ಬೆಂಗಳೂರು: ಏರಿಯಾದಲ್ಲಿ ಹವಾ ಮೆಂಟೈನ್ ಮಾಡಬೇಕೆಂದು ಯುವಕನೋರ್ವ ತನ್ನ ಸ್ನೇಹಿತನನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಗಂಗಮ್ಮನಗುಡಿಯಲ್ಲಿ ನಡೆದಿದೆ.
ಕೊಲೆಯಾದ ಯುವಕನನ್ನು ಕಾರ್ತಿಕ್ ಎಂದು ಗುರುತಿಸಲಾಗಿದೆ. ಕಾರ್ತಿಕ್ ಸ್ನೇಹಿತರೇ ಆದ ಅಶೋಕ್ ಮತ್ತು ಅವನ ಸಹಚರರು ಹತ್ಯೆ ಮಾಡಿದ್ದಾರೆ. ಹತ್ಯೆಯಾದ ಕಾರ್ತಿಕ್ ಹಾಗೂ ಹಂತಕ ಅಶೋಕ್ ಒಂದೇ ಗ್ಯಾಂಗ್ನ ಸದಸ್ಯರಾಗಿದ್ದು, ಏರಿಯಾದಲ್ಲಿ ನಾನೇ ಜಾಸ್ತಿ ಹವಾ ಮಾಡಬೇಕೆಂದು ಆಶೋಕ್ ಸ್ನೇಹಿತ ಕಾರ್ತಿಕ್ ಅನ್ನೇ ಕೊಲೆ ಮಾಡಿದ್ದಾನೆ.
ಕಾರ್ತಿಕ್ ಮತ್ತು ಅಶೋಕ್ ತಮ್ಮ ಸ್ನೇಹಿತರ ಜೊತೆ ಸೇರಿಕೊಂಡು ನಿನ್ನೆ ಮಧ್ಯಾಹ್ನ ಎಣ್ಣೆ ಪಾರ್ಟಿ ಮಾಡಿದ್ದಾರೆ. ಪಾರ್ಟಿ ವೇಳೆ ಅವರವರ ಮಧ್ಯೆಯೇ ಜಗಳ ಶುರುವಾಗಿದೆ. ಈ ವೇಳೆ ಅಶೋಕ್ ಮತ್ತು ಅವರ ಸಹಚರರು ಏರಿಯಾದಲ್ಲಿ ನಮ್ಮ ಹವಾನೇ ಜಾಸ್ತಿ ಇರಬೇಕು ಎಂದು ಚಾಕುವಿನಿಂದ ಕಾರ್ತಿಕ್ನನ್ನು ರಸ್ತೆ ಪಕ್ಕದಲ್ಲೇ ಬರ್ಬರವಾಗಿ ಹತ್ಯೆ ಮಾಡಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.
ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ಹುಡುಕುತ್ತಿದ್ದಾರೆ. ಈ ಸಂಬಂಧ ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.