– ಸ್ಯಾಂಪಲ್ ಸಂಗ್ರಹ ವೇಳೆಯಲ್ಲಿನ ಎಡವಟ್ಟಿಗೆ ಬೇಸರ
– ಲಸಿಕೆಯ ವ್ಯರ್ಥವನ್ನ ತಡೆಯೋಣ
ನವದೆಹಲಿ: ಏಪ್ರಿಲ್ 11 ರಿಂದ ಏಪ್ರಿಲ್ 14ರವರೆಗೆ ದೇಶದಾದ್ಯಂತ ಕೊರೊನಾ ಲಸಿಕೆ ಉತ್ಸವ ಆಚರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ರಾಜ್ಯದ ಮುಖ್ಯಮಂತ್ರಿಗಳ ಜೊತೆಗಿನ ಸಭೆ ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೋವಿಡ್ ವೇಸ್ಟೇಜ್ ಸಹ ನಿಯಂತ್ರಿಸಬೇಕಿದೆ. ಇದರ ಜೊತೆ ಕೊರೊನಾ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಬೇಕಿದೆ. ಏಪ್ರಿಲ್ 11ರಂದು ಜ್ಯೋತಿಬಾಪುಲೆ ಅವರ ಜನ್ಮದಿನ. ಈ ದಿನದ ವಿಶೇಷವಾಗಿ ಏಪ್ರಿಲ್ 11 ರಿಂದ 14 ರವರೆಗೆ ಲಸಿಕೆ ಉತ್ಸವ ನಡೆಯಬೇಕು. ಈ ಸಮಯದಲ್ಲಿ ಅಗತ್ಯವಿರುವ ಜನರಿಗೆ ಲಸಿಕೆ ನೀಡುವ ಅಭಿಯಾನ ನಡೆಯಬೇಕಿದೆ. ಲಸಿಕೆ ನೀಡುವ ಕಾರ್ಯ ಚುರುಕುಗೊಳ್ಳಲಿದೆ. ಕಳೆದ ವರ್ಷವೂ ಒಂದು ಹಂತದವರೆಗೆ ಏರಿಕೆ ಕಂಡು ಇಳಿದಿದೆ. ಸದ್ಯ ಏರಿಕೆ ಪ್ರಮಾಣ ಇಳಿಕೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement
Advertisement
ಟಫ್ ರೂಲ್ಸ್ ಅನಿವಾರ್ಯ: ಇನ್ಮುಂದೆ ನೈಟ್ ಕರ್ಫ್ಯೂ ಪದದ ಬಳಕೆ ಬೇಡ. ಅದರಲ್ಲಿ ಬದಲಾಗಿ ಕೊರೊನಾ ಕರ್ಫ್ಯೂ ಎಂದು ಹೇಳೋಣ. ಇದರಿಂದ ಕೊರೊನಾ ಜಾಗೃತಿ ಮೂಡುತ್ತದೆ. ಇಂದು ನಮ್ಮ ಬಳಿ ಕಳೆದ ವರ್ಷದ ಅನುಭವ ಇದೆ. ಹಾಗಾಗಿ ಕೊರೊನಾ ನಿಯಂತ್ರಣ ತರಲು ಸಾಧ್ಯವಿಲ್ಲ. ಮೈಕ್ರೋ ಕಂಟೈನ್ಮೆಂಟ್ಗಳಲ್ಲಿ ಟಫ್ ರೂಲ್ಸ್ ಅನಿವಾರ್ಯತೆ ಇದೆ.
Advertisement
Advertisement
ಟೆಸ್ಟಿಂಗ್, ಟ್ರೇಸ್, ಟ್ರ್ಯಾಕಿಂಗ್: ಮೊದಲ ಅಲೆಯಲ್ಲಿ ಸಣ್ಣ ಪ್ರಮಾಣದ ಲಕ್ಷಣಗಳು ಕಾಣಿಸಿಕೊಂಡರೂ ವೈದ್ಯರ ಬಳಿ ಬರುತ್ತಿದ್ದರು. ಆದ್ರೆ ಈಗ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಇದರ ಪರಿಣಾಮ ಕುಟುಂಬದ ಎಲ್ಲರಿಗೂ ಸೋಂಕು ತಗಲುಗ್ತಿದೆ. ಲಸಿಕೆ ಬಗ್ಗೆ ಮಾತನಾಡೋದಕ್ಕಿಂತ ಕೊರೊನಾ ಟೆಸ್ಟ್ ಹೆಚ್ಚಳ ಮಾಡುವ ಗುರಿ ಎಲ್ಲ ರಾಜ್ಯಗಳ ಮುಂದಿದೆ. ಕೊರೊನಾ ಪರೀಕ್ಷೆಯನ್ನ ಹಗುರುವಾಗಿ ಕಾಣಬೇಡಿ. ಟೆಸ್ಟಿಂಗ್, ಟ್ರೇಸ್, ಟ್ರ್ಯಾಕಿಂಗ್ ಕೊರೊನಾ ನಿಯಂತ್ರಣಕ್ಕೆ ನಮ್ಮ ಬಳಿಯಲ್ಲಿರುವ ಅಸ್ತ್ರ.
ಕೊರೊನಾ ಪರೀಕ್ಷೆ ಹೆಚ್ಚಳವಾದ್ರೆ ಸಹಜವಾಗಿ ಏರಿಕೆ ಆಗುತ್ತೆ. ಸಂಖ್ಯೆ ಹೆಚ್ಚಳವಾದ್ರೆ ಮುಂದೆ ಏನು ಮಾಡಬೇಕು ಅನ್ನೋದು ನಮಗೆ ಗೊತ್ತಾಗಲಿದೆ. ಆ ರಾಜ್ಯ ಹೆಚ್ಚು, ಕಡಿಮೆ ಅನ್ನೋದರ ಬಗ್ಗೆ ಮಾತಾಡೋದು ಬೇಡ. ಮುಂದಿನ ನಾಲ್ಕು ವಾರ ದೇಶಕ್ಕೆ ಕಠಿಣವಾಗಿದೆ.
ಕ್ರಮಬದ್ಧ ಕೊರೊನಾ ಪರೀಕ್ಷೆ: ಇನ್ನೂ ನಿಯಮಬದ್ಧವಾಗಿ ಟೆಸ್ಟಿಂಗ್ ನಡೆಯುತ್ತಿಲ್ಲ ಅನ್ನೋದು ಗಮನಕ್ಕೆ ಬಂದಿದೆ. ಕೊರೊನಾ ಟೆಸ್ಟ್ ಮಾಡೋವಾಗ ಸೂಜಿ ಗಂಟಲಿನ ಆಳದವರೆಗೂ ಹೋಗಬೇಕು. ಅಂದಾಗ ಮಾತ್ರ ನಿಖರ ಫಲಿತಾಂಶ ಬರಲಿದೆ. ಕಂಟೈನ್ಮೆಂಟ್ ಝೋನ್ ಗೆ ಒಳಪಡುವ ಎಲ್ಲರನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಬೇಕು. ಅಂದಾಗ ಮಾತ್ರ ಕೊರೊನಾ ನಿಯಂತ್ರಣಕ್ಕೆ ಬರಲಿದೆ.
Today, the problem is that we have forgotten about COVID19 testing and have moved to vaccination. We have to remember that we had won the fight against COVID19 without a vaccine. We have to emphasise on testing: Prime Minister Narendra Modi during the meeting with CMs pic.twitter.com/TXHgOD329k
— ANI (@ANI) April 8, 2021
ಪ್ರತಿ ವರದಿಯ ವಿಶ್ಲೇಷಣೆ ಅಗತ್ಯ: ಕೊರೊನಾ ಸೋಂಕಿತನಿಂದ ಸಾವನ್ನಪ್ಪಿದ ರೋಗಿಯ ಇಂಚಿಂಚೂ ಮಾಹಿತಿ ಕಲೆ ಹಾಕಬೇಕು. ಮೃತ ಸೋಂಕಿತನ ಹೆಲ್ತ್ ಹಿಸ್ಟರಿ ಪತ್ತೆ ಮಾಡಿದ್ರೆ ಮುಂದಾಗುವ ಸಾವುಗಳಿಗೆ ಬ್ರೇಕ್ ಆಗಬಹುದು. ಪ್ರತಿ ಸೋಂಕಿತನ ವರದಿಯ ವಿಶ್ಲೇಷಣೆ ಅಗತ್ಯ. ಕೋವಿಡ್ ಸೋಂಕಿನ ಖಚಿತ ಪ್ರಮಾಣ ಶೇ.5ಕ್ಕಿಂತ ಕಡಿಮೆ ತರಬೇಕು. ಕೊರೊನಾ ಲಸಿಕೆ ವೇಗವನ್ನ ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಲಸಿಕೆ ಪಡೆದ ನಂತ್ರವೂ ಮಾಸ್ಕ್ ಕಡ್ಡಾಯ.
11th to 14th April can be observed as 'Tika (vaccination) Utsav' for COVID19 vaccination: Prime Minister Narendra Modi pic.twitter.com/8PfY6EZftS
— ANI (@ANI) April 8, 2021
ಕಳೆದ ವರ್ಷ ಲಸಿಕೆ ಇಲ್ಲದಿದ್ದರೂ ಕೊರೊನಾ ಗೆದ್ದಿದ್ದೇವೆ. ಈ ವರ್ಷ ಲಸಿಕೆಗಾಗಿ ದಾರಿ ನೋಡದೇ ಟೆಸ್ಟಿಂಗ್ ಹೆಚ್ಚಳವಾಗಬೇಕಿದೆ. ಕೊರೊನಾ ಲಸಿಕೆ ಹಂತವಾಗಿ ನಡೆಯಲಿದ್ದು, ಎಲ್ಲರಿಗೂ ಲಭ್ಯವಾಗಲಿದೆ. ಕೊರೊನಾ ವಿಷಯದಲ್ಲಿಯೂ ಕೆಲವರು ರಾಜಕೀಯ ಹೇಳಿಕೆ ನೀಡುತ್ತಿದ್ದಾರೆ. ಆದ್ರೆ ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ಔಷಧಿ ಪಡೆದು ಮಳೆಯಲ್ಲಿ ತಿರುಗಾಡಿದ್ರೆ ಜ್ವರ ಬಂದೇ ಬರುತ್ತೆ. ಮಳೆ ಬಂದಾಗ ಛತ್ರಿ ಇಟ್ಟುಕೊಳ್ಳಬೇಕು. ಹಾಗೆಯೇ ಲಸಿಕೆ ಪಡೆದ ನಂತ್ರವೂ ನಿಯಮಗಳ ಪಾಲಿಸೋದು ಅನಿವಾರ್ಯ ಎಂದು ಹೇಳಿದರು.
During our discussion, we raised the issue of mortality rate, we have to make sure it remains as low as possible. We should have comprehensive data about patients illnesses etc. this will help save their lives: PM Modi to CMs pic.twitter.com/kXl8AcMyXn
— ANI (@ANI) April 8, 2021