ಭೋಪಾಲ್: ಆಟವಾಡುತ್ತಿದ್ದ ಬಾಲಕಿಯನ್ನು ಕಿರಾತಕನೊಬ್ಬ ಕಸದ ತೊಟ್ಟಿಯೊಳಗೆ ಹೊತ್ತೊಯ್ದು ಅತ್ಯಾಚಾರ ಎಸಗಿ ಈ ವಿಚಾರವನ್ನು ಎಲ್ಲೂ ಹೇಳಬೇಡ ಎಂದು 5 ರೂಪಾಯಿ ನೀಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
Advertisement
8 ವರ್ಷದ ಬಾಲಕಿ ಮನೆಯ ಅಂಗಳದಲ್ಲಿ ಆಟವಾಡುತ್ತಾ ಕುಳಿತಿದ್ದಳು. ಈ ವೇಳೆ ಓರ್ವ ವ್ಯಕ್ತಿ ಆಕೆಯ ಕೈಗೆ 100 ರೂಪಾಯಿ ಇಟ್ಟು ಅಂಗಡಿಗೆ ಹೋಗಿ ತಂಬಾಕು ತೆಗೆದುಕೊಂಡು ಬಂದು ಕಸದ ತೊಟ್ಟಿಯಲ್ಲಿರುವ ಅಂಕಲ್ಗೆ ಕೊಡು ಎಂದು ಹೇಳಿದ್ದಾನೆ. ಏನು ಅರಿಯದ ಬಾಲಕಿ ಕೊಡಲು ಹೋಗಿದ್ದಾಳೆ. ಆಗ ಕಸದ ತೊಟ್ಟಿ ಬಳಿ ಇರುವ ವ್ಯಕ್ತಿ ಬಾಲಕಿಯನ್ನು ಎಳೆದುಕೊಂಡು ಅತ್ಯಾಚಾರ ಮಾಡಿದ್ದಾನೆ. ನಂತರ ಈ ವಿಚಾರ ಹೇಳದಂತೆ ಆಕೆಯ ಕೈಗೆ 5 ರೂಪಾಯಿ ಇಟ್ಟು ಕಳಿಸಿದ್ದಾನೆ.
Advertisement
Advertisement
ಮನೆಗೆ ಬಂದ ಬಾಲಕಿ ನಡೆದಿರುವ ವಿಚಾರವನ್ನು ಹೇಳಿದ್ದಾಳೆ. ನಂತರ ಬಾಲಕಿಯ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಾಲಕಿಗೆ 40 ಮಂದಿ ಅನುಮಾನಸ್ಪದ ವ್ಯಕ್ತಿಗಳ ಫೋಟೋವನ್ನು ತೋರಿಸಲಾಗಿದೆ. ಬಾಲಕಿ ರವಿ ಎನ್ನುವ ವ್ಯಕ್ತಿಯ ಫೋಟೋವನ್ನು ಗುರುತಿಸಿದ್ದಾಳೆ. ಆರೋಪಿ ರವಿಯನ್ನು ಬಂಧಿಸಿ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.
Advertisement