– ಸಮಸ್ಯೆ ಇತ್ಯರ್ಥ ಸ್ಥಳೀಯರಿಂದ ನ್ಯಾಯಧೀಶರಿಗೆ ಮೆಚ್ಚುಗೆ
ಕೋಲಾರ: ಸಾಮಾನ್ಯವಾಗಿ ನ್ಯಾಯಾಧೀಶರು ಯಾವಾಗಲೂ ಅಂತರ ಕಾಯ್ದುಕೊಂಡಿರುತ್ತಾರೆ. ಸಾರ್ವಜನಿಕರು ಸಹ ಅವರನ್ನು ಭಯದಿಂದಲೇ ಕಾಣುತ್ತಿರುತ್ತಾರೆ. ನ್ಯಾಯಾಲಯದ ಒಳಗಡೆ ಮಾತ್ರ ಕಾಣಿಸುತ್ತಾರೆ. ಆದರೆ ಇದೀಗ ನ್ಯಾಯಾಧೀಶರೊಬ್ಬರು ತಮ್ಮ ಕಚೇರಿ ಬಳಿ ಇದ್ದ ಅಂಧ ವ್ಯಕ್ತಿಯನ್ನು ಮಾತನಾಡಿಸಿ, ಸಮಸ್ಯೆ ಪರಿಹರಿಸಿದ್ದಾರೆ. ಇದಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement
ಜಿಲ್ಲೆಯ ಮುಳಬಾಗಿಲಿನ ಮುಳಬಾಗಿಲು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಹಾಜಿ ಹುಸೇನ್ ಸಾಬ್ ಯಾದವಾಡ ಅವರು ಸಂತ್ರಸ್ತರನ್ನು ನ್ಯಾಯಾಲಯದ ಹೊರಗಡೆಯೇ ವಿಚಾರಣೆ ನಡೆಸಿ ಅವರಿಗೆ ಸಾಂತ್ವನ ಹೇಳುವ ಮೂಲಕ ಗಮನ ಸೆಳೆದಿದ್ದಾರೆ. ಇದಕ್ಕೆ ಸ್ಥಳೀಯರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement
ಮುಳಬಾಗಿಲು ಪಟ್ಟಣದ ನಿವಾಸಿಯಾದ ಅಂಧ ವ್ಯಕ್ತಿ ದೇವರಾಜಾಚಾರ್ ತಮ್ಮ ಮನೆಯ ಗೋಡೆಗೆ ಸಂಭದಿಸಿದ ದೂರು ನೀಡಲು ನ್ಯಾಯಾಲಯಕ್ಕೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ನ್ಯಾಯಾಲಯದ ಗೇಟ್ ಬಳಿಯೇ ಇರುವ ಕಟ್ಟೆ ಯೊಂದರಲ್ಲಿ ಕುಳಿತಿದ್ದ ಅಂಧ ವ್ಯಕ್ತಿ ದೇವರಾಜಾಚಾರ್ ರನ್ನು ಗಮನಿಸಿದ ನ್ಯಾಯಧೀಶರು, ಅವರ ಪಕ್ಕದಲ್ಲಿಯೇ ಕುಳಿತು ವಿಚಾರಣೆ ನಡೆಸಿದ್ದಾರೆ. ನಂತರ ಎರಡೂ ಕಡೆಯವರನ್ನು ಇಂದು ಬರಲು ಹೇಳಿದ್ದು ಸಮಸ್ಯೆ ಬಗೆಹರಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ.
Advertisement
Advertisement
ಸದ್ಯ ನ್ಯಾಯಾಧೀಶರ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಅಂಧ ವ್ಯಕ್ತಿ ತಮ್ಮ ಸಮಸ್ಯೆಯನ್ನ ಆವರಣದ ಹೊರಗಡೆಯೇ ಆಲಿಸಿದ ನ್ಯಾಯಾದೀಶರ ಕುರಿತು ಪ್ರಶಂಸೆಯ ಮಾತುಗಳನ್ನಾಡಿದರು. ನ್ಯಾಯಧೀಶರ ನಿಲುವಿಗೆ ಸ್ಥಳೀಯರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.