– ಮಳೆಯ ನಡುವೆ ವ್ಯಕ್ತಿಯ ಹುಚ್ಚಾಟ
– ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್
ಲಕ್ನೋ: ಮಳೆಯ ನಡುವೆ ಕಾರ್ ಕಿಟಕಿಯ ಮೇಲೆ ಕುಳಿತು ಸ್ಟಂಟ್ ಮಾಡಿದ್ದ ವ್ಯಕ್ತಿಗೆ ಗಾಜಿಯಾಬಾದ್ ಪೊಲೀಸರು 20-20 ಶಾಕ್ ನೀಡಿದ್ದಾರೆ. ಉತ್ತರ ಪ್ರದೇಶದ ವಿಜಯ ನಗರದ ಪ್ರತಾಪ್ ವಿಹಾರದಲ್ಲಿ ಈ ಘಟನೆ ನಡೆದಿದೆ.
ಭಾನುವಾರ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಆಗಿತ್ತು. ವ್ಯಕ್ತಿಯೋರ್ವ ಮದ್ಯಪಾನ ಮಾಡುತ್ತಾ ಕಾರ್ ಹಿಂಭಾಗದ ಕಿಟಕಿಯ ಮೇಲೆ ಕುಳಿತು ಸ್ಟಂಟ್ ಮಾಡುತ್ತಿದ್ದನು. ಇದರ ಜೊತೆ ಈತನ ಹಿಂದೆ ಮತ್ತು ಮುಂದೆ ಇರೋ ಕಾರ್ ಗಳಲ್ಲಿ ಸೈರನ್ ಹಾಕಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಲಾಗಿತ್ತು. ವೀಡಿಯೋ ನೋಡಿದ ಪೊಲೀಸರು ಕಾರ್ ನಂಬರ್ ಪ್ಲೇಟ್ ಸಹಾಯದಿಂದ ಮೂವರು ಕಾರ್ ಮಾಲೀಕರನ್ನು ಪತ್ತೆ ಮಾಡಿ ತಲಾ 20 ಸಾವಿರ ರೂ.ನಂತೆ ದಂಡ ಹಾಕಿದ್ದಾರೆ.
Advertisement
गाजियाबाद के प्रताप विहार में 3 कारों से स्टंट करने का वीडियो वायरल हुआ. जिसमें आरोपी कार की खिड़कियों से निकल कर हंगामा करते और सायरन बजाते हुए चल रहे हैं. वीडियो का संज्ञान लेते हुए @Gzbtrafficpol ने 3 गाड़ियों का 20-20 हजार रुपये का चालान किया है. @ghaziabadpolice @Uppolice pic.twitter.com/KN9m13krY4
— Parvez Sagar (@itsparvezsagar) August 9, 2021
Advertisement
ಭಾನುವಾರ ವೈರಲ್ ಆದ ವೀಡಿಯೋದಲ್ಲಿ ಕಾರ್ ನಂಬರ್ ಕಾಣಿಸುತ್ತಿತ್ತು. ಅವುಗಳ ಸಹಾಯದಿಂದ ಕಾರ್ ಮಾಲೀಕರನ್ನ ಪತ್ತೆ ಮಾಡಿ ಠಾಣೆಗೆ ಕರೆಸಲಾಯ್ತು. ಸೂರಜ್ಪಾಲ್, ರಾಹುಲ್ ನಾಗರ್ ಮತ್ತು ಶೇಖರ್ ಕುಮಾರ್ ಕಾರ್ ಮಾಲೀಕರಿಗೆ ಪ್ರತ್ಯೇಕವಾಗಿ 20 ಸಾವಿರ ರೂ.ನಂತೆ ದಂಡ ಹಾಕಿದ್ದೇವೆ ಎಂದು ಪೊಲೀಸ್ ಅಧೀಕ್ಷಕ ರಾಮಾನಂದ್ ಕುಶುವಾಹಾ ಹೇಳಿದ್ದಾರೆ. ಇದನ್ನೂ ಓದಿ: ಲವ್ ಯು ರಚ್ಚು ಶೂಟಿಂಗ್ ದುರಂತ – ನಿರ್ದೇಶಕ ಸೇರಿ ನಾಲ್ವರು ಪೊಲೀಸ್ ವಶಕ್ಕೆ
Advertisement
Advertisement
ಟ್ರಾಫಿಕ್ ನಿಯಮ ಉಲ್ಲಂಘನೆ, ಸಾರ್ವಜನಿಕರಿಗೆ ಕಿರಿಕಿರಿ, ಮದ್ಯಪಾನ, ಶಬ್ದ ಮಾಲಿನ್ಯ, ವಿಮೆ ಇಲ್ಲದೇ ವಾಹನ ಚಾಲನೆ ಸೇರಿದಂತೆ ಒಟ್ಟು 20 ಸಾವಿರದಂತೆ ದಂಡ ಹಾಕಿದ್ದಾರೆ. ಮುಂದೆ ಯಾರಾದ್ರೂ ಈ ರೀತಿ ಹುಚ್ಚಾಟ ಪ್ರದರ್ಶಿಸಿದ್ರೆ ದಂಡ ಹಾಕಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿಂದು 1,186 ಹೊಸ ಕೊರೊನಾ ಪ್ರಕರಣ – ಪಾಸಿಟಿವಿಟಿ ರೇಟ್ ಶೇ.0.89