ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಡ್ರಗ್ಸ್ ಮಾಫಿಯಾ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ಚುರುಕುಗೊಳಿಸಿದ್ದು, ದಂಧೆಯಲ್ಲಿ ಕೇವಲ ಸಿನಿಮಾ ತಾರೆಯರು ಮಾತ್ರವಲ್ಲದೇ ಸೀರಿಯಲ್ ನಟಿಯರಿಗೂ ಡ್ರಗ್ಸ್ ಲಿಂಕ್ ಇರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಡ್ರಗ್ಸ್ ಮಾಫಿಯಾ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರಿಗೆ ತನಿಖೆ ವೇಳೆ ಸಾಕಷ್ಟು ಮಾಹಿತಿ ಲಭಿಸಿದೆ. ಇದರ ಅನ್ವಯ ಕೆಲ ಸ್ಯಾಂಡಲ್ವುಡ್ ನಟಿಯರಿಗೂ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಇತ್ತ ಪ್ರಕರಣದಲ್ಲಿ ಪೊಲೀಸರ ವಶದಲ್ಲಿರುವ ಡ್ರಗ್ ಪೆಡ್ಲರ್ ಕಾರ್ತಿಕ್ ರಾಜ್ ವಿಚಾರಣೆ ವೇಳೆ ಮಹತ್ವದ ಮಾಹಿತಿ ಹೊರ ಬಂದಿದೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಕ್ಯಾಸಿನೋ ಹೊಂದಿರುವ ರಾಹುಲ್ ಸಂಜನಾಗೆ ಪರಿಚಯವಾಗಿದ್ದು ಹೇಗೆ?
Advertisement
Advertisement
ಡ್ರಗ್ಸ್ ದಂಧೆ ನಡೆಸುತ್ತಿದ್ದ ಆರೋಪಿಗಳೊಂದಿಗೆ ಸುಮಾರು 12 ಮಂದಿ ಧಾರಾವಾಹಿ ನಟಿಯರು ನಂಟು ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಈ 12 ಮಂದಿ ನಟಿಯರಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡುವ ಸಾಧ್ಯತೆ ಇದೆ. ಇದನ್ನೂ ಓದಿ: ಡ್ರಗ್ಸ್ ನಶೆ- ನಟಿ ಸಂಜನಾ ಗಲ್ರಾನಿ ಆಪ್ತ ರಾಹುಲ್ ಸಿಸಿಬಿ ವಶಕ್ಕೆ
Advertisement
ಕಳೆದ 12 ವರ್ಷಗಳಿಂದ ಕಾರ್ತಿಕ್ ರಾಜ್ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದ, ಆದರೆ ಮೂರು ವರ್ಷಗಳಿಂದ ಈತ ದಂಧೆಯಲ್ಲಿ ಎಕ್ಸ್ಪರ್ಟ್ ಆಗಿದ್ದ ಎಂಬ ಬಗ್ಗೆ ಸಿಸಿಬಿ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ ನಟಿ ರಾಗಿಣಿ ಅವರಿಗೆ ನೋಟಿಸ್ ನೀಡಲಾಗಿದೆ. ರಾಗಿಣಿ ಅವರ ವಿಚಾರಣೆಯ ಬಳಿಕ ಬೇರೆ ಬೇರೆ ನಟ-ನಟಿಯರಿಗೆ ನೋಟಿಸ್ ನೀಡಲು ಪೊಲೀಸರು ಚಿಂತನೆ ನಡೆಸಿದ್ದಾರೆ. ಒಮ್ಮೆಯೇ ಎಲ್ಲರಿಗೂ ನೋಟಿಸ್ ಜಾರಿ ಮಾಡಿದರೆ ತನಿಖೆಗೆ ಬೇಕಾದ ಮಾಹಿತಿ ಸಿಗುವುದು ಕಷ್ಟ. ಒಬ್ಬೊಬ್ಬರ ವಿಚಾರಣೆಯ ವೇಳೆ ಸಿಗುವ ಮಾಹಿತಿಯನ್ನು ಆಧಾರಿಸಿ ತನಿಖೆ ನಡೆಸಿದರೆ ಮತ್ತಷ್ಟು ವಿಚಾರಗಳು ಬಹಿರಂಗವಾಗುವ ಕಾರಣ ಹಂತ ಹಂತವಾಗಿ ನೋಟಿಸ್ ನೀಡಲು ಮುಂದಾಗಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ವಿಚಾರಣೆಗೆ ಹಾಜರಾಗದಿರಲು ಪೊಲೀಸರಿಗೆ ರಾಗಿಣಿ ನೀಡಿದ ಕಾರಣ
Advertisement
ಪೊಲೀಸ್ ಮೂಲಗಳ ಮಾಹಿತಿಯ ಅನ್ವಯ ಇಂದು ಖ್ಯಾತ ಧಾರಾವಾಹಿ ನಟಿಯೊಬ್ಬರಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ. ಕಾರ್ತಿಕ್ ರಾಜ್ ಹೇಳಿಕೆ ಆಧರಿಸಿ ನೋಟಿಸ್ ನೀಡಲಾಗುತ್ತಿದ್ದು, ಕಾರ್ತಿಕ್ ರಾಜ್ ಬಳಿ ಇದ್ದ ಮೊಬೈಲ್ ಫೋನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತನೊಂದಿಗೆ ಸಂಪರ್ಕ ಹೊಂದಿದ್ದ ನಟ-ನಟಿಯರು, ಮೊಬೈಲ್ ಚಾಟ್ ಸೇರಿದಂತೆ ಫೋಟೋ ಹಾಗೂ ವಿಡಿಯೋಗಳ ಪರಿಶೀಲನೆಯನ್ನು ಪೊಲೀಸರು ನಡೆಸುತ್ತಿದ್ದಾರೆ.