– ಬುಮ್ರಾ, ಬೌಲ್ಟ್ ಸೂಪರ್ ಬೌಲಿಂಗ್
– ಸ್ಯಾಮ್ ಕರ್ರನ್ ಒಂಟಿ ಹೋರಾಟ
ಶಾರ್ಜಾ: ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡದ ಬೌಲರ್ ಗಳ ಮಾರಕ ದಾಳಿಗೆ ನಲುಗಿ ಕೇವಲ 115 ರನ್ಗಳ ಟಾರ್ಗೆಟ್ ನೀಡಿದೆ.
ಚೆನ್ನೈ ಕೆಟ್ಟ ದಾಖಲೆ
ಇಂದಿನ ಪಂದ್ಯದಲ್ಲಿ ಚೆನ್ನೈ ತಂಡ ಪವರ್ ಪ್ಲೇ ಹಂತದಲ್ಲಿ ಐದು ವಿಕೆಟ್ ಕಳೆದುಕೊಂಡು ಕೇವಲ 25 ರನ್ ಪೇರಿಸಿತ್ತು. ಈ ಮೂಲಕ ಐಪಿಎಲ್ನಲ್ಲಿ ಪವರ್ ಪ್ಲೇ ಹಂತದಲ್ಲಿ ಅತ್ಯಂತ ಕೆಟ್ಟ ಪ್ರದರ್ಶನ ನೀಡಿದ ಎರಡನೇ ತಂಡ ಎಂಬ ಕುಖ್ಯಾತಿ ಪಡೆದಿದೆ. ಇದರ ಜೊತೆ ಇದೇ ಮೊದಲ ಬಾರಿಗೆ ಚೆನ್ನೈ ಪವರ್ ಪ್ಲೇನಲ್ಲಿ ತನ್ನ ಐದು ವಿಕೆಟ್ ಕಳೆದುಕೊಂಡಿತ್ತು. ಇದಕ್ಕೂ ಮೊದಲು 2011ರಲ್ಲಿ ಕೊಚ್ಚಿ ಟಸ್ಕರ್ಸ್ ತಂಡ ಡೆಕ್ಕನ್ ಚಾರ್ಜಸ್ ವಿರುದ್ಧ ಪವರ್ ಪ್ಲೇನಲ್ಲಿ ಆರು ವಿಕೆಟ್ ಕಳೆದುಕೊಂಡು 29 ರನ್ ಸೇರಿಸಿತ್ತು.
Advertisement
Another one bites the dust.
Rahul Chahar picks up his second wicket of the game.#CSK 43/7 https://t.co/I1MQgUNDBr #Dream11IPL pic.twitter.com/iCv5TQzVVS
— IndianPremierLeague (@IPL) October 23, 2020
Advertisement
ಬುಮ್ರಾ, ಬೌಲ್ಟ್ ಸೂಪರ್ ಬೌಲಿಂಗ್
ಇಂದಿನ ಪಂದ್ಯದಲ್ಲಿ ಮಂಬೈ ಇಂಡಿಯನ್ಸ್ ತಂಡ ವೇಗಿಗಳು ಆರಂಭದಲ್ಲೇ ಚೆನ್ನೈ ಆಟಗಾರರನ್ನು ಕಾಡಿದರು. ನಾಲ್ಕು ಓವರ್ ಬೌಲ್ ಮಾಡಿದ ಬುಮ್ರಾ, ಎರಡು ವಿಕೆಟ್ ತೆಗೆದು 25 ರನ್ ನೀಡಿದರು. ಜೊತೆಗೆ ಟ್ರೆಂಟ್ ಬೌಲ್ಟ್ ಅವರು ನಾಲ್ಕು ಓವರ್ ಬೌಲ್ ಮಾಡಿ ನಾಲ್ಕು ವಿಕೆಟ್ ಕಿತ್ತು ಕೇವಲ 18 ರನ್ ನೀಡಿದರು. ಇವರಿಗೆ ಉತ್ತಮ ಸಾಥ್ ನೀಡಿದ ಸ್ಪಿನ್ನರ್ ರಾಹುಲ್ ಚಹರ್ ಅವರು ನಾಲ್ಕು ಓವರ್ ಬೌಲ್ ಮಾಡಿದ ಎರಡು ವಿಕೆಟ್ ಕಿತ್ತು 22 ರನ್ ನೀಡಿದರು.
Advertisement
NCN with his first wicket of the game. Shardul departs and #CSK are 8 down.
Live – https://t.co/I1MQgUNDBr #Dream11IPL pic.twitter.com/QfzwLwy8si
— IndianPremierLeague (@IPL) October 23, 2020
Advertisement
ಇಂದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಬಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟ್ಸ್ ಮ್ಯಾನ್ಗಳಿಗೆ ಮುಂಬೈ ವೇಗಿಗಳು ಆರಂಭದಲ್ಲೇ ಆಘಾತ ನೀಡಿದರು. ಇನ್ನಿಂಗ್ಸ್ ಐದನೇ ಬಾಲಿನಲ್ಲಿ ಚೆನ್ನೈ ಆರಂಭಿಕ ರುತುರಾಜ್ ಗಾಯಕವಾಡ್ ಅವರನ್ನು ಟ್ರೆಂಟ್ ಬೌಲ್ಟ್ ಔಟ್ ಮಾಡಿದರು. ನಂತರ ಎರಡನೇ ಓವರ್ ದಾಳಿಗೆ ಬಂದ ಜಸ್ಪ್ರೀತ್ ಬುಮ್ರಾ ಅವರು ನಾಲ್ಕನೇ ಬಾಲಿನಲ್ಲಿ ಅಂಬಾಟಿ ರಾಯುಡು ಮತ್ತು ಐದನೇ ಬಾಲಿನಲ್ಲಿ ಎನ್ ಜಗದೀಶನ್ ಅವರ ವಿಕೆಟ್ ಕಿತ್ತರು.
Lone man standing for #CSK.
He brings up his 2nd IPL half-century #Dream11IPL pic.twitter.com/9Wt7srFaC8
— IndianPremierLeague (@IPL) October 23, 2020
ನಂತರ ಮೂರನೇ ಓವರ್ ಬೌಲ್ ಮಾಡಿದ ಟ್ರೆಂಟ್ ಬೌಲ್ಟ್ ಅವರು ಐದನೇ ಬಾಲಿನಲ್ಲಿ ಫಾಫ್ ಡು ಪ್ಲೆಸಿಸ್ ಅವರನ್ನು ಔಟ್ ಮಾಡಿದರು. ಈ ಮೂಲಕ ಚೆನ್ನೈ ಮೂರನೇ ಓವರಿನ ಮುಕ್ತಾಯಕ್ಕೆ ಐದು ರನ್ ಗಳಿಸಿ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ನಂತರ ಜೊತೆಯಾದ ನಾಯಕ ಧೋನಿ ಮತ್ತು ಜಡೇಜಾ ತಂಡದ ರನ್ ವೇಗ ಹೆಚ್ಚಿಸುವಂತೆ ಬ್ಯಾಟ್ ಬೀಸಿದರು. ಆದರೆ ಐದನೇ ಓವರ್ ಎರಡನೇ ಬಾಲಿನಲ್ಲಿ ಟ್ರೆಂಟ್ ಬೌಲ್ಟ್ ಅವರಿಗೆ ಜಡೇಜಾ ವಿಕೆಟ್ ಒಪ್ಪಿಸಿ ಹೊರನಡೆದರು.
ICYMI – Boom Boom Bumrah's double strike
2 wickets in 2 balls. First Rayudu, then Jagadeesan. Outstanding bowling from @Jaspritbumrah93.https://t.co/x914K0w15E #Dream11IPL
— IndianPremierLeague (@IPL) October 23, 2020
ಈ ಮೂಲಕ ಚೆನ್ನೈ ಪವರ್ ಪ್ಲೇ ಮುಕ್ತಾಯದ ವೇಳಗೆ ತಂಡದ ಪ್ರಮುಖ ಐದು ವಿಕೆಟ್ ಕಳೆದುಕೊಂಡು ಕೇವಲ 24 ರನ್ ಗಳಿಸಿತು. ನಂತರ ಆರನೇ ಓವರ್ ನಾಲ್ಕನೇ ಬಾಲಿನಲ್ಲಿ 16 ಬಾಲಿಗೆ 16 ರನ್ ಗಳಿಸಿ ಆಡುತ್ತಿದ್ದ ಎಂಎಸ್ ಧೋನಿಯವರು ರಾಹುಲ್ ಚಹರ್ ಅವರ ಬೌಲಿಂಗ್ನಲ್ಲಿ ಕ್ವಿಂಟನ್ ಡಿ ಕಾಕ್ ಅವರಿಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದರು. ನಂತರ ರಾಹುಲ್ ಚಹರ್ ಅವರ ಬೌಲಿಂಗ್ ಮೋಡಿ ದೀಪಕ್ ಚಹರ್ ಶೂನ್ಯ ಸುತ್ತಿ ಡಗೌಟ್ಗೆ ವಾಪಸ್ ಆದರು.
#CSK lose five wickets in the powerplay with 24 runs on the board.
Live – https://t.co/I1MQgUNDBr #Dream11IPL pic.twitter.com/iSO9BVOVD2
— IndianPremierLeague (@IPL) October 23, 2020
ನಂತರ ಜೊತೆಯಾದ ಶಾರ್ದುಲ್ ಠಾಕೂರ್ ಮತ್ತು ಸ್ಯಾಮ್ ಕರ್ರನ್ ಅವರು ತಾಳ್ಮೆಯಿಂದ 28 ರನ್ಗಳ ಜೊತೆಯಾಟವಾಡಿದರು. ಆದರೆ 14ನೇ ಓವರಿನ ಐದನೇ ಬಾಲಿನಲ್ಲಿ ನಾಥನ್ ಕೌಲ್ಟರ್-ನೈಲ್ ಬೌಲಿಂಗ್ನಲ್ಲಿ ಶಾರ್ದುಲ್ ಠಾಕೂರ್ ಕ್ಯಾಚ್ ಕೊಟ್ಟು ಔಟ್ ಆದರು. ನಂತರ ಒಂದಾದ ಇಮ್ರಾನ್ ತಾಹಿರ್ ಮತ್ತು ಸ್ಯಾಮ್ ಕರ್ರನ್ ಅವರು 18.4 ಓವರಿನಲ್ಲೇ ಚೆನ್ನೈ ತಂಡವನ್ನು 100ರ ಗಡಿ ದಾಟಿಸಿದರು. ಕೊನೆಯವರೆಗೂ ಕ್ರೀಸ್ನಲ್ಲಿದ್ದ ಸ್ಯಾಮ್ ಕರ್ರನ್ ಅವರು 46 ಎಸೆತದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು. ಆದರೆ ಕೊನೆಯ ಬಾಲಿನಲ್ಲಿ ಕರ್ರನ್ ಔಟ್ ಆದರು.