ಬೆಂಗಳೂರು: ಸಿಎಂ ಬದಲಾವಣೆಯ ಸುದ್ದಿ, ಸದ್ದು ಮಾಡುತ್ತಿರುವ ಸಮಯದಲ್ಲಿಯೇ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠಕ್ಕೆ 10 ಕೋಟಿ ರೂಪಾಯಿ ಅನುದಾನ ನೀಡುವಂತೆ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಮಠಾಧ್ಯಕ್ಷ ಈಶ್ವರಾನಂದಪುರಿ ಮಹಾಸ್ವಾಮಿಗಳು ಇಂದು ಸಿಎಂ ಯಡಿಯೂರಪ್ಪನವರನ್ನ ಭೇಟಿ ಮಾಡಿ, ಮನವಿ ಮಾಡಿದ್ದಾರೆ.
Advertisement
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕನಕಧಾಮದಲ್ಲಿ ಭಾರತದ ಅತಿ ಎತ್ತರವಾದ ಕನಕ ಏಕಶಿಲಾ ಮೂರ್ತಿಯು ಪ್ರತಿಷ್ಟಾಪನೆಗೊಳ್ಳುತ್ತಿದ್ದು, ಹಣಕಾಸಿನ ಕೊರತೆಯಿಂದ ಕಾರ್ಯವು ಸ್ಥಗಿತಗೊಂಡಿದೆ. ಹಾಗಾಗಿ ಇದೀಗ ಯಡಿಯೂರಪ್ಪನವರನ್ನು ಈಶ್ವರಾನಂದಪುರಿ ಮಹಾಸ್ವಾಮಿ ಭೇಟಿಯಾಗಿ ಕನಕ ಏಕ ಶಿಲಾ ಮೂರ್ತಿಯ ಪ್ರತಿಷ್ಠಾಪನೆಗೆ ಹಣಕಾಸಿನ ನೆರವು ಕೇಳಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಎದ್ದಿರುವ ರಾಜಕೀಯ ವಿಪ್ಲವ ಸುಖಾಂತ್ಯ ಕಾಣಲಿದೆ: ಕೋಡಿಮಠ ಶ್ರೀ ಭವಿಷ್ಯ
Advertisement
Advertisement
2021ರ ಏಪ್ರಿಲ್ 5ರಂದು ಕಾಗಿನೆಲೆ, ಕನಕಗುರು ಪೀಠ ಬೆಳ್ಳುಡಿಯಲ್ಲಿ ನಡೆದ ದೇವಸ್ಥಾನ ಉದ್ಘಾಟನಾ ಕಾರ್ಯಕ್ರಮದಲ್ಲಿ 5 ಕೋಟಿಯನ್ನು ಘೋಷಣೆ ಮಾಡಿದ್ದು, ತಕ್ಷಣವೇ ಬಿಡುಗಡೆ ಮಾಡುವ ಭರವಸೆಯನ್ನು ನೀಡಿದ್ದೀರಿ. ಹಾಗಾಗಿ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಿ ಮಹಾಕಾರ್ಯಕ್ಕೆ ಸಹಕರಿಸಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
Advertisement