ತಿರುವನಂತಪುರ: ವಿಂಕಿಂಗ್ ಸ್ಟಾರ್ ಪ್ರಿಯಾ ಪ್ರಕಾಶ್ ವಾರಿಯರ್ ತಮ್ಮ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದು, ವೈರಲ್ ಆಗಿದೆ.
ಬಹುದಿನಗಳ ಬಳಿಕ ಕಣ್ಸನ್ನೆ ವಿಡಿಯೋ ಹಂಚಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಜಾದೂ ಮಾಡ್ತಿದ್ದಾರೆ. ಕೇವಲ ಒಂದು ಕಣ್ಸನ್ನೆ ಮೂಲಕ ನ್ಯಾಶನಲ್ ಕ್ರಶ್ ಆಗಿರುವ ಪ್ರಿಯಾ ಪ್ರಕಾಶ್ ಸದಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುತ್ತಾರೆ. ತಮ್ಮ ಡ್ಯಾನ್ಸ್ ವಿಡಿಯೋ, ಸಿನಿಮಾಗೆ ಸಂಬಂಧಿಸಿದ ವಿಷಯಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಸದಾ ಅಭಿಮಾನಿಗಳಿಗೆ ಹತ್ತಿರವಾಗಿರುತ್ತಾರೆ.
Advertisement
Advertisement
ಬ್ಯೂಟಿ ಪಾರ್ಲರ್ ನಲ್ಲಿ ಚೇರ್ ಮೇಲೆ ಕುಳಿತು ಸೆಲ್ಫಿ ಮಿರರ್ ವಿಡಿಯೋದಲ್ಲಿ ಓರು ಆಡಾರ್ ಲವ್ ಚಿತ್ರದಂತೆ ಕಾಮನಬಿಲ್ಲಿನ ಹುಬ್ಬುಗಳ ಮೂಲಕ ಕಣ್ಸನ್ನೆ ಮಾಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ 70 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಗಳನ್ನು ಪ್ರಿಯಾ ಹೊಂದಿದ್ದಾರೆ. ಶ್ರೀದೇವಿ ಬಂಗಲೋ ಮತ್ತು ಲವ್ ಹ್ಯಾಕರ್ಸ್ ಚಿತ್ರಗಳ ಮೂಲಕ ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.
Advertisement
View this post on Instagram