ಚಿಕ್ಕಮಗಳೂರು: ಕಾಂಗ್ರೆಸ್ ಒಳಗಿನ ಬಣ ರಾಜಕೀಯಕ್ಕೆ ಬಲಿಪಶು ಅಖಂಡ ಶ್ರೀನಿವಾಸ್ ಮೂರ್ತಿ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಚಿಕ್ಕಮಗಳೂರಿನಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನಾವು ನವೀನ್ ಸಮರ್ಥನೆಗೂ ನಿಂತುಕೊಂಡಿಲ್ಲ. ನವೀನ್ ಪ್ರತಿಕ್ರಿಯೆ ನೀಡಿದ್ದಾನೆ. ನಾನು ರಾಮ-ಕೃಷ್ಣನ ಬಗ್ಗೆ ಹಾಕಿದ್ದ ಪೋಸ್ಟ್ ಗೆ ಪ್ರತಿಕ್ರಿಯಿಸಿದ್ದು ಎಂದು. ಅದರ ಬಗ್ಗೆಯೂ ತನಿಖೆಯಾಗಬೇಕು. ತಪ್ಪು ಮಾಡಿದ್ದರೆ ನವೀನ್ಗೂ ಶಿಕ್ಷೆಯಾಗಬೇಕು. ರಾಮ-ಕೃಷ್ಣನ ಮೇಲೆ ಪೋಸ್ಟ್ ಹಾಕಿದವರ ಮೇಲೂ ಶಿಕ್ಷೆಯಾಗಬೇಕು. ಆ ಮೂಲಕ ಕಾನೂನು ಕೈಗೆತ್ತಿಕೊಂಡಿರೋರ್ಗೂ ಶಿಕ್ಷೆ ಆಗಬೇಕು ಎಂದಿದ್ದಾರೆ.
Advertisement
Advertisement
ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶವಿಲ್ಲ. ಇದು ಪ್ರಾಯೋಜಿತವಾಗಿರುವಂತಹ ದಾಳಿ ಎಂದರು. ಈಗ ಏಕೆ ದಲಿತ ಶಾಸಕನ ಮನೆ ಮೇಲಿನ ದೌರ್ಜನ್ಯಕ್ಕೆ ಬಾಯಿ ಮುಚ್ಚಿಕೊಂಡು ಇದ್ದಾರೆ. ಎಲ್ಲಿದೆ ಅಹಿಂದಾ ಪ್ರೇಮ. ರೋಷನ್ ಬೇಗ್ ಕೊಟ್ಟದ್ದು ಒಂದೇ ಸ್ಟೇಟ್ಮೆಂಟ್. ಒಂದೇ ಸ್ಟೇಟ್ಮೆಂಟ್ಗೆ ಅವರನ್ನ ಪಕ್ಷದಿಂದ ಅಮಾನತು ಮಾಡಿದರು. ಆರು ಬಾರಿ ಎಂ.ಎಲ್.ಎ. ಆಗಿದ್ದವರು. 30 ವರ್ಷ ಕಾಂಗ್ರೆಸ್ ಪಾರ್ಟಿಯ ಲೀಡ್ರು. ಒಂದೇ ಸ್ಟೇಟ್ಮೆಂಟ್ಗೆ ಉಚ್ಛಾಟನೆ. ತನ್ವೀರ್ ಸೇಠ್ ಮೇಲೆ ಮಾರಾಣಾಂತಿಕ ಹಲ್ಲೆ ಆಯ್ತು. ಏನಾಯ್ತು? ಏನಿಲ್ಲ. ಅಂದ್ರೆ ಏನ್ ಪ್ರೀತಿ. ಈಗ ಅಹಿಂದಾದಲ್ಲಿ ಯಾವ್ಯಾವುದನ್ನ ಕೈಬಿಟ್ಟಿದ್ದಾರೆಂದು ನೋಡಬಹುದಲ್ಲ ಎಂದರು.
Advertisement
Advertisement
ಬುದ್ಧಿ ಜೀವಗಳು ಲದ್ದಿ ತಿನ್ನುತ್ತಿರಬಹುದು ಎಂದ ಸಿ.ಟಿ.ರವಿ, ನೆಪ ಏನೇ ಇರಬಹುದು. ಟಾರ್ಗೇಟ್ ಆಗಿರೋದು ಹಿಂದೂಗಳು. ವಾಹನ ಸುಟ್ಟಿದ್ದಾರೆ. ಮನೆಗಳ ಮೇಲೆ ದಾಳಿ ಆಗಿದೆ. ಸಿಕ್ಕವರ ಮೇಲೆಲ್ಲಾ ಆಗಿಲ್ಲ. ಪೊಲೀಸ್ ಹಾಗೂ ಹಿಂದೂಗಳ ಟಾರ್ಗೆಟ್ ಆಗಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತೆ ಎಂದಿದ್ದಾರೆ.