– ದಿನಕ್ಕೆ 50 ಕೆಜಿ ನಕಲಿ ತುಪ್ಪ ಮಾರಾಟ
– ಸಂಜೀವಿನಿ ನಗರದಲ್ಲಿದೆ ವಿಷಕಾರಿ ಫ್ಯಾಕ್ಟರಿ
ಭೋಪಾಲ್: ಇಂದು ಬೆಳಗ್ಗೆ ಮಧ್ಯಪ್ರದೇಶದ ಜಬಲ್ಪುರ ಕ್ರೈಂ ಬ್ರ್ಯಾಂಚ್ ಅಧಿಕಾರಿಗಳು ನಕಲಿ ತುಪ್ಪ ತಯಾರಿಸುತ್ತಿದ್ದ ಫ್ಯಾಕ್ಟರಿ ಮೇಲೆ ದಾಳಿ ನಡೆಸಿದ್ದಾರೆ. ಈ ಫ್ಯಾಕ್ಟರಿಯಲ್ಲಿ ನೂರು ರೂಪಾಯಿಯಲ್ಲಿ ನಕಲಿ ತುಪ್ಪ ತಯಾರಿಸಿ ಅದನ್ನ 400 ರಿಂದ 450ಕ್ಕೆ ಮಾರಾಟ ಮಾಡುತ್ತಿರುವ ವಿಷಯ ಬೆಳಕಿಗೆ ಬಂದಿದೆ. ಆರೋಪಿ ಪ್ರತಿ ದಿನ 50 ಕೆಜಿ ನಕಲಿ ತುಪ್ಪ ಮಾರಾಟ ಮಾಡುತ್ತಿರುವ ಆಘಾತಕಾರಿ ವಿಷಯ ತಿಳಿದು ಬಂದಿದೆ.
Advertisement
ಜಬಲ್ಪುರ ನಗರದ ಸಂಜೀವಿನಿ ನಗರದಲ್ಲಿರುವ ಈ ಫ್ಯಾಕ್ಟರಿ ಜನರಿಗೆ ವಿಷವುಣಿಸುತ್ತಿತ್ತು. ಆರೋಪಿ ವಿಜಯ್ ಗುಪ್ತಾ (36) ಮೂಲತಃ ರಿವಾದ ನಿವಾಸಿಯಾಗಿದ್ದು, ಕಳೆದ ನಾಲ್ಕು ವರ್ಷಗಳಿಂದ ಸಂಜೀವಿನಿ ನಗರದಲ್ಲಿ ವಾಸವಾಗಿದ್ದನು. 2003ರಿಂದ ಮಿಲನ್ ಗುಪ್ತಾ ಎಂಬವರ ಮನೆ ಬಾಡಿಗೆ ಪಡೆದು ವಿಜಯ್ ಗುಪ್ತಾ ವಾಸವಾಗಿದ್ದನು.
Advertisement
Advertisement
ಕಳೆದ ನಾಲ್ಕು ವರ್ಷಗಳಿಂದ ವಿಜಯ್ ನಕಲಿ ತುಪ್ಪ ತಯಾರಿಕೆಯಲ್ಲಿ ತೊಡಗಿಕೊಂಡಿದ್ದನು. ಕರಿದ ಎಣ್ಣೆ, ಡಾಲ್ಡಾ ಮತ್ತು ಇನ್ನಿತರ ಅಂಶಗಳನ್ನ ಸೇರಿಸಿ ಆರೋಪಿ ನಕಲಿ ತಯಾರಿಸುತ್ತಿದ್ದನು. ಪ್ರತಿ 1 ಕೆಜಿ ನಕಲಿ ತಪ್ಪು ತಯಾರಿಕೆಗೆ ನೂರು ರೂಪಾಯಿ ಖರ್ಚು ಆಗುತ್ತಿತ್ತು. ಆರೋಪಿ ಪ್ರತಿ ಕೆಜಿಗೆ 400 ರಿಂದ 450 ರೂ.ಗೆ ಮಾರಾಟ ಮಾಡುತ್ತಿದ್ದನು.
Advertisement
ಫ್ಯಾಕ್ಟರಿಯಿಂದ ಅರ್ಧ ಕೆಜಿ ತೂಕದ 20 ನಕಲಿ ತುಪ್ಪದ ಪ್ಯಾಕೇಟ್, ಶೇಖರಣೆ ಮಾಡಿದ್ದ 30 ಕೆಜಿ ತುಪ್ಪ, ಡಾಲ್ಡಾ ಡಬ್ಬ, ಮದ್ಯದ ಬಾಟೆಲ್, ತಕ್ಕಡಿ, ಗ್ಯಾಸ್ ಸಿಲಿಂಡರ್ ಸೇರಿದಂತೆ ಇನ್ನಿತರ ವಸ್ತುಗಳನ್ನ ಅಧಿಕಾರಿಗಳು ವಶಕ್ಕೆ ಪಡದು ಆರೋಪಿಯನ್ನ ಬಂಧಿಸಿದ್ದಾರೆ.