– ಮುಂಬೈನಿಂದ ವಾಪಸ್ ಹೊರಟ ಕ್ವೀನ್
ಮುಂಬೈ: ನಟಿ ಕಂಗನಾ ರಣಾವತ್ ಬಿಹಾರದಲ್ಲಿ ಬಿಜೆಪಿ ಪರ ಸ್ಟಾರ್ ಪ್ರಚಾರಕಿಯೇ ಎಂದು ಕೇಳಿದ ಪ್ರಶ್ನೆಗೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಉತ್ತರ ಕೊಟ್ಟಿದ್ದಾರೆ.
ಮುಂದಿನ ಅಕ್ಟೋಬರ್ ತಿಂಗಳಲ್ಲಿ ಬಿಹಾರದ ವಿಧಾನಸಭೆ ಚುನಾವಣೆ ನಡೆಯಲಿದೆ. ಇದೇ ವೇಳೆ ಸಾವನ್ನಪ್ಪಿದ ಬಿಹಾರ ಮೂಲದ ನಟ ಸುಶಾಂತ್ ಸಿಂಗ್ ರಜಪೂತ್ ಹೆಸರನ್ನು ಚುನಾವಣೆ ಪ್ರಚಾರದಲ್ಲಿ ಬಿಜೆಪಿ ಬಳಿಸಿಕೊಳ್ಳುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಇದರ ನಡುವೆ ಸುಶಾಂತ್ ಸಿಂಗ್ ಅನ್ನು ಬಾಲಿವುಡ್ ಮೂವಿ ಮಾಫಿಯಾ ಪ್ಲಾನ್ ಮಾಡಿ ಮರ್ಡರ್ ಮಾಡಿದೆ ಎಂದು ಆರೋಪ ಮಾಡಿದ್ದ ನಟಿ ಕಂಗನಾರನ್ನು ಬಿಜೆಪಿ ಸ್ಟಾರ್ ಪ್ರಚಾರಕಿಯಾಗಿ ಆಯ್ಕೆ ಮಾಡಿದೆ ಎಂದು ಹೇಳಲಾಗಿದೆ.
Advertisement
Advertisement
ಮುಂದಿನ ತಿಂಗಳು ಇರುವ ವಿಧಾನಸಭೆ ಚುನಾವಣೆಗೆ ಬಿಜೆಪಿ ಭರ್ಜರಿ ಸಿದ್ಧತೆ ನಡೆಸಿದೆ. ಈಗಾಗಲೇ ಆಡಳಿತದಲ್ಲಿರುವ ಬಿಜೆಪಿ ಅಧಿಕಾರವನ್ನು ಮುಂದುವರಿಸಲು ಪ್ಲಾನ್ ಮಾಡಿಕೊಂಡಿದೆ. ಅಂತಯೇ ಬಿಜೆಪಿಯ ಹಿರಿಯ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರು ಬಿಹಾರ ಚುನಾವಣೆಯ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಅವರಿಗೆ ರಾಜ್ಯದ ಪ್ರಸ್ತುತ ಸಿಎಂ ನಿತೀಶ್ ಕುಮಾರ್ ಸಾಥ್ ನೀಡಲಿದ್ದಾರೆ.
Advertisement
Advertisement
ಮೋದಿ ಇರುವಾಗ ಯಾರು ಬೇಡ: ಹೀಗಾಗಿ ಬಿಹಾರ ಚುನಾವಣೆಗೆ ಬಗ್ಗೆ ಮಾತನಾಡಿರುವ ಫಡ್ನವೀಸ್, ಈ ಬಾರಿಯೂ ಬಿಹಾರದಲ್ಲಿ ಗೆದ್ದು, ಅಧಿಕಾರವನ್ನು ಮುಂದುವರಿಸಲಿದ್ದೇವೆ ಎಂದು ಹೇಳಿದ್ದಾರೆ. ಇದೇ ವೇಳೆ ಕಂಗನಾ ರಣಾವತ್ ಬಿಹಾರದ ಬಿಜೆಪಿಯ ಸ್ಟಾರ್ ಪ್ರಚಾರಕಿಯೇ ಎಂದು ಅವರನ್ನು ಪ್ರಶ್ನೆ ಮಾಡಲಾಗಿದೆ. ಇದಕ್ಕೆ ಉತ್ತರಿಸಿರುವ ಫಡ್ನವೀಸ್ ಪ್ರಧಾನಿ ನರೇಂದ್ರ ಮೋದಿಯಂತಹ ಸ್ಟಾರ್ ಪ್ರಚಾರಕರೂ ನಮ್ಮಲ್ಲಿ ಇರುವಾಗ ಬೇರೆ ಯಾರೂ ಬೇಡ ಎಂದು ಹೇಳಿದ್ದಾರೆ. ಇದನ್ನು ಓದಿ: ರಿಯಾ ನನ್ನ ಮಗನಿಗೆ ಹಂತ ಹಂತವಾಗಿ ವಿಷ ನೀಡಿ ಕೊಂದ್ಳು: ಸುಶಾಂತ್ ತಂದೆ
ಸುಶಾಂತ್ ಸಾವಿನ ಪ್ರಕರಣ ಈಗ ರಾಜಕೀಯ ತಿರುವು ಪಡೆದುಕೊಂಡಿದ್ದು, ಬಿಜೆಪಿ ಚುನಾವಣಾ ಪ್ರಚಾರದಲ್ಲಿ ನಟ ಸುಶಾಂತ್ ಫೋಟೋವನ್ನು ಬಳಿಸಿಕೊಂಡಿತ್ತು. ಜೊತೆಗೆ ಸುಶಾಂತ್ ಪೋಷಕರ ದೂರಿನಂತೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ನಟನ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿದ್ದರು. ಈ ಎಲ್ಲದರ ನಡುವೆ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಪರ ಪಶ್ಚಿಮಾ ಬಂಗಾಳದಲ್ಲಿ ಕಾಂಗ್ರೆಸ್ ಪಕ್ಷ ಪ್ರತಿಭಟನೆ ಮಾಡಿತ್ತು. ಇದನ್ನು ಓದಿ: ನಟಿಗೆ ಸುಶಾಂತ್ ಕಿಸ್- ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್
Maharashtra: Actor Kangana Ranaut leaves from her residence for Mumbai Airport. pic.twitter.com/lnzPneAshP
— ANI (@ANI) September 14, 2020
ಮುಂಬೈನಿಂದ ಹೊರಟ ಮಣಿಕರ್ಣಿಕಾ: ಇತ್ತ ಕಂಗನಾ ಮತ್ತು ಮಹಾರಾಷ್ಟ್ರದ ಸರ್ಕಾರದ ನಡುವೆ ಜಟಾಪಟಿ ಮುಂದುವರೆದಿದೆ. ಅಕ್ರಮವಾಗಿ ಕಟ್ಟಡ ನಿರ್ಮಿಸಲಾಗಿದೆ ಎಂದು ಕಂಗನಾ ಆಫೀಸ್ ಮತ್ತು ಮನೆಯನ್ನು ಬಿಎಂಸಿ ಒಡೆದು ಹಾಕಿದೆ. ಈಗ ಈ ಪ್ರಕರಣ ಕೋರ್ಟಿನಲ್ಲಿದೆ. ಹಲವಾರ ವಿರೋಧದ ನಡುವೆಯೂ ವೈ ಪ್ಲಸ್ ಭದ್ರತೆಯೊಂದಿಗೆ ಮುಂಬೈಗೆ ಬಂದಿದ್ದ ಕಂಗನಾ ಇಂದು ವಾಪಸ್ ತಮ್ಮ ತವರು ರಾಜ್ಯ ಹಿಮಾಚಲ ಪ್ರದೇಶಕ್ಕೆ ಪ್ರಯಾಣ ಬೆಳಸಿದ್ದಾರೆ.
ಜೂನ್ 14ರಂದು ಸುಶಾಂತ್ ಮೃತದೇಹ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆರಂಭದಲ್ಲಿ ಆತ್ಮಹತ್ಯೆ ಎಂದು ಹೇಳಲಾಗಿದ್ರೂ ಅಭಿಮಾನಿಗಳು ನಟನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಸುಶಾಂತ್ ನಿಧನ ಬಾಲಿವುಡ್ ನಲ್ಲಿರುವ ಸ್ವಜನಪಕ್ಷಪಾತದಿಂದ ಆಗಿದ್ದು, ಸೂಕ್ತ ತನಿಖೆ ನಡೆಸಬೇಕೆಂದು ನಟಿ ಕಂಗನಾ ರಣಾವತ್ ಆಗ್ರಹಿಸಿದ್ದರು. ಸುಶಾಂತ್ ನಿಧನದ ಒಂದು ತಿಂಗಳ ಬಳಿ ಕಂಗನಾಗೆ ನಟಿ ಅಂಕಿತಾ ಲೋಖಂಡೆ ಸಾಥ್ ನೀಡಿ, ಮಾಜಿ ಪ್ರಿಯಕರನ ಸಾವಿನ ರಹಸ್ಯ ಬಹಿರಂಗವಾಗ ಬೇಕೆಂದು ಒತ್ತಾಯಿಸಿದ್ದರು. ಇದನ್ನೂ ಓದಿ: ಪ್ರಕರಣಕ್ಕೆ ಹೊಸ ತಿರುವು ನೀಡಿದ ಸುಶಾಂತ್ ಪಕ್ಕದ್ಮನೆ ಮಹಿಳೆ ಹೇಳಿಕೆ
ಇನ್ನಿಬ್ಬರು ನಟಿಯರಿಗೆ ಎನ್ಸಿಬಿ ಸಮನ್ಸ್: ಕಳೆದ ಮೂರು ತಿಂಗಳಲ್ಲಿ ಹಲವು ಮಜಲುಗಳಲ್ಲಿ ಸಾಗಿದ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ತನಿಖೆಯನ್ನ ಸಿಬಿಐ ನಡೆಸುತ್ತಿದೆ. ಸಿಬಿಐ ತನಿಖೆ ವೇಳೆ ಡ್ರಗ್ಸ್ ದಂಧೆಯ ಸುಳಿವು ಲಭ್ಯವಾಗಿದ್ದರಿಂದ ಎನ್ಸಿಬಿ ಸಹ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ. ಎನ್ಸಿಬಿ ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಸೇರಿದಂತೆ ಹಲವರನ್ನ ಬಂಧಿಸಿದೆ. ಇತ್ತ ಬಾಲಿವುಡ್ ನಟಿಯರಾದ ಸಾರಾ ಅಲಿ ಖಾನ್ ಮತ್ತು ರಕುಲ್ ಪ್ರೀತ್ ಸಿಂಗ್ ಗೂ ಎನ್ಸಿಬಿ ಸಮನ್ಸ್ ನೀಡಿರುವ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.