ಢಾಕ: ಐಪಿಎಲ್ನಲ್ಲಿ ಎಡವಟ್ಟು ಮಾಡಿಕೊಂಡು ಒಂದು ವರ್ಷದ ಕ್ರಿಕೆಟ್ನಿಂದ ಬ್ಯಾನ್ ಆಗಿದ್ದ ಬಾಂಗ್ಲಾ ದೇಶದ ಕ್ರಿಕೆಟ್ ಆಟಗಾರ ಶಕೀಬ್ ಅಲ್ ಹಸನ್ ಅವರು ಮತ್ತೆ ಕ್ರಿಕೆಟ್ ಜೀವನಕ್ಕೆ ವಾಪಸ್ ಆಗಲು ಸಿದ್ಧವಾಗಿದ್ದಾರೆ.
ಶಕೀಬ್ ಅಲ್ ಹಸನ್ ಅವರನ್ನು 2019ರ ಐಪಿಎಲ್ ಮುಗಿದ ಬಳಿಕ ಒಂದು ವರ್ಷ ನಿಷೇಧ ಮಾಡಲಾಗಿತ್ತು. ಶಕೀಬ್ ಅವರನ್ನು 2020ರ ಅಕ್ಟೋಬರ್ 28ರವೆಗೆ ಬ್ಯಾನ್ ಮಾಡಲಾಗಿತ್ತು. ಅಕ್ಟೋಬರಿನಲ್ಲೇ ಬ್ಯಾನ್ ಅವಧಿ ಮುಗಿದರೂ ಕೂಡ ಬಾಂಗ್ಲಾದೇಶದಲ್ಲಿ ಕೊರೊನಾ ಕಾರಣದಿಂದ ಯಾವುದೇ ಕ್ರಿಕೆಟ್ ಟೂರ್ನಿ ಆರಂಭವಾಗದ ಕಾರಣ ಶಕೀಬ್ ಕಮ್ಬ್ಯಾಕ್ ಮಾಡಿರಲಿಲ್ಲ.
Advertisement
Advertisement
ಒಂದು ವರ್ಷ ಬ್ಯಾನ್ ಆದ ಕಾರಣ ಪಾಕಿಸ್ತಾನ ಟೂರ್ನಿಯನ್ನು ಶಕೀಬ್ ಮಿಸ್ ಮಾಡಿಕೊಂಡಿದ್ದರು. ಆದರೆ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಆಡುವ ನಿರೀಕ್ಷೆ ಇತ್ತು. ಆ ಸರಣಿಯೂ ಕೂಡ ಕೊರೊನಾ ಕಾರಣದಿಂದ ರದ್ದಾಗಿದೆ. ಈ ಕಾರಣದಿಂದ ಬಾಂಗ್ಲಾದಲ್ಲಿ ನಡೆಯಲಿರುವ ಬಂಗಬಂಧು ಟಿ-20 ದೇಶೀಯ ಟೂರ್ನಿಯಲ್ಲಿ ಆಡುವ ಮೂಲಕ ಶಕೀಬ್ ಕಮ್ಬ್ಯಾಕ್ ಮಾಡಲಿದ್ದಾರೆ. ಈ ಟೂರ್ನಿ ಶೇರ್-ಇ-ಬಾಂಗ್ಲಾ ಮೈದಾನದಲ್ಲಿ ನಡೆಯಲಿದೆ.
Advertisement
Advertisement
ಈ ವಿಚಾರದ ಬಗ್ಗೆ ಮಾತನಾಡಿರುವ ಬಾಂಗ್ಲಾದೇಶದ ವಿಕೆಟ್ ಕೀಪರ್ ಮತ್ತು ಅನುಭವಿ ಆಟಗಾರ ಮುಶ್ಫಿಕುರ್ ರಹೀಂ, ಇಡೀ ವಿಶ್ವವೇ ಶಕೀಬ್ ಅವರ ಆಟ ನೋಡಲು ಕಾಯುತ್ತಿದೆ. ಅವರು ಮತ್ತೆ ವಾಪಸ್ ಆಗುತ್ತಿರುವುದು ಸಂತೋಷ ತಂದಿದೆ. ಶಕೀಬ್ ವಿಶ್ವದ ನಂಬರ್ ಓನ್ ಆಲ್ರೌಂಡರ್, ಹೀಗಾಗಿ ಆತನನ್ನು ಮತ್ತೆ ಮೈದಾನದಲ್ಲಿ ನೋಡಲು ಬಹಳ ಖುಷಿಯಾಗುತ್ತದೆ ಎಂದು ತಿಳಿಸಿದ್ದಾರೆ.
2019ರ ಐಪಿಎಲ್ನಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ಳುವಂತೆ ಬುಕ್ಕಿಗಳು ತಮ್ಮನ್ನು ಸಂಪರ್ಕ ಮಾಡಿರುವ ವಿಚಾರವನ್ನು ಶಕೀಬ್ ಐಸಿಸಿ ಮತ್ತು ಬಿಸಿಸಿಐ ಗಮನಕ್ಕೆ ತಂದಿರಲಿಲ್ಲ. ಆದರೆ ತನಿಖೆ ವೇಳೆ ಶಕೀಬ್ ಅವರನ್ನು ಬುಕ್ಕಿಗಳು ಸಂಪರ್ಕಿಸಿರುವ ವಿಚಾರ ತಿಳಿದು ಬಂದಿತ್ತು. ಈ ಕಾರಣದಿಂದ ಶಕೀಬ್ ಅವರನ್ನು ಎರಡು ವರ್ಷ ಬ್ಯಾನ್ ಮಾಡಲಾಗಿತ್ತು. ಆ ನಂತರ ಬ್ಯಾನ್ ಅವಧಿಯನ್ನು ಕಡಿಮೆ ಮಾಡಿದ ಐಸಿಸಿ ಒಂದು ವರ್ಷ ನಿಷೇಧಿಸಿತ್ತು.