ಕೋಲಾರ: ಈ ಹಿಂದೆ ಮಿಡತೆ ರೀತಿಯ ಹುಳಗಳು ಕಾಣಿಸಿಕೊಂಡು ಜಿಲೊಲೆಯ ಜನರನ್ನು ಆತಂಕ್ಕೀಡು ಮಾಡಿದ್ದವು, ಇದೀಗ ಕರಾವಳಿ ಭಾಗದಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಶಂಖದ ಹುಳು ಪ್ರತ್ಯಕ್ಷವಾಗಿ ರೈತರಲ್ಲಿ ಆತಂಕವನ್ನುಂಟು ಮಾಡಿದೆ.
ಜಿಲ್ಲೆಯ ಮುಳಬಾಗಿಲು ತಾಲೂಕಿನ ಮೇಲ್ ತಾಯಲೂರು ಸುತ್ತಮುತ್ತ ಶಂಖದ ಹುಳು ಹೆಚ್ಚು ಕಾಣಿಸಿಕೊಳ್ಳುವ ಮೂಲಕ ರೈತರಲ್ಲಿ ಗೊಂದಲ ಹಾಗೂ ಆತಂಕವನ್ನುಂಟು ಮಾಡಿವೆ. ಇದೇ ಮೊದಲ ಬಯಲುಸೀಮೆಯಲ್ಲಿ ಬಾರಿಗೆ ಶಂಖದ ಹುಳು ಕಾಣಿಸಿಕೊಳ್ಳುತ್ತಿವೆ. ಕರಾವಳಿ ಸೇರಿದಂತೆ ಸಮುದ್ರ ತೀರದಲ್ಲಿ ಕಾಣುವ ಶಂಖದ ಹುಳು ಬಯಲುಸೀಮೆ ಕೋಲಾರ ಜಿಲ್ಲೆಯಲ್ಲಿ ಕಾಣಿಸಿಕೊಂಡಿದೆ.
Advertisement
Advertisement
ರೈತರ ಬೆಳೆಗಳಿಗೆ ಇದು ಮಾರಕವಾಗುತ್ತಾ ಅಥವಾ ಇದರಿಂದ ಬಯಲುಸೀಮೆ ರೈತರಿಗೆ ತೊಂದರೆ ಇದೆಯೇ ಎನ್ನುವ ಗೊಂದಲಗಳು ರೈತರಲ್ಲಿ ಮೂಡಿವೆ. ಮರಳು ಪ್ರದೇಶ ಸೇರಿದಂತೆ ತೇವಾಂಶ ಹೆಚ್ಚಾಗಿರುವ ಸ್ಥಳಗಳಲ್ಲೇ ಹೆಚ್ಚು ವಾಸಿಸುವ ಈ ಹುಳುಗಳು ಬರದ ನಾಡು ಕೊಲಾರದ ರೈತರ ತೋಟಗಳ ಬಳಿ ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ.