ಚಿಕ್ಕಬಳ್ಳಾಪುರ: ಕಲ್ಯಾಣಿ ನಿರ್ಮಾಣದ ವೇಳೆ ತಡೆಗೋಡೆಯ ಮಣ್ಣು ಕುಸಿದ ಪರಿಣಾಮ ಕಲ್ಯಾಣಿಯೊಳಗೆ ಬಿದ್ದು ಕಾರ್ಮಿಕ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು ದಿನ್ನೂರು ಗ್ರಾಮದಲ್ಲಿ ನಡೆದಿದೆ.
Advertisement
ಶ್ರೀನಿವಾಸಪುರ ಮೂಲದ ಅಂಜಿನಪ್ಪ(40) ಮೃತ ಕಾರ್ಮಿಕ. ಗ್ರಾಮಪಂಚಾಯತಿ ವತಿಯಿಂದ ನರೇಗಾ ಮೂಲಕ ಗ್ರಾಮದಲ್ಲಿ ಸುಂದರ ಕಲ್ಯಾಣಿ ನಿರ್ಮಾಣ ಕಾರ್ಯವನ್ನು ನಡೆಸಲಾಗುತ್ತಿತ್ತು. ಆದರೆ ತರಾತುರಿಯಲ್ಲಿ ಕಾಮಗಾರಿ ಮುಗಿಸಲು ಹಗಲು ರಾತ್ರಿ ಕಾರ್ಮಿಕರ ಕೈಯಲ್ಲಿ ಕೆಲಸ ಮಾಡಿಸಲಾಗುತ್ತಿದ್ದು ಎನ್ನಲಾಗಿದೆ.
Advertisement
Advertisement
ಮಳೆ ಬಂದಿದ್ದ ಸಂದರ್ಭದಲ್ಲಿಯೇ ಕಾಮಗಾರಿ ನಡೆಸುತ್ತಿದ್ದ ಕಾರಣ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕ ಕಲ್ಯಾಣಿಯೊಳಗೆ ಬಿದ್ದಿದ್ದಾರೆ. ಕಲ್ಯಾಣಿ ತುಂಬಾ ಆಳವಾಗಿದ್ದು ಕಾರ್ಮಿಕನನ್ನು ಮೇಲೆತ್ತುವಷ್ಟರಲ್ಲೇ ಮೃತಪಟ್ಟಿದ್ದಾರೆ.
Advertisement
ಸದ್ಯ ಗುತ್ತಿಗೆದಾರ ಹಾಗೂ ಗ್ರಾಮಪಂಚಾಯತ್ ಸದಸ್ಯ ತರಾತುರಿಯಲ್ಲಿ ಕಾಮಗಾರಿ ಮಾಡಲು ಮುಂದಾಗಿದ್ದೇ ಅವಘಡಕ್ಕೆ ಕಾರಣ ಅಂತ ಆರೋಪಿಸಲಾಗಿದೆ. ಈ ಸಂಬಂಧ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:ಸ್ವಾತಂತ್ರ್ಯೋತ್ಸವಕ್ಕೆ ನಾಟಕ ಅಭ್ಯಾಸ ಮಾಡುತ್ತಾ ಪ್ರಾಣ ಕಳೆದುಕೊಂಡ ಬಾಲಕ