– ವಿಶ್ವದ ಟಾಪ್ 100 ಬಿಲಿಯನೇರ್ಗಳ ಪಟ್ಟಿ ಬಿಡುಗಡೆ
– ಹುರನ್ ಇಂಡಿಯಾ ಸಂಸ್ಥೆಯಿಂದ ವರದಿ ಬಿಡುಗಡೆ
ನವದೆಹಲಿ: ಕೋವಿಡ್ 19 ಸಮಯದಲ್ಲಿ ಶತಕೋಟ್ಯಧಿಪತಿಗಳ ಸಂಪತ್ತು ಕರಗಿತ್ತು. ಆದರೆ ಈಗ ನಿಧಾನವಾಗಿ ವಿಶ್ವದ ಜನ ಜೀವನ ಹಳಿಗೆ ಬರುತ್ತಿದ್ದಂತೆ ಕೋಟ್ಯಧಿಪತಿಗಳ ಸಂಪತ್ತು ಏರಿಕೆಯಾಗುತ್ತಿದೆ.
ಹೌದು, ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯ ಮುಖ್ಯಸ್ಥ ಮುಕೇಶ್ ಅಂಬಾನಿ ಕಳೆದ ಎರಡು ತಿಂಗಳಿನಲ್ಲಿ ಪ್ರತಿ ಗಂಟೆಗೆ 95 ಕೋಟಿ ರೂ. ಸಂಪತ್ತು ಗಳಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
Advertisement
Advertisement
ಹುರನ್ ಇಂಡಿಯಾ ಕೋವಿಡ್ 19 ನಿಂದಾಗಿ ಸಂಪತ್ತು ಕಳೆದುಕೊಂಡವರು ಮತ್ತು ಸಂಪತ್ತು ಹೆಚ್ಚಿಸಿಕೊಂಡ 100 ಮಂದಿ ಬಿಲಿಯನೇರ್ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವರದಿ ಪ್ರಕಾರ, ಕೋವಿಡ್ 19 ಮೊದಲ ಎರಡು ತಿಂಗಳು ಮುಕೇಶ್ ಅಂಬಾನಿ 1,43,500 ಕೋಟಿ ರೂ. ನಷ್ಟ ಅನುಭವಿಸಿದರೆ ನಂತರದ ಎರಡು ತಿಂಗಳಿನಲ್ಲಿ 1,35,900 ಕೋಟಿ ರೂ. ಗಳಿಸಿದ್ದಾರೆ ಎಂದು ತಿಳಿಸಿದೆ.
Advertisement
Advertisement
ಪುಣೆ ಸೇರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥಾಪಕ ಮತ್ತು ಅಧ್ಯಕ್ಷ ಸೈರಸ್ ಪೂನಾವಾಲಾ ಸಂಪತ್ತು ಶೇ.25ರಷ್ಟು ಏರಿಕೆಯಾಗಿದೆ. 1,13,300 ಕೋಟಿ ರೂ. ಸಂಪತ್ತು ಗಳಿಸುವ ಮೂಲಕ 57ನೇ ಸ್ಥಾನ ಪಡೆದಿದ್ದಾರೆ ಎಂದು ತಿಳಿಸಿದೆ. ಕೋವಿಡ್ 19 ಸಂಬಂಧ ಔಷಧಿಗಳನ್ನು ಸರಬರಾಜು ಮಾಡಿದ ಪರಿಣಾಮ ಸಂಪತ್ತು ಭಾರೀ ಏರಿಕೆಯಾಗಿದೆ.
100 ಮಂದಿ ಬಿಲಿಯನೇರ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತದ ಗೌತಮ್ ಅದಾನಿ ಮತ್ತು ಎಚ್ಸಿಎಲ್ ಸಂಸ್ಥೆಯ ಮುಖ್ಯಸ್ಥ ಶಿವ್ ನಡಾರ್ ಸಂಪತ್ತು ಇಳಿಕೆಯಾಗಿದೆ. ಇಬ್ಬರ ಸಂಪತ್ತು ಅನುಕ್ರಮವಾಗಿ ಶೇ.18 ಮತ್ತು ಶೇ.6 ರಷ್ಟು ಇಳಿಕೆಯಾಗಿದೆ.
ಅಮೆಜಾನ್ ಸಂಸ್ಥೆಯ ಸ್ಥಾಪಕ ಜೆಫ್ ಬೆಜೋಸ್ ವಿಚ್ಛೇದನ ನೀಡಿದ ಬಳಿಕವೂ ವಿಶ್ವದ ಟಾಪ್ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿದಿದ್ದಾರೆ. ವಿಚ್ಛೇದನ ನೀಡಿದ ಬಳಿಕವೂ ಜಿಜೊಸ್ ಸಂಪತ್ತು 12,08,200 ಕೋಟಿ ರೂ. ಏರಿಕೆಯಾಗಿದ್ದರೆ ಬಿಲ್ ಗೇಟ್ಸ್ ಸಂಪತ್ತು ಶೇ.6 ರಷ್ಟು ಇಳಿಕೆಯಾಗಿದ್ದು 7,55,100 ಕೋಟಿ ರೂ. ಗಳಿಸಿದ್ದಾರೆ.
ಹುರನ್ ಇಂಡಿಯಾ ವರದಿ ಪ್ರಕಾರ ವಿಶ್ವದ ಟಾಪ್ 100 ಶ್ರೀಮಂತರು ಕೋವಿಡ್ 19 ಸ್ಫೋಟದ ಮೊದಲ ಎರಡು ತಿಂಗಳು ಭಾರೀ ನಷ್ಟ ಅನುಭವಿಸಿದರೆ ನಂತರದ 2 ತಿಂಗಳಿನಲ್ಲಿ ಶೇ.98ರಷ್ಟು ಸಂಪತ್ತನ್ನು ವೃದ್ಧಿಸಿಕೊಂಡಿದ್ದಾರೆ ಎಂದು ತಿಳಿಸಿದೆ.
ವಿಶ್ವದ ಅತ್ಯಂತ ದುಬಾರಿ ವಿಚ್ಛೇದನವನ್ನು ಅಮೆಜಾನ್ ಕಂಪನಿಯ ಜೆಫ್ ಬೆಜೋಸ್ ಪತ್ನಿ ಮೆಕೆಂಜಿ ಬೆಜೋಸ್ಗೆ ನೀಡಿದ್ದಾರೆ. ವಿಚ್ಛೇದನ ಸಮಯದಲ್ಲಿ ಕಂಪನಿಯ ಶೇ.4 ರಷ್ಟು ಷೇರುಗಳನ್ನು ನೀಡಿದ್ದರು. 48 ಶತಕೋಟಿ ಡಾಲರ್ ಮೌಲ್ಯದ ಷೇರುಗಳನ್ನು ಪಡೆಯುವ ಮೂಲಕ ವಿಶ್ವದ ಶತಕೋಟಿ ಮಹಿಳೆಯರ ಪಟ್ಟಿಯಲ್ಲಿ ಮೆಕೆಂಜಿ ನಾಲ್ಕನೇಯ ಸ್ಥಾನವನ್ನು ಪಡೆದಿದ್ದಾರೆ.