ಬೆಂಗಳೂರು: ಪುಲಿಕೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರ ಮನೆ ಧ್ವಂಸಗೊಂಡರೂ ಕೈ ನಾಯಕರು ಮೌನ ವಹಿಸಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
Karnataka: Residence of Congress MLA Akhanda Srinivasamurthy was attacked last night, as violence broke out in Bengaluru over an alleged inciting social media post.
Section 144 imposed in entire Bangalore city. Curfew imposed in DJ Halli and KG Halli police station limits. pic.twitter.com/fEYJvUdomD
— ANI (@ANI) August 12, 2020
Advertisement
ಹೌದು. ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ವಿರುದ್ಧ ಒಂದು ಸಮುದಾಯದ ಜನ ದಾಂಧಲೆ ನಡೆಸಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ಮೌನವಾಗಿದ್ದು, ಈ ಮೂಲಕ ಧರ್ಮ ಸೂಕ್ಷ್ಮ ವಿಚಾರದಲ್ಲಿ ಮಧ್ಯಪ್ರವೇಶ ಮಾಡದೇ ಸುಮ್ಮನಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಕೆ.ಜಿ.ಹಳ್ಳಿ ಗಲಭೆ ಪ್ರಕರಣ – ಪೊಲೀಸರ ಗೋಲಿಬಾರ್ಗೆ ಮೂವರು ಬಲಿ, 110 ಮಂದಿ ಅರೆಸ್ಟ್
Advertisement
DJ Halli Police Station in Bengaluru vandalised last night, as violence broke out in the city over an alleged inciting social media post.
Sec 144 CrPC imposed in Bangaluru city,curfew in DJ Halli & KG Halli police station limits. 2 died, 110 arrested, 60 Police personnel injured pic.twitter.com/CO1ZdIzLbx
— ANI (@ANI) August 12, 2020
Advertisement
ದುರ್ಘಟನೆ ಬಗ್ಗೆ ಇದೂವರೆಗೆ ಕೈ ನಾಯಕರು ಚಕಾರ ಎತ್ತಿಲ್ಲ. ಟ್ವೀಟ್ ಮೂಲಕ ಪ್ರತಿಯೊಂದು ವಿಷಯದ ಬಗ್ಗೆಯೂ ಪ್ರಶ್ನೆ ಮಾಡ್ತಿದ್ದ ಕೈ ನಾಯಕರು ಇದೀಗ ಮೌನವಹಿಸಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿದೆ. ದಿನೇಶ್ ಗುಂಡೂರಾವ್ ಒಬ್ಬರು ಟ್ವೀಟ್ ಮಾಡಿ ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದು ಬಿಟ್ಟರೆ ಉಳಿದವರು ಘಟನೆ ಖಂಡಿಸದೇ ಮೌನ ತಾಳಿರುವುದು ಅಚ್ಚರಿಗೆ ಕಾರಣವಾಗಿದೆ. ಇದನ್ನೂ ಓದಿ: ಕೆಜಿ ಹಳ್ಳಿ ಗಲಭೆ ಪ್ರಕರಣ – ಎಸ್ಡಿಪಿಐ ಮುಖಂಡ ಅರೆಸ್ಟ್
Advertisement
ಯಾರೂ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಬಾರದು.
ಈ ನೆಲದ ಕಾನೂನಿಗೆ ಎಲ್ಲರೂ ಗೌರವ ಕೊಡಲೇಬೇಕು.
ಪ್ರಚೋದನೆಗೊಳಗಾಗಿ ಹಿಂಸಾಕೃತ್ಯದಲ್ಲಿ ತೊಡಗುವುದು ಅಕ್ಷಮ್ಯ.
ಪೊಲೀಸರು ಕೂಡಲೇ ಕ್ರಮ ತೆಗೆದುಕೊಳ್ಳಬೇಕು.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) August 11, 2020
ನಿನ್ನೆ ರಾತ್ರಿ ಗುಂಪೊಂದು ಶಾಸಕರ ಮನೆಗೆ ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಿದೆ. ಘಟನೆಯಿಂದ ಶಾಸಕರ ಮೂರು ಅಂತಸ್ತಿನ ಮನೆ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಆದರೆ ಈ ವೇಳೆ ಸಾಸಕರು ಮನೆಯಲ್ಲಿ ಇರಲಿಲ್ಲ. ಗಲಭೆಗೂ ಮುನ್ನ ಶಾಸಕರು ತಮ್ಮ ಪುಲಿಕೇಶಿ ನಗರದ ಮನೆ ಖಾಲಿ ಮಾಡಿದ್ದರು. ಹೀಗಾಗಿ ಶಾಸಕಹಾಗೂ ಕುಟುಂಬ ಭಾರೀ ಅನಾಹುತದಿಂದ ಪಾರಾಗಿದೆ. ಇದನ್ನೂ ಓದಿ: ಕಾವಲ್ ಭೈರಸಂದ್ರ ಉದ್ವಿಗ್ನ – ಪಕ್ಕಾ ಪ್ಲಾನ್ ಮಾಡಿ ವಿಕೃತಿ ಮೆರೆದ ಪುಂಡರು
ಪ್ರವಾದಿ ಪೈಗಂಬರ್ ಬಗ್ಗೆ ನಿಂದಾನಾತ್ಮಕವಾಗಿ ಯಾರೇ ಬರೆದಿದ್ದರೂ ಅದನ್ನು ನಾನು ಖಂಡಿಸುತ್ತೇನೆ. ಅದು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಕೆಲ ಕಿಡಿಗೇಡಿಗಳ ಕೆಲಸ.
ಆದರೆ ಪುಲಕೇಶಿ ನಗರದಲ್ಲಿ ಶಾಸಕ ಅಖಂಡ ಶ್ರೀನಿವಾಸ್ ಮನೆ ಮೇಲಿನ ದಾಳಿ ಮತ್ತು ಪೊಲೀಸ್ ಠಾಣೆಯ ಮೇಲಿನ ದಾಳಿ ದುರದೃಷ್ಟಕರ.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) August 11, 2020