ಅಂಬಾಲ: ವಾಯು ಸೇನೆಗೆ ಬಲ ತುಂಬಬಲ್ಲ ಅತ್ಯಾಧುನಿಕ ಗೇಮ್ ಚೇಂಜರ್ ಯುದ್ಧ ವಿಮಾನ ರಫೇಲ್ ಭಾರತದಲ್ಲಿ ಲ್ಯಾಂಡ್ ಆಗಿದೆ. 5 ರಫೇಲ್ ವಿಮಾನಗಳು ಹರ್ಯಾಣದ ಅಂಬಾಲ ವಾಯುನೆಲೆಯಲ್ಲಿ ಮಧ್ಯಾಹ್ನ 3.10ರ ವೇಳೆಗೆ ಲ್ಯಾಂಡ್ ಆಯ್ತು.
ಯುದ್ಧ ವಿಮಾನಗಳು ಆಗಮಿಸುವ ಹಿನ್ನೆಲೆ ಇವುಗಳ ಸ್ವಾಗತಕ್ಕೆ ಹರ್ಯಾಣದಲ್ಲಿರುವ ಅಂಬಾಲ ವಾಯುನೆಲೆ ಮೊದಲೇ ಸಜ್ಜುಗೊಂಡಿತ್ತು. ರಫೇಲ್ ಭಾರತದ ವಾಯುಸೀಮೆಯನ್ನು ಪ್ರವೇಶಿಸುತ್ತಿದ್ದಂತೆ ಎರಡು ಸುಖೋಯ್ ವಿಮಾನಗಳು ಸ್ವಾಗತಿಸಿ ಬೆಂಗಾವಲಾಗಿ ಅಂಬಾಲಕ್ಕೆ ಕರೆದುಕೊಂಡು ಬಂದಿತ್ತು.
Advertisement
Welcome home 'Golden Arrows'. Blue skies always.
The Arrow formation (Rafales) was given ceremonial welcome by SU-30s.#IndianAirForce #RafaleInIndia #Rafale pic.twitter.com/RP0wITfTPZ
— Indian Air Force (@IAF_MCC) July 29, 2020
Advertisement
ಕೊರೊನಾ ಇರುವುದರಿಂದ ಹಾಗೂ ಬಿಗಿ ಭದ್ರತೆ ಕೈಗೊಳ್ಳುವ ಉದ್ದೇಶದಿಂದ ಅಂಬಾಲದ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅಂಬಾಲ ವಾಯುನೆಲೆಗೆ ಹೊಂದಿಕೊಂಡಿರುವ ನಾಲ್ಕು ಹಳ್ಳಿಗಳಲ್ಲಿ ಸೆಕ್ಷನ್ 144 ಜಾರಿಗೊಂಡಿದೆ.
Advertisement
#WATCH Haryana: Touchdown of Rafale fighter aircraft at Ambala airbase. Five jets have arrived from France to be inducted in Indian Air Force. (Source – Office of Defence Minister) pic.twitter.com/vq3YOBjQXu
— ANI (@ANI) July 29, 2020
Advertisement
ಮನೆಯ ಮೇಲ್ಛಾವಣೆಯಲ್ಲಿ ಸೇರುವುದು ಹಾಗೂ ಯುದ್ಧ ವಿಮಾನಗಳ ಫೋಟೋ ತೆಗೆಯುವುದನ್ನ ಈ ಸುತ್ತ ಮುತ್ತಲ ಪ್ರದೇಶದಲ್ಲಿ ನಿಷೇಧಿಸಲಾಗಿದೆ. ಇದನ್ನೂ ಓದಿ: ರಫೇಲ್ ಭಾರತಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಕಾಶ್ಮೀರದ ಹಿಲಾಲ್ ಅಹ್ಮದ್
The five Rafales escorted by 02 SU30 MKIs as they enter the Indian air space.@IAF_MCC pic.twitter.com/djpt16OqVd
— रक्षा मंत्री कार्यालय/ RMO India (@DefenceMinIndia) July 29, 2020
ಭಾರತ ಫ್ರಾನ್ಸ್ನ ಡಸಾಲ್ಟ್ ಸಂಸ್ಥೆ ಜೊತೆ ಒಟ್ಟು 36 ರಫೇಲ್ ಯುದ್ಧ ವಿಮಾನಗಳ ಖರೀದಿಸುವ ಸಂಬಂಧ ಒಪ್ಪಂದ ನಡೆದಿತ್ತು. ಇದೀಗ ಈ ಪೈಕಿ ಮೊದಲ ಬ್ಯಾಚ್ನ ಐದು ವಿಮಾನಗಳು ಸೋಮವಾರ ಫ್ರಾನ್ಸ್ನಿಂದ ಟೇಕಾಫ್ ಆಗಿ ಮಂಗಳವಾರ ಯುಎಇಯಲ್ಲಿರುವ ದಫ್ರಾ ವಾಯುನೆಲೆಯಲ್ಲಿ ಲ್ಯಾಂಡ್ ಆಗಿತ್ತು. ಅಲ್ಲಿಂದ ಹೊರಟ ವಿಮಾನ ಈಗ ಭಾರತದಲ್ಲಿ ಲ್ಯಾಂಡ್ ಆಗಿದೆ.
ಸ್ವದೇಶಿ ಐಎನ್ಎಸ್ ನೌಕೆ ರಫೇಲ್ ಲೀಡರ್ಗೆ ಭಾರತಕ್ಕೆ ಸ್ವಾಗತ ಎಂದು ಹೇಳಿ ಹ್ಯಾಪಿ ಲ್ಯಾಂಡಿಂಗ್ ಸಂದೇಶ ಕಳುಹಿಸಿತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ವಿಡಿಯೋ ಟ್ವೀಟ್ ಮಾಡಿ ಸ್ವಾಗತ ಕೋರಿದ್ದರು. ಇದನ್ನೂ ಓದಿ: ರಫೇಲ್ ಲ್ಯಾಂಡ್ ಆಗಿದ್ದ ವಾಯುನೆಲೆಯ ಸಮೀಪವೇ ಬಿತ್ತು ಇರಾನ್ ಕ್ಷಿಪಣಿ
2016ರಲ್ಲಿ 59 ಸಾವಿರ ಕೋಟಿ ರೂ. ವೆಚ್ಚದಲ್ಲಿ 36 ರಫೇಲ್ ವಿಮಾನಗಳನ್ನು(28 ಸಿಂಗಲ್ ಸೀಟರ್, 8 ಡಬಲ್ ಸೀಟರ್) ಖರೀದಿಸುವ ಸಂಬಂಧ ಭಾರತ ಸರ್ಕಾರ ಫ್ರಾನ್ಸ್ನ ಡಸಾಲ್ಟ್ ಕಂಪನಿಯ ಜೊತೆ ಸಹಿ ಹಾಕಿತ್ತು. ಒಪ್ಪಂದ ಪ್ರಕಾರ 2020ರ ಜುಲೈಯಲ್ಲಿ ಮೊದಲ ಬ್ಯಾಚ್ ವಿಮಾನಗಳು ಭಾರತಕ್ಕೆ ಬರಬೇಕು ಡೆಡ್ಲೈನ್ ವಿಧಿಸಲಾಗಿತ್ತು. ಈ ಡೆಡ್ಲೈನ್ಗೆ ಅನುಗುಣವಾಗಿ ಮೊದಲ ಬ್ಯಾಚ್ನ 10 ವಿಮಾನಗಳು ಈಗ ಪೂರ್ಣ ಪ್ರಮಾಣದಲ್ಲಿ ಹಸ್ತಾಂತರವಾಗುತ್ತಿವೆ. ಈ ಪೈಕಿ 5 ವಿಮಾನಗಳು ಭಾರತಕ್ಕೆ ಬರುತ್ತಿದ್ದರೆ ಉಳಿದ 5 ವಿಮಾನಗಳು ಫ್ರಾನ್ಸ್ನಲ್ಲಿ ತರಬೇತಿ ನೀಡಲು ಬಳಕೆಯಾಗಲಿದೆ. ಎಲ್ಲ ವಿಮಾನಗಳು 2021ರ ಡಿಸೆಂಬರ್ ಕೊನೆಯಲ್ಲಿ ಭಾರತಕ್ಕೆ ಹಸ್ತಾಂತರವಾಗಲಿದೆ.