– ಕಾಲ್ಗರ್ಲ್ ಆಗಿ ಹೋಗಿ ಎನ್ಜಿಓ ಅಧಿಕಾರಿಯಾದ್ಳು
ಬೆಂಗಳೂರು: ಮಹಿಳೆಯೊಬ್ಬಳು ಕಾಲ್ಗರ್ಲ್ ಆಗಿ ಹೋಗಿ ಎನ್ಜಿಒ ಅಧಿಕಾರಿಯಾಗಿ ನಟಿಸಿ ಯುವಕನಿಗೆ ಬರೋಬ್ಬರಿ 97 ಸಾವಿರ ವಂಚನೆ ಮಾಡಿದ ಪ್ರಕರಣವೊಂದು ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.
Advertisement
ಸುಂದರೇಶನ್ ಎಂಬ ಯುವಕ ಆನ್ಲೈನ್ ಆ್ಯಪ್ ಮೂಲಕ ಕಾಲ್ ಗರ್ಲ್ ಬೇಕೆಂದು ಬುಕ್ ಮಾಡಿದ್ದಾನೆ. ಹೀಗಾಗಿ ಮಹಿಳೆಯೊಬ್ಬಳು ಕಾಲ್ ಗರ್ಲ್ ಆಗಿ ಯುವಕನ ಮನೆಗೆ ಬಂದಿದ್ದಾಳೆ. ಅಲ್ಲದೆ ಯುವಕನಿಂದ 10 ಸಾವಿರ ಗೂಗಲ್ ಪೇ ಮಾಡಿಸಿಕೊಂಡಿದ್ದಾಳೆ.
Advertisement
ಇತ್ತ ಸಮಯ ಕಳೆಯುತ್ತಿದ್ದಂತೆ ನಾನು ಎನ್ಜಿಒ ಅಧಿಕಾರಿಯಾಗಿದ್ದು, ಅತ್ಯಾಚಾರ ಕೇಸ್ ಹಾಕೋದಾಗಿ ಯುವಕನಿಗೆ ಬ್ಲಾಕ್ ಮೇಲ್ ಮಾಡಿದ್ದಾಳೆ. ಇದರಿಂದ ಆತಂಕಗೊಂಡ ಯುವಕ ಕೂಡಲೇ ಆ್ಯಪ್ ಮ್ಯಾನೇಜರ್ ಗೆ ಕರೆ ಮಾಡಿದ್ದಾನೆ. ಆಗ ಆತ ಕೂಡ ಬೆದರಿಕೆ ಹಾಕಲು ಆರಂಭಿಸಿದ್ದಾನೆ.
Advertisement
Advertisement
ಮ್ಯಾನೇಜರ್ ಬೆದರಿಕೆ ಏನು?
ಮನೆಯಲ್ಲೆ ಸೆಟಲ್ ಮಾಡಿಕೊಂಡ್ರೆ 2 ಲಕ್ಷ ಆಗುತ್ತೆ. ಪೊಲೀಸ್ ಠಾಣೆ ಮೆಟ್ಟಿಲೇರಿದರೆ 5 ಲಕ್ಷ ಕೊಡಬೇಕಾಗುತ್ತೆ ಎಂದು ಯುವಕನನ್ನು ಬೆದರಿಸಿದ್ದಾನೆ. ಮ್ಯಾನೇಜರ್ ಮಾತಿನಿಂದ ಮತ್ತಷ್ಟು ಆತಂಕಗೊಂಡ ಯುವಕ, 50 ಸಾವಿರ, 20 ಸಾವಿರ, 17 ಸಾವಿರ ಹೀಗೆ ಮ್ಯಾನೇಜರ್ ನಂಬರ್ ಗೆ ಗೂಗಲ್ ಪೇ ಮಾಡಿದ್ದಾನೆ.
ತನ್ನ ಕೈಯಿಂದ ಹೀಗೆ ಹಣ ಹೋಗುತ್ತಿರುವುದರಿಂದ ದಿಕ್ಕು ತೊಚದಂತಾದ ಯುವಕ ಕೊನೆಗೆ ಪೊಲೀಸ್ ಠಾಣೆ ಮೇಟ್ಟಿಲೇರಿಯೇ ಬಿಟ್ಟಿದ್ದಾನೆ. ಘಟನೆ ಸಂಬಂಧ ನೊಂದ ಯುವಕ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಸದ್ಯ ಯುವಕನ ದೂರು ದಾಖಲಿಸಿಕೊಂಡಿರೋ ಪೊಲೀಸರು ಕಾಲ್ ಗರ್ಲ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.