀಡಿದರು.