ಬೆಂಗಳೂರು: ಏನಯ್ಯ ಸತೀಶಾ ಟೆನ್ಷನ್ ಕೊಡ್ತಿದಿಯಲ್ಲಪ್ಪ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬೆಳಗಾವಿ ಕ್ಷೇತ್ರದ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರಿಗೆ ಹೇಳಿದ್ದಾರೆ.
ಉಪಚುನಾವಣೆಯಲ್ಲಿ ಇಗಾಗಲೇ ಮಸ್ಕಿ ಕ್ಷೇತ್ರದಲ್ಲಿ ಗೆಲುವಿನ ನಗೆಬೀರಿರುವ ಕಾಂಗ್ರೆಸ್ ಬೆಳಗಾವಿ ಕ್ಷೇತ್ರದ ರಿಸಲ್ಟ್ಗಾಗಿ ಕಾಯುತ್ತಿದೆ. ಏನಯ್ಯ ಸತೀಶ್ ಟೆನ್ಷನ್ ಕೊಡ್ತಿದಿಯಲ್ಲಪ್ಪ. ಇಲ್ಲಾ ಸಾರ್ 30 ಸಾವಿರ ಓಟ್ನಲ್ಲಿ ಗೆಲ್ಲುತ್ತೇನೆ ಎಂದ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಒಳ್ಳೆದಾಗಲಿ ಗೆದ್ದು ಬಾ ಎಂದ ಸಿದ್ದರಾಮಯ್ಯ ಹೇಳಿದ್ದಾರೆ.
ಉಪಚುನಾವಣೆಯಲ್ಲಿ ಮಸ್ಕಿ ಕ್ಷೇತ್ರದಲ್ಲಿ ಗೆಲವು ಸಾಧಿಸಿದ ಬಸವನಗೌಡ ತುರವಿಹಾಳ್ಗೆ ಶುಭ ಹಾರೈಸಿದ ಸಿದ್ದರಾಮಯ್ಯ. ಅಭಿನಂದನೆ ಕಣಯ್ಯ ನಿನಗೆ. 2 ವರ್ಷ ಟೈಮಿದೆ ಚೆನ್ನಾಗಿ ಕೆಲಸ ಮಾಡಿ ಮತ್ತೆ ನೀನೆ ಗೆಲ್ಲಬೇಕು. ನಾಳೆ ಎಂಎಲ್ಗಳ ವಚ್ರ್ಯೂವಲ್ ಮೀಟಿಂಗ್ ಕರೆದಿದ್ದೇನೆ ನೀನು ಭಾಗವಹಿಸು. ಲಾಕ್ಡೌನ್ ಎಲ್ಲಾ ಮುಗಿದ ಮೇಲೆ ಬಂದು ಭೇಟಿ ಅಗಯ್ಯ ಎಂದ ಸಿದ್ದರಾಮಯ್ಯ ಹೇಳಿದ್ದಾರೆ.
ಮಸ್ಕಿಯಲ್ಲಿ ದೊಡ್ಡ ಮಟ್ಟದ ಗೆಲುವು ಸಾಧಿಸಿದ್ದೇವೆ. ಮಸ್ಕಿ ಕ್ಷೇತ್ರದ ಅಭ್ಯರ್ಥಿ ತುರುವಿಹಾಳ್ಗೆ ಕರೆ ಮಾಡಿ ಅಭಿನಂದನೆ ಹೇಳಿದ್ದೇನೆ. ಯಾರೂ ಸಂಭ್ರಮ ಮಾಡದಂತೆ ಸೂಚನೆ ನೀಡಿದ್ದೇನೆ. ಲಾಕ್ಡೌನ್ ಮುಗಿದ ನಂತರ ಬಂದು ಭೇಟಿ ಆಗುವಂತೆ ಸೂಚನೆ ಕೊಡಲಾಗಿದೆ. ಕಾರ್ಯಕರ್ತರು ಯಾರೂ ಸಂಭ್ರಮ ಮಾಡಬಾರದು ಕೋವಿಡ್ ನಿಯಮ ಪಾಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.