– ಜಡೇಜಾ ಆಲ್ರೌಂಡರ್ ಆಟ
ಮೆಲ್ಬರ್ನ್: ಎರಡನೇ ಟೆಸ್ಟ್ ಪಂದ್ಯದಲ್ಲೂ ಬೌಲರ್ಗಳು ಆಟ ಮುಂದುವರಿದಿದ್ದು ಇಂದು 11 ವಿಕೆಟ್ಗಳು ಪತನಗೊಂಡಿದೆ. ಆಸ್ಟ್ರೇಲಿಯಾ 2 ರನ್ಗಳ ಅಲ್ಪ ಮುನ್ನಡೆ ಪಡೆದುಕೊಂಡಿದೆ.
277 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ಭಾರತ ಇಂದು 326 ರನ್ಗಳಿಗೆ ಆಲೌಟ್ ಆಯ್ತು. ನಿನ್ನೆ 104 ರನ್ ಗಳಿಸಿದ್ದ ಅಜಿಂಕ್ಯಾ ರಹಾನೆ ಇಂದು 112 ರನ್ ಗಳಿಸಿ ಔಟಾದರು. 40 ರನ್ ಗಳಿಸಿದ್ದ ಜಡೇಜಾ ಅವರು 57 ರನ್ಗಳಿಸಿ ಔಟಾದರು.
Advertisement
Dizzy ???????? Any other rare batting celebrations you can remember? #AUSvIND pic.twitter.com/lk2OgZx9FN
— cricket.com.au (@cricketcomau) December 28, 2020
Advertisement
131 ರನ್ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾಗೆ ಟೀಂ ಇಂಡಿಯಾ ಬೌಲರ್ಗಳು ಕಾಡಿದರು. ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಆಸ್ಟ್ರೇಲಿಯಾ ಮೂರನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿದೆ.
Advertisement
ಮ್ಯಾಥ್ಯು ವೇಡ್ 40 ರನ್, ಮಾರ್ನಸ್ ಲಬುಶೇನ್ 28 ರನ್, ಟ್ರಾವಿಸ್ ಹೆಡ್ 17 ರನ್ ಗಳಿಸಿ ಔಟಾದರು. ಕ್ಯಾಮೆರಾನ್ ಗ್ರೀನ್ 17 ರನ್, ಪ್ಯಾಟ್ ಕಮಿನ್ಸ್ 15 ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ.
Advertisement
Cameron Green goes up and over!
Live #AUSvIND: https://t.co/0nwGP4uO49 pic.twitter.com/LO0sKFeha4
— cricket.com.au (@cricketcomau) December 28, 2020
ಜಡೇಜಾ 25 ರನ್ ನೀಡಿ 2 ವಿಕೆಟ್ ಕಿತ್ತಿದ್ದಾರೆ. ಜಸ್ ಪ್ರೀತ್ ಬುಮ್ರಾ, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್ , ಅಶ್ವಿನ್ ತಲಾ ಒಂದು ವಿಕೆಟ್ ಕಿತ್ತಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 195/10
ಭಾರತ ಮೊದಲ ಇನ್ನಿಂಗ್ಸ್ 326/10
ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ 133/6
That's a beauty from Ashwin!
It draws Labuschagne's edge and Rahane takes the simplest of catches #AUSvIND pic.twitter.com/bOZ2UDMWV2
— 7Cricket (@7Cricket) December 28, 2020