ಹಾಸನ: ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಹಾಸನದ ಆಲೂರು ಠಾಣೆ ಪೊಲೀಸ್ ಪೇದೆ ಸಾವನ್ನಪಿದ್ದಾರೆ.
ಆಲೂರು ಪೊಲೀಸ್ ಠಾಣೆ ಮೋಹನ್ ಕುಮಾರ್(32) ಮೃತ ದುರ್ದೈವಿ. ಕರ್ತವ್ಯ ನಿರತನಾಗಿದ್ದಾಗ ಐದು ದಿನದ ಹಿಂದೆ ಅಪಘಾತವಾಗಿತ್ತು. ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ.
Advertisement
Advertisement
ಹಾಸನ ನಿವಾಸಿ ಮೋಹನ್ ಕುಮಾರ್ ಅವರಿಗೆ ಕೇವಲ ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿತ್ತು. ಕೊರೊನಾ ಲಾಕ್ಡೌನ್ ಹಿನ್ನೆಲೆ ಎಂದಿನಂತೆ ಐದು ದಿನದ ಹಿಂದೆ ಕರ್ತವ್ಯ ನಿರತನಾಗಿದ್ದರು. ಈ ವೇಳೆ ಬೈಕ್ನಲ್ಲಿ ಸ್ಟೇಷನ್ಗೆ ತೆರಳುತ್ತಿದ್ದಾಗ ಕಂದಲಿ ಬಳಿ ಬೈಕ್ ಹಾಗೂ ಟಾಟಾ ಏಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದರು.
Advertisement
ಸ್ಥಳೀಯರು ಹಾಗೂ ಕೆಲ ಪೊಲೀಸ್ ಸಿಬ್ಬಂದಿ ತಕ್ಷಣವೇ ಅವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ. ಸರ್ಕಾರದಿಂದ ಸೂಕ್ತ ನೆರವಿಗೆ ಸಹೊದ್ಯೋಗಿಗಳು ಮನವಿ ಮಾಡಿಕೊಂಡಿದ್ದಾರೆ. ಈ ಸಂಬಂಧ ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.