ನವದೆಹಲಿ: ಅರಬ್ಬಿ ಸಮುದ್ರದಲ್ಲಿ ಎದ್ದಿರುವ ಚಂಡಮಾರುತದಿಂದಾಗಿ ಕರ್ನಾಟಕ ಕರಾವಳಿ ತೀರದಲ್ಲಿ ಇಂದು ಮತ್ತು ನಾಳೆ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಗೃಹ ಸಚಿವಾಲಯದ ವಿಪತ್ತು ನಿರ್ವಹಣಾ ವಿಭಾಗ ಕರ್ನಾಟಕ, ಕೇರಳ, ಲಕ್ಷದ್ವೀಪ, ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಫಾಕ್ಸ್ ಸಂದೇಶ ಕಳುಹಿಸಿ ಕರಾವಳಿ ಭಾಗದಲ್ಲಿ ಎಚ್ಚರದಲ್ಲಿರುವಂತೆ ಸೂಚಿಸಿದೆ.
Advertisement
Advertisement
ಲಕ್ಷದ್ವೀಪ, ಕರ್ನಾಟಕ, ಕೇರಳದಲ್ಲಿ ಮೇ 31 ಮತ್ತು 1 ರಂದು ಭಾರೀ ಮಳೆಯಾದರೆ, ಮಹಾರಾಷ್ಟ್ರದಲ್ಲಿ ಜೂನ್ 2ರಿಂದ 4ರವರೆಗೆ ಮಳೆಯಾಗಲಿದೆ. ಗುಜರಾತಿನಲ್ಲಿ ಜೂನ್ 3 ರಿಂದ 5ರವರೆಗೆ ಮಳೆಯಾಗಲಿದೆ ಎಂದು ಹೇಳಿದೆ.
Advertisement
ಜೂನ್ 2ರ ವೇಳೆಗೆ ಕರ್ನಾಟಕದಲ್ಲಿ 90-100 ಕಿ.ಮೀ ವೇಗದಲ್ಲಿ ಗಾಳಿ ಬೀಸಬಹುದು. ಮೀನುಗಾರರು ಸಮದ್ರಕ್ಕೆ ಇಳಿಯಬಾರದು. ಮೀನುಗಾರಿಕೆಗೆ ತೆರಳಿದ ಮೀನುಗಾರು ಇಂದೇ ಮರಳಿ ದಡ ಸೇರಬೇಕು ಎಂದು ಸೂಚಿಸಲಾಗಿದೆ.