ಹುಬ್ಬಳ್ಳಿ: ಕೊರೊನಾ ವಾರಿಯರ್ ಆಗಿ ಸೇವೆ ಸಲ್ಲಿಸಿದ್ದ ಕಿಮ್ಸ್ ಆಸ್ಪತ್ರೆಯ ಸ್ಟಾಫ್ ನರ್ಸ್ ಕೋವಿಡ್ 19ಗೆ ಬಲಿಯಾದ ಘಟನೆ ನಡೆದಿದೆ.
ಹುಬ್ಬಳ್ಳಿಯ ಭವಾನಿನಗರದ ಸೋಫಿಯಾ ಪೀಟರ್ ಕನವಳ್ಳಿ(45) ಕೊರೊನಾಗೆ ಬಲಿಯಾಗಿರುವ ನರ್ಸ್. ಇವರು ಪತಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
Advertisement
Advertisement
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕಳೆದ 16 ವರ್ಷದಿಂದ ಸ್ಟಾಫ್ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಸೋಫಿಯಾರವರು ಕೋವಿಡ್ ವಾರ್ಡ್ ನಲ್ಲೂ ಕಾರ್ಯನಿರ್ವಹಿಸಿದ್ದರು. ಸೋಫಿಯಾರಿಗೆ ಏಪ್ರಿಲ್ 23 ರಂದು ಕೋವಿಡ್ ಸೊಂಕು ದೃಡಪಟ್ಟಿತ್ತು. ಆದರೆ ಕೊರೊನಾ ಗೆ ಚಿಕಿತ್ಸೆ ಪಡೆಯುತ್ತಿದ್ದ ಸೋಫಿಯಾರವರಿಗೆ ಏಪ್ರಿಲ್ 29ರಂದು ಏಕಾಏಕಿ ಉಸಿರಾಟದ ತೊಂದರೆ ಉಂಟಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
Advertisement
ಸ್ಟಾಫ್ ನರ್ಸ್ ಸೋಫಿಯಾರ ನಿಧನಕ್ಕೆ ಕಿಮ್ಸ್ ಸಿಬ್ಬಂದಿ ಕಂಬನಿ ಮಿಡಿದಿದ್ದಾರೆ.
Advertisement