ಮುಂಬೈ: ಹಿರಿಯ ಚಲನಚಿತ್ರ ನಿರ್ದೇಶಕ ಮತ್ತು ಬರಹಗಾರ ಸಾಗರ್ ಸರ್ಹಾದಿ(88) ಇಂದು ಬೆಳಗ್ಗೆ ಮುಂಬೈನಲ್ಲಿ ನಿಧನರಾಗಿದ್ದಾರೆ.
ಸಾಗರ್ ಸರ್ಹಾದಿಯವರು ದಿವಾನಾ, ಕಹೋ ನ ಪ್ಯಾರ್ ಹೇ, ಸಿಲ್ಸಿಲಾ ಸಿನಿಮಾದಲ್ಲಿ ಕಾರ್ಯನಿರ್ವಹಿಸುವ ಮೂಲಕ ಖ್ಯಾತಿ ಪಡೆದಿದ್ದರು. ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಇತ್ತೀಚೆಗಷ್ಟೇ ಸಿಯಾನ್ನ ಹೃದಯ ಆರೈಕೆ ಆಸ್ಪತ್ರೆಯ ಐಸಿಯುಗೆ ದಾಖಲಾಗಿದ್ದರು.
Advertisement
Advertisement
ಈ ವಿಚಾರವನ್ನು ಬಾಲಿವುಡ್ ಸಿನಿಮಾದ ನಿರ್ಮಾಪಕ ಅಶೋಕ್ ಪಂಡಿತ್, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಪ್ರಸಿದ್ಧ ಬರಹಗಾರ ಹಾಗೂ ನಿರ್ದೇಶಕ ಸಾಗರ್ ಸರ್ಹಾದಿಯವರಿಗೆ ಹೃದಯಾಘಾತವಾದ ಸುದ್ದಿ ಕೇಳಿ ಮನಸ್ಸಿಗೆ ಭಾರೀ ಆಘಾತವಾಗಿದೆ. ಕಭಿ ಕಭಿ, ನೂರಿ, ಚಾಂದನಿ, ಡೂಸ್ರಾಆಡ್ಮಿ, ಸಿಲ್ ಸಿಲಾ ಇವರ ಕೆಲವು ಪ್ರಸಿದ್ಧ ಸಿನಿಮಾಗಳಾಗಿದ್ದು, ಬಜಾರ್ನನ್ನು ಬರೆದು ನಿರ್ದೇಶಿಸಿದ್ದಾರೆ.
Advertisement
Sad to know about d demise of Sagar Sarhadi ji a well known writer,director due 2 heart attack .
Some of hs well known films as writer wr #KabhieKabhie #NOORIE #chandni #DoosraAadmi #Silsila .
He also wrote &directed #Bazaar .
It’s a great loss to d film industry.
ॐ शान्ति ! pic.twitter.com/VxPxc1TFhw
— Ashoke Pandit (@ashokepandit) March 22, 2021
Advertisement
ಇಂಡಸ್ಟ್ರಿಗೆ ಬರುವ ಮುನ್ನ ಸಾಗರ್ ಸಹಾರ್ದಿ ಒಬ್ಬ ಉರ್ದು ಬರಹಗಾರರಾಗಿದ್ದರು. ಹಲವಾರು ಸಣ್ಣ ಕಥೆಗಳು ಹಾಗೂ ನಾಟಕಗಳನ್ನು ನಿರ್ದೇಶಿಸಿದ್ದರು. ಅವರ ಸಾವಿನ ಸುದ್ದಿ ಬೆಳಕಿಗೆ ಬರುತ್ತಿದ್ದಂತೆಯೇ ಇದೀಗ ಅನೇಕ ಗಣ್ಯಾತಿಗಣ್ಯರು ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸಿದ್ದಾರೆ.
https://twitter.com/rajbansal9/status/1373843417730404355