ದುಬೈ: ವೆಸ್ಟ್ ಇಂಡೀಸ್ ದಿಗ್ಗಜ ಆಟಗಾರ ಕ್ರಿಸ್ ಗೇಲ್ ಪಂಜಾಬ್ ತಂಡಕ್ಕೆ ಎಂಟ್ರಿ ಕೊಟ್ಟ ವಿಶೇಷ ಎಂಬಂತೆ 2020ರ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಹ್ಯಾಟ್ರಿಕ್ ಗೆಲುವು ಪಡೆದಿದೆ. ಇದರೊಂದಿಗೆ ಟೂರ್ನಿಯ ಪ್ಲೇ ಆಫ್ ರೇಸ್ಗೂ ಎಂಟ್ರಿ ಕೊಟ್ಟಿದ್ದು, 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನ ಪಡೆದುಕೊಂಡಿದೆ.
Advertisement
ಸತತ ಗೆಲುವು ಪಡೆದಿರುವುದರೊಂದಿಗೆ ಸಂತಸದಲ್ಲಿರುವ ಪಂಜಾಬ್ ತಂಡದ ಪ್ರೀತಿ ಜಿಂಟಾ, ಆಟಗಾರರಿಗೆ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ. ನಾಯಕ ಕೆಎಲ್ ರಾಹುಲ್, ಗೇಲ್, ಶೆಲ್ಡನ್ ಕಾಟ್ರೆಲ್, ಶಮಿ, ಮ್ಯಾಕ್ಸ್ ವೇಲ್ ಸೇರಿದಂತೆ ಕೆಲ ಆಟಗಾರರಿಗೆ ಗಿಫ್ಟ್ ಪಡೆದುಕೊಂಡಿದ್ದಾರೆ. ಈ ವಿಡಿಯೋವನ್ನು ಪಂಜಾಬ್ ತಂಡ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದೆ. ಈ ವೇಳೆ ಗೇಲ್ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದು, ಯುವ ಆಟಗಾರರು ಭಾಂಗ್ರಾ ಡ್ಯಾನ್ಸ್ ಮಾಡಿ ಸಂಭ್ರಮಿಸುತ್ತಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ.
Advertisement
???? | When we take down the top 3⃣ teams, it calls for some special souvenirs! ????️#SaddaPunjab #IPL2020 #KXIP #KXIPvDC pic.twitter.com/tW41nWCBcK
— Kings XI Punjab (@lionsdenkxip) October 22, 2020
Advertisement
ಪಂಜಾಬ್ ಪ್ಲೇ ಆಫ್ ತಲುಪಲು ಉಳಿದಿರುವ 4 ಪಂದ್ಯಗಳಲ್ಲಿ ಗೆಲುವು ಪಡೆಯಬೇಕಿದೆ. ಪ್ಲೇ ಆಫ್ ತಲುಪುವುದು ಕಷ್ಟ ಸಾಧ್ಯ ಎಂಬ ಸಂದರ್ಭದಲ್ಲಿ ಅಚ್ಚರಿ ಎಂಬಂತೆ ಸತತ ಮೂರು ಪಂದ್ಯಗಳಲ್ಲಿ ಗೆದ್ದು ಪಂಜಾಬ್ ತಂಡ ಹ್ಯಾಟ್ರಿಕ್ ಸಾಧಿಸಿದೆ. ಮುಂಬೈ, ಡೆಲ್ಲಿ, ಬೆಂಗಳೂರು ತಂಡಗಳ ವಿರುದ್ಧ ಗೆಲುವು ಪಡೆದ ಪ್ಲೇ ಆಫ್ ರೇಸ್ಗೆ ಎಂಟ್ರಿ ಕೊಟ್ಟಿದೆ. ಮುಂಬೈ ವಿರುದ್ಧ ಗೆಲುವು ಪಡೆದ ಪಂಜಾಬ್, ಡೆಲ್ಲಿ ತಂಡವನು ಆತ್ಮವಿಶ್ವಾಸದಿಂದ ಎದುರಿಸಿತ್ತು. ಡೆಲ್ಲಿ ವಿರುದ್ಧ ಗೆಲುವಿನ ಬಳಿಕ ಪಂಜಾಬ್ ತಂಡದ ಆಟಗಾರರು, ತರಬೇತಿ ಸಿಬ್ಬಂದಿ, ಮ್ಯಾನೇಜ್ಮೆಂಟ್ ಹ್ಯಾಟ್ರಿಕ್ ಗೆಲುವಿನ ಸಂಭ್ರಮವನ್ನು ಮಾಡಿಕೊಂಡಿದ್ದರು.
Advertisement
ಸದ್ಯ ಪಂಜಾಬ್ ತಂಡ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದು, ಉಳಿದ ನಾಲ್ಕು ಪಂದ್ಯಗಳಲ್ಲಿ ಗೆಲುವು ಪಡೆಯುವುದು ಅನಿವಾರ್ಯವಾಗಿದೆ. ಒಂದೊಮ್ಮೆ ಒಂದು ಪಂದ್ಯದಲ್ಲಿ ಸೋಲುಂಡರೆ ಉಳಿದ ತಂಡಗಳ ನೆಟ್ ರನ್ರೇಟ್ ಅನ್ವಯ ಪ್ಲೇ ಆಫ್ ತಲುಪುವ ಅವಕಾಶವಿದೆ. ಡೆಲ್ಲಿ ಹಾಗೂ ಮುಂಬೈ, ಬೆಂಗಳೂರು ತಂಡಗಳು ಫ್ಲೇ ಆಫ್ ಪ್ರವೇಶ ಮಾಡುವುದು ಬಹುತೇಕ ಖಚಿತವಾಗಿದ್ದು, ಕೋಲ್ಕತ್ತಾ, ರಾಜಸ್ಥಾನ, ಹೈದರಾಬಾದ್ ತಂಡಗಳು ಪ್ಲೇ ಆಫ್ ರೇಸ್ನಲ್ಲಿದೆ.