ಅಬುಧಾಬಿ: ಐಪಿಎಲ್ 2020ರ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ತಂಡದ ನಾಯಕತ್ವ ವಹಿಸಿ ಮೊದಲ ಬಾರಿಗೆ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸಿದ್ದಾರೆ. ಅಂಪೈರಿಂಗ್ ದೋಷಗಳು ಹಾಗೂ ಪಂದ್ಯದಲ್ಲಿ ಲಭಿಸಿದ ಹಲವು ಟ್ವಿಸ್ಟ್ ಗಳ ನಡುವೆ ಸೂಪರ್ ಓವರಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಜಯ ಪಡೆದಿದೆ. ಇದರ ನಡುವೆಯೇ ಫೀಲ್ಡಿಂಗ್ ವೇಳೆ ಕೆಎಲ್ ರಾಹುಲ್ ಆಡಿದ ಮಾತಿನ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement
ರಾಹುಲ್ ಫೀಲ್ಡಿಂಗ್ ಮಾಡುತ್ತಿದ್ದಾಗ ತಂಡದ ಆಟಗಾರರನ್ನು ಉದ್ದೇಶಿಸಿ ಕನ್ನಡದಲ್ಲಿ ಮಾತನಾಡುತ್ತಾ, ‘ಮುಂದೆ ಬರೋ…’ ಎಂದು ಅಸಭ್ಯ ಪದವನ್ನು ಬಳಸಿರುವುದು ಸ್ಟಂಪ್ ಮೈಕ್ನಲ್ಲಿ ಸೆರೆಯಾಗಿದೆ. ಆದರೆ ರಾಹುಲ್ ಯಾರನ್ನು ಉದ್ದೇಶಿಸಿ ಈ ಪದ ಬಳಕೆ ಮಾಡಿದ್ದಾರೆ ಎಂಬುವುದು ಸ್ಪಷ್ಟವಾಗಿಲ್ಲ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಕರ್ನಾಟಕದ ಆಟಗಾರರಾದ ಕರುಣ್ ನಾಯರ್, ಮಯಾಂಕ್ ಅಗರ್ವಾಲ್ ಮತ್ತು ಕೃಷ್ಣಪ್ಪ ಗೌತಮ್ ನಿನ್ನೆ ನಡೆದ ಪಂದ್ಯದಲ್ಲಿ ಆಡಿದ್ದರು. ಆದ್ದರಿಂದ ಈ ಆಟಗಾರರಲ್ಲಿ ಒಬ್ಬರನ್ನು ಉದ್ದೇಶಿಸಿ ರಾಹುಲ್ ನಿಂದಿಸಿರಬಹುದು ಎನ್ನಲಾಗಿದೆ. ಇದನ್ನೂ ಓದಿ: ಅಂಪೈರ್ಗೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಕೊಡಿ: ಸೆಹ್ವಾಗ್
Advertisement
KL : Munde Baaro lowda
???????????????? @akakrcb6 @karthik_jammy @Im__Arfan pic.twitter.com/TAgJTeMHTw
— RCB Forever ™ (@Yuva_1234) September 20, 2020
Advertisement
ಈ ಬಾರಿ ಐಪಿಎಲ್ ಟೂರ್ನಿ ಖಾಲಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಪ್ರೇಕ್ಷಕರಿಲ್ಲದ ಕಾರಣ ಹೆಚ್ಚಿನ ಶಬ್ದವಿರುವುದಿಲ್ಲ. ಹೀಗಾಗಿ ರಾಹುಲ್ ಸ್ಟಂಪ್ಸ್ ನಿಂದ ದೂರ ನಿಂತಿದ್ದರು. ಅವರು ಆಡಿದ ಮಾತುಗಳು ಸ್ಟಂಪ್ ಮೈಕ್ನಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಆಟಗಾರರೊಂದಿಗೆ ಕೆಎಲ್ ರಾಹುಲ್ ಕನ್ನಡದಲ್ಲಿ ಮಾತನಾಡುತ್ತಿರುವುದ ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಬಾರಿ ರಾಹುಲ್ ವಿದೇಶಿ ಆಟಗಾರರನ್ನು ಕನ್ನಡಲ್ಲೇ ಮಾತನಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನೂ ಓದಿ: ಮಯಾಂಕ್ ಅಗರ್ವಾಲ್ ಕಿಚ್ಚಿನ ಆಟಕ್ಕೆ ಕಿಚ್ಚನ ಮೆಚ್ಚುಗೆ
Advertisement
ಉಳಿದಂತೆ ನಿನ್ನೆಯ ಪಂದ್ಯದಲ್ಲಿ ಕೆಎಲ್ ರಾಹುಲ್ ವಿಶಿಷ್ಠ ಹೆಗ್ಗಳಿಕೆ ಪಡೆದಿದ್ದು, ತಂಡದ ನಾಯಕ, ವಿಕೆಟ್ ಕೀಪರ್ ಮತ್ತು ಆರಂಭಿಕನಾಗಿ ಆಡಿದ ಹೆಗ್ಗಳಿಕೆ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಗ್ರಿಲ್ಕ್ರಿಸ್ಟ್ (74 ಪಂದ್ಯ), ಬ್ರೆಂಡನ್ ಮೆಕಲಮ್ (4 ಪಂದ್ಯ), ಕುಮಾರ ಸಂಗಕ್ಕಾರ (2 ಪಂದ್ಯ) ಮತ್ತು ಪಾರ್ಥಿವ್ ಪಟೇಲ್ (1 ಪಂದ್ಯ) ಸ್ಥಾನ ಪಡೆದಿದ್ದಾರೆ. ಈ ಟೂರ್ನಿಯಲ್ಲಿ ಪಂಜಾಬ್ ತಂಡವನ್ನು ರಾಹುಲ್ ಮುನ್ನಡೆಸುತ್ತಿರುವುದರಿಂದ ಮೆಕಲಮ್ ಸಾಧನೆಯನ್ನು ಹಿಂದಿಕ್ಕಲಿದ್ದಾರೆ. ಇದನ್ನೂ ಓದಿ: ಕೊಹ್ಲಿ Vs ವಾರ್ನರ್, ಬೇರ್ಸ್ಟೋವ್ Vs ಎಬಿಡಿ- ಆರ್ಸಿಬಿ, ಹೈದರಾಬಾದ್ ತಂಡಗಳ ಬಲಾಬಲ
???? | @anilkumble1074’s thoughts on last night’s encounter! ????#SaddaPunjab #WakhraSquad #DCvKXIP #IPL2020 pic.twitter.com/wvSs05FcSt
— Kings XI Punjab (@lionsdenkxip) September 21, 2020