ಚಿಕ್ಕಮಗಳೂರು: ಸಂಬಂಧಿಯನ್ನ ಬ್ಯಾಂಕಿಗೆ ಡ್ರಾಪ್ ಮಾಡಿ ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಕಾಫಿತೋಟದೊಳಕ್ಕೆ ಪಲ್ಟಿಯಾಗಿರೋ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಜಾವಳಿ ಎಸ್ಟೇಟ್ ಸಮೀಪ ನಡೆದಿದೆ. ಅದೃಷ್ಟವಶಾತ್ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Advertisement
ಜಾವಳಿ ಗ್ರಾಮದ ಗಿರೀಶ್ ಎಂಬವರು ತಮ್ಮ ಸಂಬಂಧಿಯನ್ನ ಮೂಡಿಗೆರೆಯ ಬ್ಯಾಂಕಿಗೆ ಡ್ರಾಪ್ ಮಾಡಿ ಹಿಂದಿರುಗಿ ಹೋಗುವಾಗ ಈ ಅಪಘಾತ ಸಂಭವಿಸಿದೆ. ರಸ್ತೆ ಬದಿ ತಡೆಗೋಡೆಗಳು ಇಲ್ಲದ್ದಕ್ಕೆ ಈ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರು ಕಾಫಿತೋಟದಲ್ಲಿ ಪಲ್ಟಿಯಾಗಿದ್ದರಿಂದ ಚಾಲಕ ಗಿರೀಶ್ ಸಣ್ಣ-ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಲೆನಾಡಲ್ಲಿ ಇಡೀ ದಿನ ಸಾಧಾರಣ ಮಳೆ ಸುರಿಯುತ್ತಿದೆ. ಮಲೆನಾಡಿನ ರಸ್ತೆಗಳು ಅತಿಯಾದ ತಿರುವಿನಿಂದ ಕೂಡಿದ್ದು ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಕಾಫಿ ತೋಟದೊಳಕ್ಕೆ ಪಲ್ಟಿಯಾಗಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
Advertisement
Advertisement
ಸ್ಥಳೀಯರು ರಸ್ತೆಗಳಿಗೆ ತಡೆಗೋಡೆಗಳು ಇಲ್ಲದ್ದಕ್ಕೆ ಈ ಅಪಘಾತಕ್ಕೆ ಕಾರಣ ಎಂದು ಅಸಮಾಧಾನ ಹೊರಹಾಕಿ, ಕೂಡಲೇ ಅಪಾಯಕಾರಿ ತಿರುವುಗಳಿಗೆ ತಡೆಗೋಡೆ ನಿರ್ಮಿಸಬೇಕೆಂದು ಆಗ್ರಹಿಸಿದ್ದಾರೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಈ ಭಾಗದಲ್ಲಿ ಕಳೆದೊಂದು ತಿಂಗಳಲ್ಲಿ ಸುಮಾರು ಏಳೆಂಟು ಸ್ಥಳೀಯ ಹಾಗೂ ಪ್ರವಾಸಿ ಕಾರುಗಳು ಪಲ್ಟಿಯಾಗಿವೆ. ಅದೃಷ್ಟವಶಾತ್ ಎಲ್ಲೂ ಕೂಡ ಸಾವು ಸಂಭವಿಸಿಲ್ಲ. ಹಾಗಾಗಿ ಸ್ಥಳೀಯರು ಈ ಭಾಗದಲ್ಲಿ ಮೇಲಿಂದ ಮೇಲೆ ಅಪಘಾತಗಳು ಸಂಭವಿಸುತ್ತಿವೆ. ಹಾಗಾಗಿ ಸರ್ಕಾರ ಅಪಾಯಕಾರಿ ತಿರುವುಗಳಲ್ಲಿ ತಡೆಗೋಡೆ ನಿರ್ಮಿಸಬೇಕೆಂದು ಆಗ್ರಹಿಸಿದ್ದಾರೆ.