ಭೋಪಾಲ್: ರಾಜ್ಯದಲ್ಲಿ ಹೊಸದಾಗಿ ಕಟ್ಟಡ ನಿರ್ಮಾಣ ಮಾಡಲು ಸರ್ಕಾರದಿಂದ ಅನುಮತಿ ಬೇಕಾದರೆ ಕಟ್ಟಡ ನಿರ್ಮಾಣ ಪ್ರದೇಶದಲ್ಲಿ ಒಂದು ಸಸಿ ನೆಡುವುದು ಕಡ್ಡಾಯ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
Advertisement
ನಿನ್ನೆ ಪರಿಸರ ದಿನದ ಅಂಗವಾಗಿ ಆನ್ಲೈನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಿವರಾಜ್ ಸಿಂಗ್ ಚೌಹಾಣ್, ರಾಜ್ಯದಲ್ಲಿ ಇನ್ನುಮುಂದೆ, ಹೊಸದಾಗಿ ಕಟ್ಟಡ ನಿರ್ಮಾಣ ಮಾಡಲು ಸರ್ಕಾರದಿಂದ ಅನುಮತಿ ಬೇಕಾದಲ್ಲಿ ಕಟ್ಟಡ ನಿರ್ಮಾಣದ ಸ್ಥಳದಲ್ಲಿ ಸಸಿ ನೆಡುವುದು ಕಡ್ಡಾಯ. ಇದು ರಾಜ್ಯದ ನಗರ ಪ್ರದೇಶ, ಮುನ್ಸಿಪಾಲಿಟಿ, ನಗರ ಪಂಚಾಯತ್ ಸೇರಿ, ಗ್ರಾಮ ಪಂಚಾಯತ್ ವರೆಗೆ ಅನ್ವಯಿಸುತ್ತದೆ. ಕಟ್ಟಡ ನಿರ್ಮಾಣದ ಸ್ಥಳದಲ್ಲಿ ಜಾಗ ಇಲ್ಲದೆ ಇದ್ದರೆ ಸಮೀಪದ ಶಾಲೆ, ಸಾರ್ವಜನಿಕ ಉದ್ಯಾನವನ, ಸಾರ್ವಜನಿಕ ಸ್ಥಳಗಳಲ್ಲಿ ಸಸಿ ನೆಟ್ಟು ಅದನ್ನು ಬೆಳೆಸಬೇಕು ಎಂದರು. ಇದನ್ನೂ ಓದಿ:ರೈತರ ಬ್ಯಾಂಕ್ ಖಾತೆಗೆ 4 ಸಾವಿರ ರೂ. ವರ್ಗಾವಣೆ: ಶಿವರಾಜ್ ಸಿಂಗ್ ಚೌಹಾಣ್
Advertisement
मध्यप्रदेश में बिल्डिंग परमिशन के साथ ये शर्त अनिवार्य की जायेगी कि वो पेड़ लगाएंगे ही। आप मकान बनाते हैं तो पेड़ लगाना होगा। मकान के अगल बगल लगाएं। अगर वहाँ जगह नहीं है तो नगर निगम, नगर पालिका के पार्क में, पंचायत, स्कूल के परिसर में पेड़ लगाएं: सीएम श्री @ChouhanShivraj pic.twitter.com/6BydGP8SkK
— Chief Minister, MP (@CMMadhyaPradesh) June 5, 2021
Advertisement
ಈ ನಿಯಮ ಕೇವಲ ಕಟ್ಟಡ ನಿರ್ಮಾಣಕ್ಕೆ ಮಾತ್ರ ಸೀಮಿತವಲ್ಲ ಬದಲಾಗಿ ರಾಜ್ಯದಲ್ಲಿ ಹೊಸದಾಗಿ ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ನಿರ್ಮಿಸುವ ಮನೆಗಳಿಗೂ ಅನ್ವಯಿಸುತ್ತದೆ. ಗ್ರಾಮಗಳಲ್ಲಿ ಈ ನಿಯಮವನ್ನು ಸರಿಯಾಗಿ ಪಾಲನೆ ಮಾಡಲು ಗ್ರಾಮ ಪಂಚಾಯತ್ ಸಹಕಾರಿಯಾಗಬೇಕು ಎಂದು ಮಾಹಿತಿ ನೀಡಿದರು.
Advertisement
आज #WorldEnvironmentDay के अवसर पर भोपाल स्थित स्मार्ट सिटी पार्क में पीपल का पौधा रोपा। इसकी फोटो मैंने 'अंकुर' वृक्षारोपण अभियान के अंतर्गत वायुदूत एप्प पर अपलोड भी की है। साथ ही कम्पोस्ट खाद के लिए स्मार्ट सिटी पार्क में कम्पोस्ट पिट का निर्माण भी आरंभ किया। #OnePlantADay pic.twitter.com/WipVDAq0iQ
— Shivraj Singh Chouhan (@ChouhanShivraj) June 5, 2021
ಈ ನಿಯಮ ಎಲ್ಲಾ ಕಟ್ಟಡ ನಿರ್ಮಾಣಕ್ಕೂ ಅನ್ವಯಿಸಿದ್ದು ಸ್ವತಃ ಸರ್ಕಾರ ಹೊಸ ಕಟ್ಟಡ ಕಟ್ಟಲು ತಯಾರಿ ನಡೆಸಿದರು ಕೂಡ ಸಸಿ ನೆಟ್ಟು ಬೆಳೆಸಬೇಕು. ವಿಶ್ವಪರಿಸರ ದಿನ ಕೇವಲ ಆ ದಿನಕ್ಕೆ ಸೀಮಿತವಾಗದೇ ಪ್ರತಿದಿನ ಪರಿಸರ ದಿನ ಆಚರಣೆ ಆಗುವಂತೆ ಆಗಬೇಕು. ಪರಿಸರ ಸಂರಕ್ಷಣೆ ಧ್ಯೇಯ ವಾಕ್ಯವಾಗಿರದೆ ನಮಗೆ ಒಂದು ಮಂತ್ರವಾಗಿದೆ. ಪರಿಸರ ಸಂರಕ್ಷಣೆಯ ಬಗ್ಗೆ ಸ್ವತಃ ನಾವು ಒಂದು ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.