ಭೋಪಾಲ್: ಒಂದೇ ಲಂಗ್ಸ್ ಹೊಂದಿದ್ದರೂ ಕೇವಲ ಯೋಗಾಸನ ಹಾಗೂ ಉಸಿರಾಟ ಸಂಬಂಧಿ ಆಸನಗಳಿಂದ 14 ದಿನಗಳಲ್ಲಿ ಕೊರೊನಾ ಮಣಿಸಿ, ನರ್ಸ್ ಜಯಶಾಲಿಯಾಗಿದ್ದಾರೆ.
Advertisement
ಮಧ್ಯಪ್ರದೇಶದ ಟಿಕಮ್ಘರ್ ಸಾರ್ವಜನಿಕ ಆಸ್ಪತ್ರೆಯಲ್ಲಿ 39 ವರ್ಷದ ನರ್ಸ್ ಪ್ರಫುಲ್ಲಿಟ್ ಪೀಟರ್ ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದರು. ಕೇವಲ ಯೋಗ ಹಾಗೂ ಉಸಿರಾಟದ ಆಸನಗಳ ಮೂಲವೇ 14 ದಿನಗಳಲ್ಲಿ ಗುಣಮುಖರಾಗಿದ್ದಾರೆ.
Advertisement
ಪ್ರಫುಲ್ಲಿಟ್ ಅವರು ಟಿಕಮ್ಘರ್ ಆಸ್ಪತ್ರೆಯ ಕೋವಿಡ್ ವಾರ್ಡ್ನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಅವರಿಗೆ ಕೊರೊನಾ ಸೋಂಕು ತಗುಲಿದೆ. ಟೆಸ್ಟ್ ನಲ್ಲಿ ಪಾಸಿಟಿವ್ ಬಂದ ತಕ್ಷಣ ಅವರ ಸಹೋದ್ಯೋಗಿಗಳು ಹಾಗೂ ಸಂಬಂಧಿಕರು ತೀವ್ರ ಆತಂಕಕ್ಕೊಳಗಾಗಿದ್ದರು. ಅವರ ಕೊರೊನಾ ಹೋರಾಟ ತುಂಬಾ ಕಷ್ಟವಾಗಿದೆ ಎಂದೆಲ್ಲ ಹೇಳಿದ್ದರು.
Advertisement
Advertisement
ಗುಣಮುಖರಾದ ನಂತರ ಈ ಕುರಿತು ಮಾತನಾಡಿದ ಪೀಟರ್, ನಾನು ಹೋಮ್ ಐಸೋಲೇಶನ್ನಲ್ಲಿದ್ದಾಗ ಧೈರ್ಯ ಕಳೆದುಕೊಳ್ಳಲಿಲ್ಲ. ಆದರೆ ನಿಯಮಿತವಾಗಿ ಯೋಗ, ಪ್ರಾಣಾಯಾಮ ಹಾಗೂ ಉಸಿರಾಟಕ್ಕೆ ಸಂಬಂಧಿಸಿದ ಆಸನಗಳನ್ನು ಮಾಡುತ್ತಿದ್ದೆ. ಅಲ್ಲದೆ ಬಲೂನುಗಳನ್ನು ಊದುತ್ತಿದ್ದೆ ಎಂದು ತಮ್ಮ ಅನುಭವನ್ನು ಹಂಚಿಕೊಂಡಿದ್ದಾರೆ.
ನರ್ಸ್ ಎರಡೂ ಡೋಸ್ ಲಸಿಕೆಯನ್ನು ಹಾಕಿಸಿಕೊಂಡಿದ್ದು, ಹೀಗಾಗಿ ಅವರಿಗೆ ಗುಣಮುಖವಾಗುತ್ತೇನೆ ಎಂಬ ಆತ್ಮವಿಶ್ವಾಸ ಹೆಚ್ಚಿದೆ. ಆದರೆ ಕೇವಲ 14 ದಿನಗಳಲ್ಲಿ ಅವರು ಗುಣಮುಖರಾಗಿರುವುದು ಅಚ್ಚರಿ ಮೂಡಿಸಿದೆ.
ನರ್ಸ್ ಚಿಕ್ಕವರಿದ್ದಾಗಲೇ ತಮ್ಮ ಒಂದು ಶ್ವಾಸಕೋಶವನ್ನು ಕಳೆದುಕೊಂಡಿದ್ದರು. ಅಪಘಾತದಿಂದಾಗಿ ಚಿಕ್ಕವರಿದ್ದಾಗಲೇ ಅವರ ಒಂದು ಲಂಗ್ಸ್ ನ್ನು ಹೊರಗೆ ತೆಗೆಯಲಾಗಿತ್ತು. 2014ರಲ್ಲಿ ಚೆಸ್ಟ್ ಎಕ್ಸ್ ರೇ ಮಾಡಿಸಿದಾಗ ಇದು ಅವರಿಗೆ ತಿಳಿದಿತ್ತು.