ಭೋಪಾಲ್: ಪೊಲೀಸ್ ಅಧಿಕಾರಿಯ ಮನೆಯಲ್ಲಿ ಬೆಲೆಬಾಳುವ ವಸ್ತು ಕಳ್ಳತನ ಮಾಡಿದ ಕಳ್ಳ ಕ್ಷಮೆ ಪತ್ರ ಬರೆದಿಟ್ಟಿರುವ ಘಟನೆ ಮಧ್ಯಪ್ರದೇಶದ ಭಿಂದ್ ನಗರದಲ್ಲಿ ನಡೆದಿದೆ. ಇದನ್ನೂ ಓದಿ: 15 ದಿನಗಳ ನಂತರ ಮತ್ತೆ ಲಾಕ್ಡೌನ್ ಮಾಡಬೇಕಾಗುತ್ತೆ,ಜನರೇ ಎಚ್ಚರ: ಬಿಎಸ್ವೈ
ಕೊತ್ವಾಲ್ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ (ಎಎಸ್ಐ) ಕಮಲೇಶ್ ಕಟಾರೆ, ಛತ್ತೀಸ್ಗಢದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಕುಟುಂಬ ಭಿಂಡ್ ನಗರದಲ್ಲಿ ವಾಸಿಸುತ್ತಿದೆ. ಪೊಲೀಸರ ಪತ್ನಿ ಮತ್ತು ಅವರ ಮಕ್ಕಳು ಜೂನ್ 30 ರಂದು ಸಂಬಂಧಿಕರ ಮನೆಗೆ ತೆರಳಿದ್ದರು.
Advertisement
Advertisement
ಮನೆಗೆ ಮರಳಿ ಬಂದಾಗ ಅವರ ಮನೆಯ ಬೀಗ ಮುರಿದು ಬಿದ್ದಿತ್ತು. ವಸ್ತುಗಳು ಎಲ್ಲೆಡೆ ಹರಡಿದ್ದವು. ಬಳಿಕ ಮನೆಯೊಳಗೆ ಸಿಕ್ಕ ಪತ್ರದಲ್ಲಿ ಕಳ್ಳ, ಕ್ಷಮಿಸಿ ಫ್ರೆಂಡ್, ಇದು ಅನಿವಾರ್ಯವಾಗಿತ್ತು. ನಾನು ಇದನ್ನು ಮಾಡದಿದ್ದರೆ, ನನ್ನ ಸ್ನೇಹಿತನು ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದನು. ಚಿಂತಿಸಬೇಡಿ, ನಾನು ಹಣವನ್ನು ಪಡೆದ ತಕ್ಷಣ ಕದ್ದ ಹಣವನ್ನು ಹಿಂದಿರುಗಿಸುತ್ತೇನೆ ಎಂದು ಕಳ್ಳ ಬರೆದಿರುವ ಪತ್ರ ಸಿಕ್ಕಿದೆ. ಇದನ್ನೂ ಓದಿ: ಪೊಲೀಸರಿಂದ ಪರಿಸರ ಪ್ರೇಮ – ಬೀಟ್ಗೊಂದು ಮರ ಅಭಿಯಾನ
Advertisement
Advertisement
ಪೊಲೀಸರ ಪ್ರಕಾರ ಬೆಳ್ಳಿ ಮತ್ತು ಚಿನ್ನದ ಆಭರಣಗಳನ್ನು ಕಳ್ಳತನ ಮಾಡಲಾಗಿದೆ ಮತ್ತು ಕುಟುಂಬದ ಕೆಲವು ಪರಿಚಯಸ್ಥರು ಈ ಕೃತ್ಯದಲ್ಲಿ ಭಾಗಿಯಾಗಿರಬಹುದು ಎಂಬ ಶಂಕೆ ಕೂಡ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.