ಬೆಂಗಳೂರು: ನಾನು ಕಲಿಯಬಾರದ ಚಟಗಳನ್ನೆಲ್ಲ ಕಲಿತು, ಆ ಒಂದು ಖಿನ್ನತೆಯಿಂದ ಆಚೆ ಬರಬೇಕು ಅಂತ ಮಾಡಬಾರದ ಅನಿಷ್ಟಗಳೆಲ್ಲವನ್ನೂ ಮಾಡಿದ್ದೇನೆ ಎಂದು ನಟ ಲೂಸ್ ಮಾದ ಯೋಗಿ ಸಂದರ್ಶನವೊಂದರಲ್ಲಿ ಹೇಳಿದ್ದರು. ಇದನ್ನೂ ಓದಿ: ಡ್ರಗ್ಸ್ ಕೇಸ್- ಐಎಸ್ಡಿಯಿಂದ ಲೂಸ್ ಮಾದ ಯೋಗಿ, ಅಯ್ಯಪ್ಪ ವಿಚಾರಣೆ
ಯೋಗಿ 4 ತಿಂಗಳ ಹಿಂದೆ ನೀಡಿದ ಸಂದರ್ಶನದಲ್ಲಿ ತಮ್ಮ ಜೀವನದ ಕಹಿ ಘಟನೆಯನ್ನು ಹಂಚಿಕೊಂಡಿದ್ದರು. ಇದನ್ನೂ ಓದಿ: ಡ್ರಗ್ಸ್ ದಂಧೆಯಲ್ಲಿ ರಾಗಿಣಿ ಆ್ಯಕ್ಟಿವ್ ಮೆಂಬರ್ – ಸೆ.24ರವರೆಗೂ ರಾಗಿಣಿ, ಸಂಜನಾಗೆ ಜೈಲು ಫಿಕ್ಸ್
Advertisement
Advertisement
ನಾನು ಕಲಿಯಬಾರದ ಚಟಗಳನ್ನೆಲ್ಲ ಕಲಿತು, ಆ ಒಂದು ಖಿನ್ನತೆಯಿಂದ ಆಚೆ ಬರಬೇಕು ಅಂತ ಮಾಡಬಾರದ ಅನಿಷ್ಟಗಳೆಲ್ಲವನ್ನೂ ಮಾಡಿದ್ದೇನೆ. ಆಗ ನನ್ನ ಆರೋಗ್ಯವೂ ಹಾಳಾಯಿತು. ಕೊನೆಗೆ ಆಸ್ಪತ್ರೆಗೆ ದಾಖಲಾದೆ. ಈ ವೇಳೆ ನನಗೆ ಆಪರೇಷನ್ ಕೂಡ ಆಯಿತು. ಕೊನೆಗೆ ಎಲ್ಲದರಿಂದ ಗೆದ್ದು ನಾನು ಆಚೆ ಬಂದೆ ಎಂದು ನಟ ಯೋಗಿ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
Advertisement
Advertisement
ಅಷ್ಟೇ ಅಲ್ಲದೇ ಆಸ್ಪತ್ರೆಯಿಂದ ಬಂದಾಗ ಯಾರೋ ಮೂರನೇಯವ ನಿನ್ನ ಬಗ್ಗೆ ಮಾತನಾಡುತ್ತಿದ್ದಾನಲ್ಲ ಎಂದು ನೀನ್ಯಾಕೆ ತಲೆ ಕೆಡಿಸಿಕೊಳ್ಳುತ್ತೀಯ ಎಂಬುದು ನನ್ನ ಮನಸ್ಸಿಗೆ ಬಂತು. ಆ ಮೇಲೆ ಯಾರ್ಯಾರೋ ನಿನ್ನ ಜಾಗಕ್ಕೆ ಬಂದು ನಿನ್ನ ಸ್ಥಾನವನ್ನು ತೆಗೆದುಕೊಳ್ಳುತ್ತಾರೆ. ನಿನ್ನ ಜಾಗವನ್ನು ನೀನು ಬಿಡಬೇಡ ಅಂತ ಮನಸ್ಸಿನಲ್ಲಿ ಬಲವಾಗಿ ಅಂದುಕೊಂಡೆ. ಕೊನೆಗೆ ಸಿನಿಮಾ ಶುರು ಮಾಡಿದೆ ಎಂದು ತಮ್ಮ ಜೀವನದ ಕಹಿ ಘಟನೆಯ ಬಗ್ಗೆ ಹೇಳಿಕೊಂಡಿದ್ದರು.
ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂತರಿಕ ಭದ್ರತಾ ವಿಭಾಗ (ಐಎಸ್ಡಿ) ಖ್ಯಾತ ನಟ ಲೂಸ್ ಮಾದ ಯೋಗಿ ಅವರನ್ನು ವಿಚಾರಣೆಗೆ ಒಳಪಡಿಸಿದೆ.
ಸದ್ಯಕ್ಕೆ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ರಾಗಿಣಿ ಮತ್ತು ಲೂಸ್ ಮಾದ ಯೋಗಿ ಉತ್ತಮ ಸ್ನೇಹಿತರಾಗಿದ್ದಾರೆ. ರಾಗಿಣಿ ಮತ್ತು ಲೂಸ್ ಮಾದ ಯೋಗಿ ‘ಬಂಗಾರಿ’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಚಿತ್ರ 2013ರಲ್ಲಿ ಬಿಡುಗಡೆಯಾಗಿತ್ತು.