ವಚೆನ್ನೈ: ಐಪಿಎಲ್ ಇತಿಹಾಸದಲ್ಲಿ ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಕ್ರಿಸ್ ಮೋರಿಸ್ ದುಬಾರಿ ಬೆಲೆಗೆ ಬಿಡ್ ಆಗಿದ್ದರೆ ಹಲವು ತಾರಾ ಆಟಗಾರರು ಬಿಕರಿ ಆಗಲಿಲ್ಲ.
ಇಂಗ್ಲೆಂಡಿನ ಜೇಸನ್ ರಾಯ್, ಅಲೆಕ್ಸ್ ಹೇಲ್ಸ್, ಆದಿಲ್ ರಶೀದ್, ಆಸ್ಟ್ರೇಲಿಯಾ ಆರೋನ್ ಫಿಂಚ್, ನ್ಯೂಜಿಲೆಂಡಿನ ಆಟಗಾರರಾದ ಕೋರೆ ಆಂಡರ್ಸನ್, ಮಾರ್ಟಿ ಗಪ್ಟಿಲ್, ಟಿಮ್ ಸೌಥಿ, ವೆಸ್ಟ್ ಇಂಡೀಸಿನ ಎವಿನ್ ಲೆವಿಸ್ ಅವರನ್ನು ಯಾರೂ ಖರೀದಿಸುವ ಮನಸ್ಸು ಮಾಡಲಿಲ್ಲ. ಕಳೆದ ಐಪಿಎಲ್ನಲ್ಲಿ ಆರೋನ್ ಫಿಂಚ್ ಬೆಂಗಳೂರು ಪರ ಆಡಿದ್ದರು. ಆದರೆ ಅವರಿಂದ ನಿರೀಕ್ಷಿತ ಪ್ರದರ್ಶನ ಬಂದಿರಲಿಲ್ಲ.
Advertisement
How's that for numbers ????????
Here are the ????5️⃣ buys in the @Vivo_India #IPLAuction pic.twitter.com/SPagm8laZo
— IndianPremierLeague (@IPL) February 18, 2021
Advertisement
ಕನ್ನಡಿಗರ ಪೈಕಿ ಕೆ. ಗೌತಮ್ 9.25 ಕೋಟಿಗೆ ಚೆನ್ನೈ ತಂಡದ ಪಾಲಾಗಿದ್ದರೆ, ಕರಣ್ ನಾಯರ್ 50 ಲಕ್ಷಕ್ಕೆ ಕೆಕೆಆರ್, ಜೆ. ಸುಚಿತ್ 30 ಲಕ್ಷಕ್ಕೆ ಹೈದರಬಾದ್, ಕರಿಯಪ್ಪ 20 ಲಕ್ಷಕ್ಕೆ ರಾಜಸ್ಥಾನಕ್ಕೆ ಮಾರಾಟವಾಗಿದ್ದಾರೆ.
Advertisement
ಈ ಬಾರಿ ಬಿಡ್ನಲ್ಲಿ ಆಲ್ರೌಂಡರ್ ಮತ್ತು ವೇಗದ ಬೌಲರ್ಗಳಿಗೆ ಬೇಡಿಕೆ ಇತ್ತು. 2020-21 ಬಿಗ್ ಬ್ಯಾಶ್ ಲೀಗ್ನಲ್ಲಿ ಗರಿಷ್ಟ ವಿಕೆಟ್ ಪಡೆದಿದ್ದ ಜಾಯ್ ರಿಚರ್ಡ್ಸನ್ ಅವರನ್ನು ಪಂಜಾಬ್ ಕಿಂಗ್ಸ್ ಖರೀದಿ ಮಾಡಿದೆ.
Advertisement
ಕಳೆದ ವರ್ಷ 10 ಕೋಟಿ ರೂ. ನೀಡಿ ಆರ್ಸಿಬಿ ಮೋರಿಸ್ ಅವರನ್ನು ಖರೀದಿಸಿತ್ತು. ಈ ಬಾರಿ 75 ಲಕ್ಷ ಮೂಲ ಬೆಲೆಯೊಂದಿಗೆ ಹರಾಜಿಗೆ ನೊಂದಾಯಿಸಿಕೊಂಡಿದ್ದ ಮೋರಿಸ್ ಅವರನ್ನು ಖರೀದಿಸಲು ರಾಜಸ್ಥಾನ, ಮುಂಬೈ, ಪಂಜಾಬ್ ಪೈಪೋಟಿ ನಡೆಸಿದ್ದವು. ಕೊನೆಗೆ ಮೋರಿಸ್ ಅವರನ್ನು 16.25 ಕೋಟಿ ರೂ.ಗೆ ಬಿಡ್ ಮಾಡಿ ರಾಜಸ್ಥಾನ ಖರೀದಿಸಿತು.