– ಜಲಶಕ್ತಿ ಅಭಿಯಾನ ಸಮಾರಂಭದಲ್ಲಿ ಮಹಾಯಡವಟ್ಟು
ಹುಬ್ಬಳ್ಳಿ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ಯ ಇಲಾಖೆಯಿಂದ ಹುಬ್ಬಳ್ಳಿಯಲ್ಲಿಂದು ರಾಜ್ಯ ಮಟ್ಟದ ಜಲಶಕ್ತಿ ಅಭಿಯಾನ ಸಮಾರಂಭ ಜರುಗಿತು. ಡೆನಿಸನ್ಸ್ ಹೋಟೆಲ್ ಆವರಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭವನ್ನು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಉದ್ಘಾಟನೆ ಮಾಡಿದರು. ಆದರೆ ಅರ್ಥಪೂರ್ಣವಾಗಿ ನಡಯಬೇಕಾದ ಸಮಾರಂಭದಲ್ಲಿ ಸಚಿವರು ಕಂಡ ಕಂಡವರಿಗೆ ಕರೆದು ಕರೆದು ಪ್ರಶಸ್ತಿ ವಿತರಣೆ ಮಾಡುವ ಮೂಲಕ ಮಹಾ ಯಡವಟ್ಟು ಮಾಡಿಕೊಂಡಿದ್ದಾರೆ.
Advertisement
ಕಾರ್ಯಕ್ರಮದಲ್ಲಿ ಮಾತನಾಡಿದ ಕೆ.ಎಸ್ ಈಶ್ವರಪ್ಪ, ಸಮಾರಂಭದಲ್ಲಿ ಕೆರೆ, ಕಲ್ಯಾಣಿ, ನಾಲಾ ಪುನಶ್ಚೇತನ, ಗೋಕಟ್ಟೆ ನಿರ್ಮಾಣ ಸೇರಿದಂತೆ ಸಾಂಪ್ರದಾಯಿಕ ಹಾಗೂ ಇತರೆ ಜಲಮೂಲಗಳ ಸಂರಕ್ಷಣೆ ಹಾಗೂ ಪುನಶ್ಚೇತನಕ್ಕಾಗಿ ಪ್ರಧಾನಮಂತ್ರಿಗಳ ಆಶಯಕ್ಕೆ ಅನುಗುಣವಾಗಿ ರಾಜ್ಯದಲ್ಲಿ 3 ಲಕ್ಷಕ್ಕೂ ಅಧಿಕ ವಿವಿಧ ಕಾಮಗಾರಿಗಳನ್ನು ಕೈಗೊಳ್ಳುವ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ 4,310 ಕೋಟಿ ರೂ. ಗಳನ್ನು ವಿನಿಯೋಗಿಸಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡರು. ಆದರೆ ಸಮಾರಂಭದ ಅಂತ್ಯದ ವೇಳೆ ಈಶ್ವರಪ್ಪ ಮಹಾ ಯಡವಟ್ಟು ಮಾಡಿ ಸಮಾರಂಭದ ಅರ್ಥವನ್ನೆ ಅನರ್ಥವಾಗುವಂತೆ ಮಾಡಿಬಿಟ್ಟರು.
Advertisement
Advertisement
ಸಮಾರಂಭದಲ್ಲಿ ನರೇಗಾ ಯೋಜನೆಯ ರಾಜ್ಯ ಮಟ್ಟದ ಪ್ರಶಸ್ತಿ ವಿತರಣಾ ಸಮಾರಂಭ ಸಹ ಜರುಗಿತು. ಈ ವೇಳೆ ಸಚಿವರು ನೂರು ಜನ ಸಾಧಕರಿಗೆ ಪ್ರಶಸ್ತಿ ನೀಡುವ ಸಮಯದಲ್ಲಿ ಊಟದ ವೇಳೆಯಾದ ಪರಿಣಾಮ ಕೆ.ಎಸ್ ಈಶ್ವರಪ್ಪ, ಜಗದೀಶ ಶೆಟ್ಟರ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಸಮಾರಂಭದಲ್ಲಿ ಸಾಧಕರನ್ನು ಬಿಟ್ಟು ಕಂಡ ಕಂಡವರನ್ನು ಕರೆದು ಕರೆದು ಪ್ರಶಸ್ತಿ ವಿತರಣೆ ಮಾಡಿದರು.
Advertisement
ತರಾತುರಿಯಲ್ಲಿ ಸಾಧಕರನ್ನು ಕೈ ಬಿಟ್ಟು ವೇದಿಕೆಗೆ ಆಗಮಿಸಿದ ಎಲ್ಲರಿಗೂ ಕರೆದು ಪ್ರಶಸ್ತಿ ವಿತರಣೆ ಮಾಡಿದರು. ವೇದಿಕೆಗೆ ತೆರಳಿ ಸಚಿವರಿಗೆ ಮನವಿ ನೀಡಲು ಹೋದ ವ್ಯಕ್ತಿಗೂ ಸಹ ಪ್ರಶಸ್ತಿ ವಿತರಣೆ ಮಾಡಿದ್ದು ಮಾತ್ರ ಸಮಾರಂಭದಲ್ಲಿನ ಮಹಾ ಯಡವಟ್ಟುವನ್ನು ಎತ್ತಿ ತೋರಿಸುವಂತೆ ಮಾಡಿತು.