ನವದೆಹಲಿ: ಉತ್ತರ ಪ್ರದೇಶದಲ್ಲಿ ನಡೆಯಲಿರುವ ಕುಂಭ ಮೇಳ ವಿಷಯದಲ್ಲಿ ಕಾಂಗ್ರೆಸ್ ಮಾಜಿ ಸಂಸದ ಉದಿತ್ ರಾಜ್ ವಿವಾದದ ಕಿಡಿ ಹೊತ್ತಿಸಿದ್ದಾರೆ.
ಉತ್ತರ ಪ್ರದೇಶ ಸರ್ಕಾರ 4200 ಕೋಟಿ ವೆಚ್ಚದಲ್ಲಿ ಕುಂಭಮೇಳ ಮಾಡಲು ತಯಾರಿ ನಡೆಸಿದೆ. ಧರ್ಮಾಧಾರಿತವಾಗಿ ನಡೆಯುವ ಯಾವುದೇ ಕಾರ್ಯಕ್ರಮಗಳಿಗೆ ಸರ್ಕಾರ ಹಣ ನೀಡಬಾರದು. ಇದನ್ನು ನಿಲ್ಲಿಸಬೇಕು ಎಂದು ಟ್ವೀಟ್ ಮಾಡಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.
Advertisement
मै ट्वीट को बहाल कर रहा हूँ & संवाद के लिए तैयार हूँ।जब भी राजनैतिक मामला होता है तो INC को टैग करता हूँ, इसमें नही किया था क्योंकि व्यक्तिगत विचार है।बिना वजह पार्टी को घसीटा जा रहा है।डॉ अम्बेडकर मानते थे कि राजनीति&धर्म का मिश्रण नही होना चाहिए। pic.twitter.com/60AG1z56Qj
— Dr. Udit Raj (@Dr_Uditraj) October 15, 2020
Advertisement
ತಕ್ಷಣವೇ ಈ ಟ್ವೀಟ್ ಡಿಲಿಟ್ ಮಾಡಿದ್ದ ಉದಿತ್ ರಾಜ್, ನಂತರ ಸ್ಪಷ್ಟನೆ ಕೊಟ್ಟು ಪ್ರತಿಬಾರಿ ನಾನು ಟ್ವೀಟ್ ಮಾಡುವಾಗ ಐಎನ್ಸಿಗೆ ಟ್ಯಾಗ್ ಮಾಡ್ತೇನೆ. ಇದು ನನ್ನ ವೈಯಕ್ತಿಯ ಅಭಿಪ್ರಾಯವೇ ಹೊರತು ಕಾಂಗ್ರೆಸ್ ಪಕ್ಷದ್ದಲ್ಲ ಎಂದು ತಿಳಿಸಿದರು.
Advertisement
I am restoring my tweet & ready to debate .INC wasn’t tagged & it was my personal.
“No religious teachings & rituals to be funded by the GOvt. The state doesn't have its own relegion .UP govt spent 4200 crore in organising the Kumbh Mela in Allahabad and that too was wrong? “
— Dr. Udit Raj (@Dr_Uditraj) October 15, 2020
Advertisement
ಖಜಾನೆಗೆ ಹೊರೆಯಾಗಲಿದೆ ಅಂತ ಅಸ್ಸಾಂನಲ್ಲಿ ಕುರಾನ್ ಮತ್ತು ಸಂಸ್ಕೃತ ಶಾಲೆಗೆ ಅನುದಾನ ನೀಡುವುದನ್ನು ನಿಲ್ಲಿಸುತ್ತೇವೆ ಎಂದು ಶಿಕ್ಷಣ ಸಚಿವ ಹಿಮಾಂಶ ಬಿಸ್ವಾಸ್ ಶರ್ಮಾ ಹೇಳಿಕೆ ನೀಡಿದ ಬೆನ್ನಲ್ಲೇ ಉದಿತ್ ರಾಜ್ ಈ ಟ್ವೀಟ್ ಮಾಡಿದ್ದರು.
ಕಾಂಗ್ರೆಸ್ ನಾಯಕನ ವಿರುದ್ಧ ಕೇಂದ್ರ ಸಚಿವರು ಕಿಡಿಕಾರಿದ್ದಾರೆ. ಕುಂಭ ಮೇಳ ಜಾಗತಿಕ ಕಾರ್ಯಕ್ರಮ. ಪ್ರಪಂಚದ ಮೂಲೆ ಮೂಲೆಗಳಿಂದಲೂ ಲಕ್ಷಾಂತರ ಭಕ್ತರು ಬರ್ತಾರೆ ಅಂತ ಉತ್ತರ ಪ್ರದೇಶದ ಸಚಿವ ಬ್ರಿಜೇಶ್ ಪಾಠಕ್ ತಿರುಗೇಟು ಕೊಟ್ಟಿದ್ದಾರೆ.
ಕೆಲವು ನಾಯಕರಿಗೆ ಐಡಿಯಾನೇ ಇಲ್ಲ, ಅಭಿವೃದ್ಧಿಯೇ ಬೇಕಿಲ್ಲ ಅಂತ ಅನುರಾಗ್ ಠಾಕೂರ್ ಹೇಳಿದ್ದಾರೆ. ಅಲ್ಲದೆ, ಕಳೆದ ಬಾರಿ ಬಸ್ಗಳನ್ನು ಕಳಿಸಿಕೊಟ್ಟಿದ್ದ ಪ್ರಿಯಾಂಕಾ ಗಾಂಧಿ, ಈಗ ಸ್ಪಷ್ಟನೆ ಕೊಡ್ಬೇಕು ಅಂತ ಆಗ್ರಹಿಸಿದ್ದಾರೆ. ಮಹಾಕುಂಭ ಮೇಳಕ್ಕೆ 2013ರಲ್ಲಿ 1300 ಕೋಟಿ ರೂ. ಅನುದಾನ ನೀಡಲಾಗಿತ್ತು.