ಕಾರವಾರ: ಬಲು ಅಪರೂಪದ ಇಂಡೋ ಪೆಸಿಫಿಕ್ ಹಂಪ್ಬ್ಯಾಕ್ ಡಾಲ್ಫಿನ್ ಕಳೇಬರ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಾಡದಲ್ಲಿನ ಕಾಂಚಿಕಾ ಪರಮೇಶ್ವರಿ ದೇವಸ್ಥಾನ ಭಾಗದ ಕಡಲ ತೀರದಲ್ಲಿ ದೊರೆತಿದೆ. ಈ ಡಾಲ್ಫಿನ್ ಆರು ದಿನದ ಹಿಂದೆ ಸತ್ತಿರುವುದಾಗಿ ಕುಮಟಾ ಅರಣ್ಯ ಇಲಾಖೆಯ ಆರ್.ಎಫ್.ಓ ಪ್ರವೀಣ್ ಮಾಹಿತಿ ನೀಡಿದ್ದಾರೆ.
ಸುಮಾರು 2.25 ಮೀಟರ್ ಉದ್ದದ ಅಂದಾಜು 230 ಕೆ.ಜಿ ತೂಕದ ಇಂಡೋ ಪೆಸಿಫಿಕ್ ಹಂಪ್ಬ್ಯಾಕ್ ಡಾಲ್ಫಿನ್ ಕಳೇಬರ ಇದಾಗಿದ್ದು, ಶಾರ್ಕ್ ಗಳ ದಾಳಿ ಅಥವಾ ಬೋಟ್ ಹೊಡೆದು ಗಾಯವಾಗಿ ಸತ್ತಿರಬಹುದು ಎಂದು ಪ್ರವೀಣ್ ಹೇಳಿದ್ದಾರೆ.
Advertisement
Advertisement
ಕಳೆದ ಮೂರು ದಿನದ ಹಿಂದೆ ಇದೇ ಭಾಗದಲ್ಲಿ ಡಾಲ್ಫಿನ್ ಕಳೇಬರ ದೊರೆತಿದ್ದು ಪುನಃ ಈಗ ಮತ್ತೊಂದು ದೊರೆತಿದೆ. ಈ ಹಿಂದೆ ಲಾಕ್ಡೌನ್ ಸಂದರ್ಭದಲ್ಲಿ ಈ ಭಾಗದಲ್ಲಿ ಡಾಲ್ಫಿನ್ ಗಳು ಅತೀ ಹೆಚ್ಚು ಓಡಾಟ, ಇರುವಿಕೆಯನ್ನು ಅಧಿಕಾರಿಗಳು ದಾಖಲಿಸಿದ್ದರು.
Advertisement
20 ರಿಂದ 25 ಮೀಟರ್ ಆಳ ಸಮುದ್ರದಲ್ಲಿ ವಾಸವಿರುವ ಇವು 15 ರಿಂದ 20 ಸೆಕೆಂಡ್ ಸಮುದ್ರದಿಂದ ಮೇಲೆಬಂದು ಬಳಿಕ ನೀರಿನಲ್ಲಿ ಸಾಗಿ ಮೀನುಗಳನ್ನು ಶಿಕಾರಿ ಮಾಡುತ್ತವೆ. ಈ ಸಸ್ತನಿಯು 10 ರಿಂದ 12 ತಿಂಗಳುಗಳಲ್ಲಿ ಗರ್ಭಧಾರಣೆ ಮಾಡುತ್ತವೆ. ಮರಿಗಳು ಸ್ವಾವಲಂಬಿಯಾಗಿ ಸಮುದ್ರದಲ್ಲಿ ಬದುಕುವವರೆಗೂ ಅವುಗಳ ಪೋಷಣೆ ಮಾಡುವ ಇವು ಬುದ್ಧಿವಂತ ಸಸ್ತನಿಯಾಗಿದೆ.
Advertisement
ಈ ಹಿಂದೆ ಸಮುದ್ರದಲ್ಲಿ ಮಾನವನ ಚಟುವಟಿಕೆ ಹೆಚ್ಚಾದ ಹಿನ್ನಲೆಯಲ್ಲಿ ಇವುಗಳ ಇರುವಿಕೆಯ ಸ್ಥಳಗಳು ಬದಲಾಗಿದ್ದವು, ಆದರೆ ಲಾಕ್ಡೌನ್ ನಂತರ ಡಾಲ್ಫಿನ್ ಗಳ ದಂಡು ಅರಬ್ಬಿ ಸಮುದ್ರ ತೀರದ ಕುಮಟಾ ಸೇರಿದಂತೆ ಜಿಲ್ಲೆಯ ಕರಾವಳಿ ಭಾಗದಲ್ಲಿ ಹೆಚ್ವು ಕಾಣಿಸಿಕೊಳ್ಳುತಿದ್ದವು. ಈಗ ಮೀನುಗಾರಿಕೆ ಸೇರಿದಂತೆ ಸಮುದ್ರ ಚಟುವಟಿಕೆಯಲ್ಲಿ ತೀವ್ರ ಬದಲಾಣೆಯಾದ ಕಾರಣ ಇವುಗಳ ಸಂತತಿಯ ಇರುವಿಕೆಗೆ ಹೊಡೆತ ಬಿದ್ದಿದೆ.