ಲಕ್ನೋ: ಕಾಳಿ ವೇಷಧಾರಿಯಲ್ಲಿ 75 ವರ್ಷಗಳಿಂದ ಅರ್ಚಕನಾಗಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬಾದಾನ್ ಜಿಲ್ಲೆಯ ಧಕ್ನಾಗ್ಲಾ ಗ್ರಾಮದಲ್ಲಿ ನಡೆದಿದೆ.
Advertisement
ಕಾಳಿ ವೇಷಧಾರಿ ಅರ್ಚಕನನ್ನು ಜೈ ಸಿಂಗ್ ಯಾದವ್ ಎಂದು ಗುರುತಿಸಲಾಗಿದೆ. ಇವರನ್ನು ಸಖಿ ಬಾಬಾ ಎಂದು ಕರೆಯಲಾಗುತ್ತಿತ್ತು. 20 ವರ್ಷಗಳಿಂದ ಸಾರಿ ಉಟ್ಟು, ಕೈಗೆ ಬಳೆ ತೊಟ್ಟು, ಕಾಳಿ ಅವತಾರದಲ್ಲಿ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿದ್ದರು.
Advertisement
ಕೊಲೆ ಮಾಡಿರುವ ವ್ಯಕ್ತಿಯನ್ನು ರಾಮ್ವೀರ್ ಯಾದವ್ ಎಂದು ಗುರುತಿಸಲಾಗಿದ್ದು, ರಾಮ್ವೀರ್ ಯಾದವ್ ದೇವಲಾಯಕ್ಕೆ ಬಂದು ಸಖಿ ಬಾಬಾರೊಂದಿಗೆ ಕ್ಷುಲ್ಲಕ ವಿಚಾರಕ್ಕೆ ಚರ್ಚೆಸುತ್ತಿದ್ದರು. ಚರ್ಚೆ ತಾರಕಕ್ಕೇರಿ ಪಕ್ಕದಲ್ಲಿದ್ದ ಜಾಕುವಿನಿಂದ ಸಖಿ ಬಾಬಾರಿಗೆ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.
Advertisement
Advertisement
ಹಿರಿಯ ಪೊಲೀಸ್ ಅಧಿಕಾರಿ ಸಂಕಲ್ಪ ಶರ್ಮಾ ಸ್ಥಳಕ್ಕಾಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಕೊಲೆಗೆ ಕಾರಣ ಇನ್ನು ತಿಳಿದುಬಂದಿಲ್ಲ ಎಂದಿದ್ದಾರೆ. ಐಪಿಸಿ ಸೆಕ್ಷನ್ 302 ಪ್ರಕಾರ ಕೇಸ್ ದಾಖಲಿಸಿಕೊಂಡಿರುವ ಇಸ್ಲಾಂನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.