– ನಮ್ಮಿಬ್ಬರ ಮಧ್ಯೆ ಗೆಳತನವಿತ್ತು
– ಯುವತಿ ತಾಯಿ, ಸೋದರನ ಮೇಲೆ ಗಂಭೀರ ಆರೋಪ
ಲಕ್ನೋ: ಹತ್ರಾಸ್ ಪ್ರಕರಣದದಲ್ಲಿ ಬಂಧಿತನಾಗಿರುವ ಪ್ರಮುಖ ಆರೋಪಿ ಸಂದೀಪ್ ಎಸ್ಪಿಗೆ ಪತ್ರ ಬರೆದಿರುವ ವಿಚಾರ ಬೆಳಕಿಗೆ ಬಂದಿದೆ. ಪತ್ರದಲ್ಲಿ ತಾನು ನಿರ್ದೋಷಿಯಾಗಿದ್ದು, ನಿಷ್ಪಕ್ಷಪಾತ ತನಿಖೆ ನಡೆಯಬೇಕೆಂದು ಸಂದೀಪ್ ಒತ್ತಾಯಿಸಿದ್ದಾನೆ. ಸೆಪ್ಟೆಂಬರ್ 7ರಂದು ಜೈಲಿನಿಂದಲೇ ಹತ್ರಾಸ್ ಎಸ್ಪಿಗೆ ಪತ್ರ ಬರೆದಿರುವ ಸಂದೀಪ್, ಬಂಧಿತ ಇನ್ನುಳಿದ ಮೂವರು ಸಹ ನಿರಪರಾಧಿಗಳು. ಆಕೆಯ ತಾಯಿ ಮತ್ತು ಸೋದರನ ವಿರುದ್ಧ ಗಂಭೀರ ಆರೋಪಗಳನ್ನ ಮಾಡಿದ್ದಾನೆ.
Advertisement
ಪತ್ರದಲ್ಲಿ ಏನಿದೆ?: 19 ವರ್ಷದ ಯುವತಿ ಜೊತೆ ನನ್ನ ಸ್ನೇಹವಿತ್ತು. ಆದ್ರೆ ನಮ್ಮಿಬ್ಬರ ಸ್ನೇಹ ಕುಟುಂಬಸ್ಥರಿಗೆ ಇಷ್ಟವಿರಲಿಲ್ಲ. ಘಟನೆಯ ದಿನ ನಾನು ಸ್ಥಳದಲ್ಲಿದ್ದೆ. ಆದ್ರೆ ಯುವತಿ ತಾಯಿ ಮತ್ತು ಸೋದರ ನನ್ನನ್ನು ಮನೆಗೆ ಕಳುಹಿಸಿದರು. ನಂತರ ನನ್ನನ್ನ ಆರೋಪಿಯೆಂದು ಬಂಧಿಸಿ ಜೈಲಿಗೆ ಕರೆತರಲಾಯ್ತು. ಯುವತಿಯ ಮೇಲೆ ಆಕೆ ತಾಯಿ ಮತ್ತು ಸೋದರ ಹಲ್ಲೆ ನಡೆಸಿದ್ದರಿಂದ ಅವಳು ಸಾವನ್ನಪ್ಪಿದ್ದಾಳೆ. ನಮ್ಮ ಮೇಲೆ ಸುಳ್ಳು ಕೇಸ್ ದಾಖಲಿಸಿ ಜೈಲಿನಲ್ಲಿರಿಸಲಾಗಿದೆ.
Advertisement
Advertisement
ನಮ್ಮಿಬ್ಬರ ಮಧ್ಯೆ ಸ್ನೇಹವಿತ್ತು: ಸಾವನ್ನಪ್ಪಿರುವ ಯುವತಿ ಒಳ್ಳೆಯವಳಾಗಿದ್ದರಿಂದ ಆಕೆಯ ಜೊತೆ ನನ್ನ ಸ್ನೇಹವಿತ್ತು. ಇಬ್ಬರು ಫೋನ್ ನಲ್ಲಿ ಮಾತನಾಡುತ್ತಿದ್ದೇವು. ಹೊಲದಲ್ಲಿ ನನ್ನ ಜೊತೆಗಿನ ಸ್ನೇಹದ ವಿಚಾರವಾಗಿ ಆಕೆಯ ಮೇಲೆ ಕುಟುಂಬಸ್ಥರು ಹಲ್ಲೆ ನಡೆಸಿರುವ ವಿಚಾರ ನನಗೆ ತಿಳಿಯಿತು. ಹಲ್ಲೆ ಆರೋಪದಿಂದ ತಪ್ಪಿಸಿಕೊಳ್ಳಲು ಯುವತಿಯ ತಾಯಿ ಮತ್ತು ಸೋದರ ನಮ್ಮ ಮೇಲೆ ಸುಳ್ಳು ಆರೋಪ ಮಾಡಿದ್ದರಿಂದ ಸೆಪ್ಟೆಂಬರ್ 20ರಿಂದ ನಾವು ಜೈಲಿನಲ್ಲಿದ್ದೇವೆ. ನಿರಪರಾಧಿಗಳಾದ ನಮಗೆ ನ್ಯಾಯ ನೀಡಬೇಕೆಂದು ನಿಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇವೆ ಎಂದು ಸಂದೀಪ್ ಪತ್ರದಲ್ಲಿ ಹೇಳಿದ್ದಾನೆ. ಇನ್ನುಳಿದ ಬಂಧಿತ ರವಿ, ರಾಮು ಮತ್ತು ಲವಕುಶ್ ಅವರ ಸಹಿ ಈ ಪತ್ರದಲ್ಲಿದೆ.
Advertisement
ಎರಡು ಫೋನ್, 104 ಕಾಲ್: ಸಂತ್ರಸ್ತೆಯ ಕುಟುಂಬ ಮತ್ತು ಆರೋಪಿ ಸಂದೀಪ್ ಫೋನ್ ಟ್ರ್ಯಾಕ್ ಮಾಡಿರುವ ಪೊಲೀಸರು, ಆರೋಪಿಯು ಯುವತಿಯೊಂದಿಗೆ ನಿರಂತರವಾಗಿ ದೂರವಾಣಿ ಸಂಪರ್ಕದಲ್ಲಿದ್ದ. ಸಂತ್ರಸ್ತೆಯ ಸಹೋದರನ ಹೆಸರಿನಲ್ಲಿ ಸಂದೀಪ್ ಗೆ ಒಂದೇ ಫೋನ್ ನಂಬರಿನಿಂದ ನಿಯಮಿತವಾಗಿ ಕರೆಗಳು ಬರುತ್ತಿದ್ದವು. ಈ ದೂರವಾಣಿ ಸಂಭಾಷಣೆಗಳು 2019 ಅಕ್ಟೋಬರ್ 13ರಿಂದ ಪ್ರಾರಂಭವಾಗಿವೆ. ಸಂತ್ರಸ್ತೆ ನೆಲೆಸಿದ್ದ ಹಳ್ಳಿ ಬೂಲ್ ಗಾಹಿಯಿಂದ ಕೇವಲ 2 ಕಿ.ಮೀ ದೂರದಲ್ಲಿರುವ ಚಂದಪಾ ಪ್ರದೇಶದಲ್ಲಿರುವ ಸೆಲ್ ಟವರ್ ಗಳಿಂದ ಹೆಚ್ಚಿನ ಕರೆಗಳನ್ನು ಮಾಡಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ. ಇದನ್ನೂ ಓದಿ: ಹತ್ರಾಸ್ ಕೇಸ್ – ಸಂಚಲನ ಸೃಷ್ಟಿಸಿದ್ದ ವೆಬ್ಸೈಟ್ ದಿಢೀರ್ ಬಂದ್
ಎರಡು ಫೋನ್ ನಂಬರ್ ಗಳ ನಡುವೆ 62 ಔಟ್ ಗೋಯಿಂಗ್ ಮತ್ತು 42 ಇನ್ ಕಮಿಂಗ್ ಕಾಲ್ ಗಳು ಬಂದಿದ್ದು, ಒಟ್ಟು 104 ಬಾರಿ ಸಂಪರ್ಕಸಿರುವುದು ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತೆ ಹಾಗೂ ಆರೋಪಿ ನಡುವೆ ನಿರಂತರ ಸಂಪರ್ಕ ಇತ್ತು ಎಂಬುದನ್ನು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಹತ್ರಾಸ್ ಯುವತಿ ಮೇಲೆ ಅತ್ಯಾಚಾರವಾಗಿಲ್ಲ – ಶಾಕಿಂಗ್ ಹೇಳಿಕೆ ನೀಡಿದ ಐಜಿ
ಏನಿದು ಪ್ರಕರಣ?: ಸೆಪ್ಟೆಂಬರ್ 14ರಂದು ತನ್ನ ತಾಯಿಯೊಂದಿಗೆ ಹುಲ್ಲು ತರಲೆಂದು ಯುವತಿ ಜಮೀನಿಗೆ ತೆರಳಿದ್ದಳು. ಈ ವೇಳೆ ನಾಲ್ವರು ಕಾಮಪಿಶಾಚಿಗಳು ಆಕೆಯನ್ನು ಎಳೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದರು. ಅಲ್ಲದೇ ಆಕೆಯ ನಾಲಿಗೆಯನ್ನು ಕತ್ತರಿಸಿ, ಬೆನ್ನು ಮೂಳೆ, ಕತ್ತಿಗೆ ಗಂಭೀರವಾಗಿ ಹಾನಿ ಮಾಡಿದ್ದರು. ಕಾಮುಕರ ಅಟ್ಟಹಾಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಪಡೆಯುತ್ತಿದ್ದಂತೆಯೇ ಘಟನೆ ನಡೆದು ಎರಡು ವಾರಗಳ ನಂತರ ಸೆ.29ರಂದು ಮೃತಪಟ್ಟಿದ್ದಳು. ಇದನ್ನೂ ಓದಿ: ಕೊನೆ ಬಾರಿ ಮಗಳ ಮುಖ ತೋರಿಸಲಿಲ್ಲ: ಹತ್ರಾಸ್ ಸಂತ್ರಸ್ತೆ ತಾಯಿ
ಯುವತಿ ಸಾವನ್ನಪ್ಪಿದ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ದೇಶದೆಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಆರೋಪಿಗಳನ್ನು ನೇಣಿಗೇರಿಸುವಂತೆ ದೇಶದ ಮೂಲೆಮೂಲೆಯಿಂದಲೂ ಕೂಗು ಕೇಳಿ ಬಂದಿದೆ. ಈ ಮಧ್ಯೆ ಉತ್ತರಪ್ರದೇಶದ ಪೊಲೀಸರು ಯುವತಿಯ ಕುಟುಂಬಕ್ಕೆ ತಿಳಿಯದಂತೆ ಮೃತದೇಹವನ್ನು ಅಸ್ಪತ್ರೆಯಿಂದ ಶಿಫ್ಟ್ ಮಾಡಿದ್ದಾರೆ ಎಂದು ಸಹೋದರ ಗಂಭೀರವಾಗಿ ಆರೋಪ ಮಾಡಿದ್ದರು. ಯುವತಿಯ ತಂದೆ ಹಾಗೂ ಸಹೋದರ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ನಮಗೆ ಗೊತ್ತಾಗಂದೆ ಪೊಲೀಸರು ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಮೃತದೇಹವನ್ನು ಸಾಗಿಸಿದ್ದಾರೆ ಎಂದು ಕೂಡ ಸಹೋದರ ದೂರಿದ್ದರು. ಇದನ್ನೂ ಓದಿ: ಹತ್ರಾಸ್ ಆರೋಪಿಗಳಿರೋ ಜೈಲಿಗೆ ಬಿಜೆಪಿ ಸಂಸದ ಭೇಟಿ