ಬಳ್ಳಾರಿ: ಐತಿಹಾಸಿಕ ಶ್ರೀ ಮೈಲಾರ ಜಾತ್ರೆಯನ್ನು ರದ್ದು ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಇದೇ ತಿಂಗಳ 19 ರಿಂದ ಮಾರ್ಚ್ 2 ರವರೆಗೆ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಸುಕ್ಷೇತ್ರ ಮೈಲಾರದಲ್ಲಿ ಜಾತ್ರೆ ನಡೆಯಬೇಕಿತ್ತು. ಆದರೆ ಕೊವೀಡ್ ಹಿನ್ನೆಲೆ ಮೈಲಾರ ಜಾತ್ರೆ ರದ್ದುಗೊಳಿಸಿ ಬಳ್ಳಾರಿ ಜಿಲ್ಲಾಧಿಕಾರಿ ಪವರ್ ಕುಮಾರ್ ಮಾಲಪಾಟಿ ಆದೇಶ ಮಾಡಿದ್ದಾರೆ.
Advertisement
Advertisement
ಪ್ರತಿವರ್ಷ ಸಾವಿರಾರು ಭಕ್ತರು ಮೈಲಾರ ಕಾರ್ಣಿಕೋತ್ಸವ ಕೇಳಲು ರಾಜ್ಯದ ಮೂಲೆ, ಮೂಲೆಗಳಿಂದ ಆಗಮಿಸುತ್ತಿದ್ದರು. ಮೈಲಾರ ಜಾತ್ರೆಯಲ್ಲಿ ಹೇಳೋ ಕಾರ್ಣಿಕೋತ್ಸವ ದೇಶದ ವಿದ್ಯಮಾನಕ್ಕೆ ದಿಕ್ಸೂಚಿ ಎಂಬ ವಾಡಿಕೆ ಸಹ ಇತ್ತು. ಇದೇ ತಿಂಗಳು 19 ರಿಂದ ಮಾರ್ಚ್ 2 ರವರೆಗೆ ನಡೆಯಬೇಕಿದ್ದ ಜಾತ್ರಾ ಮಹೋತ್ಸವದಲ್ಲಿ ಮಾ.1 ರಂದು ಕಾರ್ಣಿಕೋತ್ಸವ ನಡೆಯಬೇಕಿತ್ತು.
Advertisement
ಜಾತ್ರೆ ರದ್ದು ಮಾಡಿದ ಹಿನ್ನೆಲೆಯಲ್ಲಿ ಕಾರ್ಣಿಕೋತ್ಸವ ನಡೆಯುವುದು ಅನುಮಾನವಾಗಿದೆ. ಇನ್ನೂ ಕಾರ್ಣಿಕೋತ್ಸವ ರದ್ದು ಮಾಡಿದ ಹಿನ್ನೆಲೆಯಲ್ಲಿ ಮೈಲಾರದ ಕಪಿಲ ಮುಣಿ ಸ್ವಾಮೀಜಿ ಅವರು, ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ನಾವೆಲ್ಲರೂ ಪಾಲನೆ ಮಾಡಬೇಕಿದೆ. ಹೀಗಾಗಿ ಮೈಲಾರದ ಸ್ವಾಮೀಜಿಯವರು ಸರ್ಕಾರದ ನಿಯಮ ಪಾಲನೆ ಮಾಡುವಂತೆ ಭಕ್ತರಲ್ಲಿ ಮನವಿ ಮಾಡಿದ್ದಾರೆ.