ಬೆಂಗಳೂರು: ಒಂದು ವಾರಗಳ ಕಾಲದ ಲಾಕ್ಡೌನ್ ಅಂತ್ಯವಾಗಿದ್ದು, ಬೆಂಗಳೂರು ಸಹಜ ಸ್ಥಿತಿಗೆ ಬಂದಿದೆ. ಅಲ್ಲದೇ ಬೆಂಗಳೂರು ಅನ್ಲಾಕ್ ಆಗಿದ್ದೆ ತಡ ವಾಹನಗಳ ಅಬ್ಬರವು ಶುರುವಾಗಿದೆ.
ಒಂದು ವಾರಗಳ ಕಾಲ ಘೋಷಣೆ ಮಾಡಿದ್ದ ಲಾಕ್ಡೌನ್ ಇಂದು ಬೆಳಗ್ಗೆ 5 ಗಂಟೆಗೆ ಅಂತ್ಯವಾಗಿದೆ. ಹೀಗಾಗಿ ಬೆಂಗಳೂರಿಗರು ಸಹಜ ಜೀವನ ಶೈಲಿಯತ್ತ ಮರಳುತ್ತಿದ್ದಾರೆ. ಅನ್ಲಾಕ್ ನಂತರ ವಾಹನ ಏರ್ ಪೋರ್ಟ್ ರಸ್ತೆ, ಬಳ್ಳಾರಿ ರಸ್ತೆಯಲ್ಲಿ ವಾಹನಗಳ ಸಂಚಾರ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ಎಂದಿನಂತೆ ಕಾರ್, ಬೈಕ್, ಆಟೋ ಸೇರಿದಂತೆ ಎಲ್ಲ ಮಾದರಿ ವಾಹನಗಳ ಸಂಚಾರ ನಡೆಯುತ್ತಿದೆ.
Advertisement
Advertisement
ಎಂದಿನಂತೆ ಆಟೋ, ಓಲಾ, ಉಬರ್ ಮತ್ತೆ ಕ್ಯಾಬ್ ಸೇವೆ ಆರಂಭ ಆಗಿದೆ. ಮೆಜೆಸ್ಟಿಕ್ನ ರೈಲ್ವೆ ನಿಲ್ದಾಣ ಬಳಿ ಆಟೋ, ಓಲಾ ಓಡಾಟ ಜೋರಿದೆ. ಆಟೋ, ಓಲಾ, ಉಬರ್ ಸಂಖ್ಯೆ ಹೆಚ್ಚಿದೆ. ಆದರೆ ಪ್ರಯಾಣಿಕರು ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಇದ್ದಾರೆ. ಇತ್ತ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭ ಆಗಿದೆ. ಆದರೆ ಮೆಜೆಸ್ಟಿಕ್ನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರೇ ಇಲ್ಲವಾಗಿದ್ದು, ಬಸ್ ನಿಲ್ದಾಣ ಸಂಪೂರ್ಣವಾಗಿ ಖಾಲಿ ಖಾಲಿಯಾಗಿದೆ.
Advertisement
ಸಿಬ್ಬಂದಿ ಪ್ರಯಾಣಿಕರು ಬರುತ್ತಾರೆ ಎಂದು ಕಾಯುತ್ತಾ ಇದ್ದಾರೆ. ಆದರೆ ಜನ ಮಾತ್ರ ಬಂದಿಲ್ಲ. ತುರ್ತು ಸೇವೆ ಅಗತ್ಯ ಇರುವವರು ಬೆರಳೆಣಿಕೆಯಷ್ಟು ಪ್ರಯಾಣಿಕರ ಮಾತ್ರ ಇದ್ದಾರೆ. ಕೆ.ಆರ್.ಮಾರ್ಕೆಟ್ ವಾರ್ಡ್ ಸೀಲ್ಡೌನ್ ಆಗಿರುವ ಏರಿಯಾ. ಜೊತೆಗೆ ಮಾರುಕಟ್ಟೆಯನ್ನ ಬಂದ್ ಮಾಡಲಾಗಿದೆ. ಆದರೂ ಅನ್ಲಾಕ್ ಆಗಿರುವುದರಿಂದ ಜನ ಸಹಜ ಜೀವನಕ್ಕೆ ಬರುತ್ತಿದ್ದಾರೆ.
Advertisement
ಲಾಕ್ಡೌನ್ ಮುಗಿಯುತ್ತಿದ್ದಂತೆ ಬೆಂಗಳೂರಿನಿಂದ ತನ್ನ ತಮ್ಮ ಗ್ರಾಮಕ್ಕೆ ಹೋಗಿದ್ದವರು ಬೆಂಗಳೂರಿನ ಕಡೆಗೆ ಬರುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇದರಿಂದ ಮೈಸೂರು ರಸ್ತೆಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಮೈಸೂರು ರಸ್ತೆಯಿಂದ ಖಾಸಗಿ ವಾಹನಗಳಲ್ಲಿ ನಗರದ ಕಡೆಗೆ ಜನರು ಬರುತ್ತಿದ್ದಾರೆ. ಇನ್ನೂ ನವಯುಗ ಟೋಲ್ನಲ್ಲೂ ವಾಹನ ದಟ್ಟಣೆ ಹೆಚ್ಚಳವಾಗಿದೆ. ಬೆಂಗಳೂರಿನಿಂದ ಹೊರ ಹೋಗುವ ಹಾಗೂ ಒಳ ಬರುವ ವಾಹನಗಳ ಸಂಖ್ಯೆ ಹೆಚ್ಚಳವಾಗಿದೆ. ಇದರಿಂದ ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದ ಟೋಲ್ ಸಮೀಪ ವಾಹನಗಳ ಕ್ಯೂ ನಿಂತಿವೆ.
ಲಾಕ್ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಗಡಿಯಲ್ಲಿ ಎಂದಿನಂತೆ ವಾಹನಗಳ ಓಡಾಟ ಆರಂಭವಾಗಿದೆ. ಇದರಿಂದ ಅತ್ತಿಬೆಲೆ ಗಡಿಯಲ್ಲಿ ಟ್ರಾಫಿಕ್ ಉಂಟಾಗಿದೆ. ತಮಿಳುನಾಡಿನಿಂದ ಬೆಂಗಳೂರಿನ ಕಡೆಗೆ ಸಾವಿರಾರು ಜನರು ಬರುತ್ತಿದ್ದರು. ಇಷ್ಟು ದಿನ ಟೋಲ್ ಫ್ರೀ ಮಾಡಲಾಗಿತ್ತು. ಇಂದಿನಿಂದ ಮತ್ತೆ ಟೋಲ್ ಶುಲ್ಕ ಓಪನ್ ಆಗಿದೆ.
ಗಡಿಯಲ್ಲಿ ಪ್ರತಿಯೊಂದು ವಾಹನಗಳನ್ನು ಸಹ ಚೆಕ್ ಮಾಡಲಾಗತ್ತೆ. ಇ- ಪಾಸ್, ತುರ್ತು ವೈದ್ಯಕೀಯ ಚಿಕಿತ್ಸೆ, ಫ್ಲೈಟ್ ಟಿಕೆಟ್, ಟ್ರೈನ್ ಟಿಕೆಟ್ ಇದ್ದವರಿಗೆ ಮಾತ್ರ ಅವಕಾಶ ಮಾಡಿಕೊಡಲಾಗುತ್ತಿದೆ. ಪೂರಕವಾದಂತಹ ದಾಖಲೆ ಇಲ್ಲದೆ ಬರುವವರನ್ನು ವಾಪಸ್ ಕಳುಹಿಸಲಾಗುತ್ತಿದೆ. ತಮ್ಮ ತಮ್ಮ ಕೆಲಸಗಳಿಗಾಗಿ ಕಾರು, ಬೈಕ್ಗಳಲ್ಲಿ ಹೊರ ರಾಜ್ಯಗಳಿಂದ ಬೆಂಗಳೂರಿನ ಕಡೆಗೆ ಜನರು ಆಗಮಿಸುತ್ತಿದ್ದಾರೆ.