– 15 ಮಂದಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ
ಲಕ್ನೋ: ರಸಗೊಬ್ಬರ ಕಾರ್ಖಾನೆಯಲ್ಲಿ ಅನಿಲ ಸೋರಿಕೆಯಾಗಿರುವ ಪರಿಣಾಮ ಇಬ್ಬರು ಅಧಿಕಾರಿಗಳು ಸಾವನ್ನಪ್ಪಿ, 15 ಜನ ಅಸ್ವಸ್ಥರಾಗಿರುವ ಘಟನೆ ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿರು ಇಫ್ಕೋ ಕಾರ್ಖಾನೆಯಲ್ಲಿ ನಡೆದಿದೆ.
ಮೃತರನ್ನು ವಿ.ಪಿ ಸೀಂಗ್ ಹಾಗೂ ಅಭಯ್ ನಂದನ್ ಎಂದು ಗುರುತಿಸಲಾಗಿದೆ. ಭಾರೀ ಪ್ರಮಾಣದ ಅನಿಲ ಸೋರಿಕೆಯ ಈ ಅವಘಡಕ್ಕೆ ಕಾರಣವಾಗಿದೆ. ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೊ-ಆಪರೇಟಿವ್ ಲಿಮಿಟೆಡ್ನ ಫುಲ್ ಫುರ್ ಘಟಕದಲ್ಲಿ ಈ ದುರಂತ ಸಂಭವಿಸಿದೆ.
Advertisement
Advertisement
ಈ ಅವಘಡದಲ್ಲಿ ಅಸ್ವಸ್ಥಗೊಂಡ 15 ಮಂದಿಯನ್ನು ಸ್ಥಳೀಮಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಖಾನೆಯಲ್ಲಿ ಅನಿಲ ಸೋರುತ್ತಿರುವುದನ್ನು ನಿಯಂತ್ರಣಕ್ಕೆ ತರಲಾಗಿದೆ. ಎಲ್ಲಾ ಅಗತ್ಯ ಕ್ರಮವನ್ನು ಈಗಾಗಲೇ ಕೈಗೊಳ್ಳಲಾಗಿದೆ.
Advertisement
Advertisement
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ದುರಂತ ಅವಘಡದ ಕುರಿತು ಕಳವಳ ವ್ಯಕ್ತ ಪಡಿಸಿದ್ದಾರೆ. ಕೂಡಲೇ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
15 employees of IFFCO plant at Phoolpur fall ill following gas leakage, admitted to hospital: Prayagraj DM Bhanu Chandra Goswami
(Visuals from the hospital where the patients are admitted) https://t.co/OFnIt4nN3C pic.twitter.com/UfIQcbDjaM
— ANI UP (@ANINewsUP) December 23, 2020
ಕಳೆದ ಐದಾರು ವರ್ಷಗಳಿಂದ ಈ ಘಟಕದಲ್ಲಿ ಹಲವಾರು ಬಾರಿ ಅನಿಲ ಸೋರಿಕೆಯಾಗಿದೆ. 2019ರಲ್ಲಿ ವಿಷ ಅನಿಲ ಸೋರಿಕೆಯಿಂದ ನಾಲ್ವರು ಕಾರ್ಮಿಕರು ಮೂರ್ಛೆ ತಪ್ಪಿದ್ದರು ಎಂದು ತಿಳಿದುಬಂದಿದೆ.